ರಾಮಾಪೂರ ಬಸವೇಶ್ವರ ಜಾತ್ರೆ

27 Dwd 4
Published on

ವಿಜಯವಾಣಿ ಸುದ್ದಿಜಾಲ ಧಾರವಾಡ

ತಾಲೂಕಿನ ರಾಮಾಪೂರ ಗ್ರಾಮದ ಶ್ರೀ ಬಸವೇಶ್ವರ (ನಂದಿ ಬಸವಣ್ಣ) ಜಾತ್ರಾ ಮಹೋತ್ಸವವು ಫೆ. 28ರಿಂದ ಮಾ. 8ರವರೆಗೆ ನಡೆಯಲಿದೆ. ಪ್ರತಿದಿನ ಬೆಳಗ್ಗೆ 5 ಗಂಟೆಗೆ ರುದ್ರಾಭಿಷೇಕ ಮತ್ತು ಇತರ ಧಾರ್ಮಿಕ ಕಾರ್ಯಕ್ರಮಗಳು ಜರುಗಲಿವೆ. ಪ್ರತಿದಿನ ಸಂಜೆ 6ಕ್ಕೆ ಗಂದಿಗವಾಡ ರಾಜಗುರು ಹಿರೇಮಠದ ಶ್ರೀ ಮಲ್ಲಿಕಾರ್ಜುನ ಮಹಾಸ್ವಾಮೀಜಿ ಸಾನ್ನಿಧ್ಯದಲ್ಲಿ ಪ್ರವಚನ ನಡೆಯಲಿದೆ. - 28ರಂದು ಬೆಳಗ್ಗೆ 5ಕ್ಕೆ ರುದ್ರಾಭಿಷೇಕ ಮತ್ತು ರಥವನ್ನು ಹೊರಗೆ ತೆಗೆದು ಜಾತ್ರೆಗೆ ಚಾಲನೆ ನೀಡಲಾಗುವುದು. ಮಾ. 4ರಂದು ಬೆಳಗ್ಗೆ ಧಾರ್ಮಿಕ ಕಾರ್ಯಕ್ರಮಗಳು ಮತ್ತು ಮಧ್ಯಾಹ್ನ 12.15ಕ್ಕೆ ಸಾಮೂಹಿಕ ವಿವಾಹ ನಂತರ ಪ್ರಸಾದ ವಿತರಣೆ ನಡೆಯಲಿದೆ. ಗ್ರಾಮದ ಎಲ್ಲ ದೇವರಿಗೆ ಉಡಿ ತುಂಬುವುದು, ಸಂಜೆ 5 ಗಂಟೆಗೆ ವಿವಿಧ ವಾದ್ಯ ಮೇಳಗಳು ಮತ್ತು ಭಕ್ತರ ಸಂಭ್ರಮದೊAದಿಗೆ ರಥೋತ್ಸವ ಜರುಗಲಿದೆ. ಮಾ. 8ರಂದು ಬೆಳಗ್ಗೆ 8 ಗಂಟೆಗೆ ಕಳಸಾವರೋಹಣದೊಂದಿಗೆ ಜಾತ್ರಾ ಮಹೋತ್ಸವ ಸಂಪನ್ನವಾಗಲಿದೆ ಎಂದು ಬಸವೇಶ್ವರ ಟ್ರಸ್ಟ್ ಕಮೀಟಿ ಪ್ರಕಟಣೆಯಲ್ಲಿ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net