

ಮುಂಡರಗಿ: ರಾಜೀನಾಮೆಯಿಂದಾಗಿ ತೆರವಾಗಿದ್ದ ತಾಲೂಕಿನ ಬಾಗೇವಾಡಿ ಗ್ರಾಪಂ ಅಧ್ಯಕ್ಷ ಸ್ಥಾನಕ್ಕೆ ರಾಮಪ್ಪ ಬಂಡಿವಡ್ಡರ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಮಲ್ಲಿಕಾರ್ಜುನ ಹಣಜಿ ಅವರು ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರಿಂದಾಗಿ ತೆರವಾಗಿದ್ದ ಸ್ಥಾನಕ್ಕೆ ಮಂಗಳವಾರ ಚುನಾವಣೆ ನಿಗದಿಯಾಗಿತ್ತು. ರಾಮಪ್ಪ ಬಂಡಿವಡ್ಡರ ಒಬ್ಬರೇ ನಾಮಪತ್ರ ಸಲ್ಲಿಸಿದ್ದರು. ಹೀಗಾಗಿ ಅವಿರೋಧವಾಗಿ ಆಯ್ಕೆಗೊಂಡಿದ್ದಾರೆ ಎಂದು ಚುನಾವಣೆ ಅಧಿಕಾರಿ ವಿಶ್ವನಾಥ ಹೊಸಮನಿ ಅವರು ಘೋಷಿಸಿದರು. ಪಿಡಿಒ ಸಂತೋಷ ಮೇಟಿ ಇದ್ದರು.
ಸಂಭ್ರಮ: ರಾಮಪ್ಪ ಬಂಡಿವಡ್ಡರ ಬೆಂಬಲಿಗರು ಸಂಭ್ರಮಿಸಿದರು. ಗ್ರಾ.ಪಂ. ಉಪಾಧ್ಯಕ್ಷೆ ತಿಪ್ಪಮ್ಮ ತಳವಾರ, ಸದಸ್ಯರಾದ ಮಲ್ಲಿಕಾರ್ಜುನ ಹಣಜಿ, ಶಕುಂತಲಾ ಪಾಟೀಲ, ಪ್ರಕಾಶ ಕೊಡ್ಲಿ, ರೇಣುಕಾ ಲಮಾಣಿ, ಪ್ರಮುಖರಾದ ಡಾ.ಕುಮಾರಸ್ವಾಮಿ ಹಿರೇಮಠ, ಸಿದೇಶಪ್ಪ ತಳವಾರ, ಹನಮಂತ ದಾಸರ, ನಾಗರಾಜ ಹೊಸೂರ, ಈರಣ್ಣ ಇಟಗಿ, ಮೈಲಾರಪ್ಪ, ಶರಣು ತಳವಾರ, ಸತೀಶ, ಹನಮಂತ ತಳವಾರ, ಪಾಲಾಕ್ಷಗೌಡ ಪಾಟೀಲ, ಪರಶುರಾಮ ಕರಡಿಕೊಳ್ಳ, ಚಿನ್ನಪ್ಪ ವಡ್ಡಟ್ಟಿ ಇತರರು ಇದ್ದರು.