ರಾಮಾಂಜನೇಯ ಟ್ರೋಫಿ ಹಗ್ಗಜಗ್ಗಾಟ ಪಂದ್ಯ

New Project (2)
Published on

ವಿಜಯವಾಣಿ ಸುದ್ದಿಜಾಲ ಮೂಡುಬಿದಿರೆ

ಇಲ್ಲಿನ ಶ್ರೀ ರಾಮಾಂಜನೇಯ ಮಲ್ಟಿ ಜಿಮ್ ಪ್ರಾಯೋಜಕತ್ವದಲ್ಲಿ ‘ರಾಮಾಂಜನೇಯ ಟ್ರೋಫಿ ಮೂಡುಬಿದಿರೆ ಹಗ್ಗಜಗ್ಗಾಟ’-2025 ಪೊನ್ನೆಚ್ಚಾರಿ ಶ್ರೀ ಲಕ್ಷ್ಮೀ ವೆಂಕಟರಮಣ ದೇವಳದ ಆವರಣದಲ್ಲಿ ನಡೆಯಿತು.

ಮುಕ್ತ ವಿಭಾಗದಲ್ಲಿ ಪವರ್ ಫ್ರೆಂಡ್ಸ್-ಪ್ರಥಮ, ವಿಶ್ವ ತುಳುವೆರ್-ದ್ವಿತೀಯ, ಪಿಎಫ್‌ಸಿ ಕಾವೂರ್-ತೃತೀಯ ಹಾಗೂ ಪವರ್ ಫ್ರೆಂಡ್ಸ್ ಎ ತಂಡ ಚತುರ್ಥ ಸ್ಥಾನ ಪಡೆಯಿತು. ಮಹಿಳಾ ವಿಭಾಗದಲ್ಲಿ ಟೀಮ್ ರೋಲೆಕ್ಸ್-ಪ್ರಥಮ, ಉಡುಪಿ ಫ್ರೆಂಡ್ಸ್ ಎ-ದ್ವಿತೀಯ, ಆಂಜನೇಯ ಫ್ರೆಂಡ್ಸ್-ತೃತೀಯ ಹಾಗೂ ವಿಶ್ವ ತುಳುವೆರ್ ಚತುರ್ಥ ಬಹುಮಾನ ಪಡೆಯಿತು. 650 ಕೆ.ಜಿ ವಿಭಾಗದಲ್ಲಿ ಕೊಡ್ಪಲತಡ್ಕ ಎ-ಪ್ರಥಮ, ವಿಶ್ವ ತುಳುವೆರ್ ದ್ವಿತೀಯ, ಜಟಾಯು ವಿಟ್ಲ-ಬಂಟ್ವಾಳ-ತೃತೀಯ ಹಾಗೂ ಬ್ರಹ್ಮಲಿಂಗೇಶ್ವರ ಮರೋಡಿ ಚತುರ್ಥ ಸ್ಥಾನ ಪಡೆಯಿತು.

