

ಶಿವಮೊಗ್ಗ: ನಾಯಕ ನಟ ಕೃಷ್ಣ ಅಜಯ್‌ರಾವ್ ಅಭಿನಯದ 26ನೇ ಸಿನಿಮಾ ‘ಕೃಷ್ಣ ಟಾಕೀಸ್’ ಏ.16ರಂದು ತೆರೆ ಕಾಣಲಿದೆ. ಈ ಚಿತ್ರದಲ್ಲಿ ಶಿವಮೊಗ್ಗದ ಮೂವರು ರಂಗಭೂಮಿ ಕಲಾವಿದರು ಗಮನಾರ್ಹ ಪಾತ್ರದಲ್ಲಿ ಅಭಿನಯಿಸಿರುವುದು ವಿಶೇಷ.
ರಂಗಭೂಮಿ ಕಲಾವಿದರಾದ ವೈದ್ಯ, ವಿಜಯಲಕ್ಷ್ಮೀ ಹಾಗೂ ರಾಮಣ್ಣ ಕೃಷ್ಣ ಟಾಕೀಸ್‌ನಲ್ಲಿ ನಟಿಸಿದ್ದಾರೆ. ಶಿವಮೊಗ್ಗದ ಭಾರತ್ ಸಿನಿಮಾಸ್ ಹಾಗೂ ವೀರಭದ್ರೇಶ್ವರ ಚಿತ್ರ ಮಂದಿರದಲ್ಲಿ ಸಿನಿಮಾ ಪ್ರದರ್ಶನಗೊಳ್ಳಲಿದೆ.
ಕೃಷ್ಣ ಟಾಕೀಸ್ ಕುರಿತು ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ವೈದ್ಯ, ಸಸ್ಪೆನ್ಸ್, ಈ ಸಿನಿಮಾಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶಿಸಿರುವ ವಿಜಯಾನಂದ್, ಈ ಹಿಂದೆ ತಮ್ಮ ಮೂಲ ಹೆಸರಾದ ಆನಂದ್ ಪ್ರಿಯಾ ಹೆಸರಿನಲ್ಲಿ ಕಾಶಿನಾಥ್ ಮುಖ್ಯಭೂಮಿಕೆಯ ’ಓಳ್ ಮುನ್ಸಾಮಿ’ ಚಿತ್ರ ನಿರ್ದೇಶಿಸಿದ್ದರು. ನಟ ಗೋವಿಂದ್‌ರಾಜ್ ಆಲೂರು ಚಿತ್ರ ನಿರ್ಮಿಸಿದ್ದಾರೆ. ಚಿತ್ರಕ್ಕೆ ಶ್ರೀಧರ್ ವಿ.ಸಂಭ್ರಮ್ ಸಂಗೀತವಿದೆ. ಪ್ರಮೋದ್ ಹಾಗೂ ಆನಂದ ಪ್ರಿಯಾ ಸಾಹಿತ್ಯವಿದೆ ಎಂದರು.