

ವಿಜಯವಾಣಿ ಸುದ್ದಿಜಾಲ ಧಾರವಾಡ
ತಾಲೂಕಿನ ರಾಮಾಪೂರ ಗ್ರಾಮದಲ್ಲಿ ಶ್ರೀ ಬಸವೇಶ್ವರ (ನಂದಿ ಬಸವಣ್ಣ) ರಥೋತ್ಸವ ಶ್ರದ್ಧಾ ಭಕ್ತಿಯಿಂದ ಮಂಗಳವಾರ ಜರುಗಿತು.
ವೇದಮೂರ್ತಿ ಬಸಯ್ಯ ಹಿರೇಮಠ ನೇತೃತ್ವದಲ್ಲಿ ಬೆಳಗ್ಗೆ ಬಸವೇಶ್ವರ ಮೂರ್ತಿಗೆ ರುದ್ರಾಭಿಷೇಕ ಸೇರಿ ಸಕಲ ಧಾರ್ಮಿಕ ವಿಽವಿಧಾನಗಳು ಜರುಗಿದವು. ಗ್ರಾಮದ ಎಲ್ಲ ದೇವರಿಗೆ ಉಡಿ ತುಂಬಲಾಯಿತು. ಮಧ್ಯಾಹ್ನ ಸಾಮೂಹಿಕ ವಿವಾಹ ಬಳಿಕ ಪ್ರಸಾದ ವಿತರಣೆ ಜರುಗಿತು. ನಂತರ ಸಕಲ ವಾದ್ಯ ಮೇಳಗಳ ಸಹಿತ ಬಸವೇಶ್ವರ ರಥೋತ್ಸವ ನಡೆಯಿತು. ಟ್ರಸ್ಟ್ ಕಮೀಟಿ ಪದಾಧಿಕಾರಿಗಳು, ಸದಸ್ಯರು, ರಾಮಾಪೂರ ಹಾಗೂ ಸುತ್ತಲಿನ ಗ್ರಾಮಗಳ ಭಕ್ತರು ರಥೋತ್ಸವದಲ್ಲಿ ಭಾಗವಹಿಸಿದ್ದರು.