ಸ್ಪರ್ಧೆಯನ್ನು ಚೌಟರ ಅರಮನೆಯ ಕುಲದೀಪ ಎಂ. ಕಾರ್ಯಕ್ರಮ ಉದ್ಘಾಟಿಸಿದರು. ಶಾಸಕ ಉಮಾನಾಥ ಕೋಟ್ಯಾನ್ ಅಧ್ಯಕ್ಷತೆ ವಹಿಸಿದರು. ಆಳ್ವಾಸ್ ಸಂಸ್ಥೆಯ ಟ್ರಸ್ಟಿ ವಿವೇಕ್ ಆಳ್ವ ಕ್ರೀಡಾಕೂಟ ಉದ್ಘಾಟಿಸಿದರು. ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಿಥುನ್ ರೈ, ಮೂಡುಬಿದಿರೆ ಪೊಲೀಸ್ ನಿರೀಕ್ಷಕ ಸಂದೇಶ್ ಪಿ.ಜಿ., ಬಿಜೆಪಿ ದ.ಕ. ನಿಕಟಪೂರ್ವ ಅಧ್ಯಕ್ಷ ಸುದರ್ಶನ್ ಎಂ., ಎಸ್.ಎಂ.ಎಚ್ ವಿದ್ಯಾಗಿರಿ ಅಧ್ಯಕ್ಷ ಗಂಗಾಧರ ಶೆಟ್ಟಿ, ಬಿಜೆಪಿ ಮಂಡಲ ಅಧ್ಯಕ್ಷ ದಿನೇಶ್ ಪುತ್ರನ್, ಪ್ರಧಾನ ಕಾರ್ಯದರ್ಶಿ ರಂಜಿತ್ ಪೂಜಾರಿ, ಬಿಜೆಪಿ ಮುಖಂಡರಾದ ನಂದನ್ ಮಲ್ಯ, ಅಶ್ವತ್ಥ್ ಪಣಪಿಲ, ಉದ್ಯಮಿಗಳಾದ ಕೆ.ಶ್ರೀಪತಿ ಭಟ್, ಅಶ್ವಿನ್ ಜೆ.ಪಿರೇರ, ಅಬುಅಲಾ ಪುತ್ತಿಗೆ, ಅಜಯ್ ಶೆಟ್ಟಿ, ಅಶೋಕ್ ಕಾಮತ್, ಚಂದ್ರಕಾಂತ್ ಭಟ್ ಭಾಗವಹಿಸಿದರು. ಹಗ್ಗಜಗ್ಗಾಟ ತರಬೇತುದಾರ ಪಾರ್ಶ್ವನಾಥ ಜೈನ್, ಅಂತಾರಾಷ್ಟ್ರೀಯ ದೇಹದಾರ್ಢ್ಯಪಟು ರೋಶನ್ ಫೆರ‌್ರಾವ್ ಹಾಗೂ ಅಂತಾರಾಷ್ಟ್ರೀಯ ಪವರ್‌ಲಿಫ್ಟರ್ ಕೀರ್ತನ್ ಕಟೀಲ್ ಅವರನ್ನು ಸನ್ಮಾನಿಸಲಾಯಿತು.

ಸಮಾರೋಪ ಸಮಾರಂಭದಲ್ಲಿ ಪುರಸಭೆ ಉಪಾಧ್ಯಕ್ಷ ನಾಗರಾಜ ಪೂಜಾರಿ, ಸದಸ್ಯ ಸುರೇಶ್ ಪ್ರಭು, ಮುಡಾ ಅಧ್ಯಕ್ಷ ಹರ್ಷವರ್ಧನ್ ಪಡಿವಾಳ್, ವೈಬ್ರೆಂಟ್ ಕಾಲೇಜಿನ ಟ್ರಸ್ಟಿ ಚಂದ್ರಶೇಖರ್ ರಾಜೇ ಅರಸ್, ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಕುಮಾರ್ ಪ್ರಸಾದ್, ಟಿ.ರಾಘವ್ ರಾವ್, ಉದ್ಯಮಿಗಳಾದ ಪೂರ್ಣಚಂದ್ರ ಜೈನ್, ರಾಜೇಶ್ ಕೋಟೆಗಾರ್, ರವಿ ಪೂಜಾರಿ, ಅಶ್ವಿತ್, ಯುವವಾಹಿನಿ ಅಧ್ಯಕ್ಷ ಮುರಳೀಧರ್ ಕೋಟ್ಯಾನ್, ಜವನೆರ್ ಬೆದ್ರ ಫೌಂಡೇಶನ್ ಅಧ್ಯಕ್ಷ ಅಮರ್ ಕೋಟೆ, ಪವರ್ ಫ್ರೆಂಡ್ಸ್ ಅಧ್ಯಕ್ಷ ವಿನಯ್ ಕುಮಾರ್, ಸರ್ವೋದಯ ಫ್ರೆಂಡ್ಸ್ ಅಧ್ಯಕ್ಷ ಗುರು ಒಂಟಿಕಟ್ಟೆ ಉಪಸ್ಥಿತರಿದ್ದರು. ರಾಮಾಂಜನೇಯ ಸಂಸ್ಥೆ ಮುಖ್ಯಸ್ಥ ನಾರಾಯಣ ಪಡುಮಲೆ ನೇತೃತ್ವದಲ್ಲಿ ಸ್ಪರ್ಧೆ ಆಯೋಜಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net