ಶ್ರೀರಾಮನ ಭಾವಚಿತ್ರದ ಮೆರವಣಿಗೆ ಅದ್ದೂರಿ

web3
ಹಿರೇಬಾಗೇವಾಡಿಯಲ್ಲಿ ರಾಮೋತ್ಸವ ಆಚರಿಸಲಾಯಿತು. ಸಿದ್ದಪ್ಪ ಹುಕ್ಕೇರಿ, ಮಂಜುನಾಥ ಧರೆಣ್ಣವರ, ಸುಜಾತಾ ಬೋಡಕಿ, ಚನ್ನಮ್ಮ ಹುಕ್ಕೇರಿ ಇತರರಿದ್ದರು.
Published on

ಹಿರೇಬಾಗೇವಾಡಿ: ಅಯೋಧ್ಯೆ ಶ್ರೀರಾಮ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ನಿಮಿತ್ತ ಸೋಮವಾರ ಹಿರೇಬಾಗೇವಾಡಿಯ ವಿವಿಧೆಡೆ ಸೋಮವಾರ ರಾಮಭಕ್ತರಿಂದ ಸಾರ್ವಜನಿಕ ಪೂಜೆ, ಮೆರವಣಿಗೆ, ಪ್ರಸಾದ ವಿತರಣೆ ಕಾರ್ಯಕ್ರಮಗಳು ಜರುಗಿದವು.

ಇಲ್ಲಿನ ಮಾರುತಿ ಮಂದಿರದಲ್ಲಿ ರಾಮನ ಮೂರ್ತಿಗೆ ಪೂಜೆ ನೆರವೇರಿಸಿ ಪ್ರಸಾದ ವಿತರಿಸಲಾಯಿತು. ಗಾಂಧಿನಗರದಲ್ಲಿ ಶ್ರೀರಾಮನಿಗೆ ಸುಮಂಗಲೆಯರಿಂದ ಮಂಗಳಾರತಿ, ಪೂಜೆ ಸಲ್ಲಿಸಿ ಪ್ರಸಾದ ವಿತರಿಸಲಾಯಿತು.

ಬಸವನಗರದಲ್ಲಿ ಶ್ರೀರಾಮನ ಭಾವಚಿತ್ರ ಮೆರವಣಿಗೆ ಮಾಡಲಾಯಿತು. ಶಿವಾಲಯದಲ್ಲಿ ಹೋಮ-ಹವನ ನೆರವೇರಿಸಲಾಯಿತು. ಸಿದ್ದಪ್ಪ ಹುಕ್ಕೇರಿ, ಮಂಜುನಾಥ ಧರೆಣ್ಣವರ, ಪ್ರಕಾಶ ಜಪ್ತಿ, ಬಸವರಾಜ ಅರಳಿಕಟ್ಟಿ, ದಯಾನಂದ ಹುಲಮನಿ, ಮಲ್ಲಿಕಾರ್ಜುನ ಗಟಿಗೆಣ್ಣವರ, ರಾಜು ಅರಳಿಕಟ್ಟಿ, ನಾಗೇಶ ಇಟಗಿ, ಆನಂದ ನಂದಿ, ಸುಜಾತಾ ಬೋಡಕಿ, ಚನ್ನಮ್ಮ ಹುಕ್ಕೇರಿ, ನಾಗಮ್ಮ ಜೇವೂರ, ಮಹಾದೇವಿ ಕುಂಬಾರ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net