ಉದ್ಯೋಗ ಕ್ಷೇತ್ರದಲ್ಲಿ ಮೀಸಲಾತಿ ಹೆಚ್ಚಿಸಿ: ಎಸ್​ಸಿ, ಎಸ್​ಟಿ ಸಂಟನೆಗಳ ಒಕ್ಕೂಟ ಪಟ್ಟು

1
Published on

ರಾಮನಗರ: ಪರಿಶಿಷ್ಟ ಜಾತಿ ಮತ್ತು ಪಂಗಡ ಸಮುದಾಯಕ್ಕೆ ಶಿಕ್ಷಣ ಹಾಗೂ ಸಾರ್ವಜನಿಕ ಉದ್ಯೋಗ ಕ್ಷೇತ್ರದಲ್ಲಿ ಮೀಸಲಾತಿ ಹೆಚ್ಚಿಸುವಂತೆ ನ್ಯಾಯಮೂರ್ತಿ ನಾಗಮೋಹನ್​ ದಾಸ್​ ಆಯೋಗ ನೀಡಿರುವ ವರದಿ ಜಾರಿಗೆ ಆಗ್ರಹಿಸಿ ಕರ್ನಾಟಕ ಸ್ವಾಭಿಮಾನಿ ಎಸ್​ಸಿ/ಎಸ್​ಟಿ ಸಂಟನೆಗಳ ಒಕ್ಕೂಟ, ಮೀಸಲಾತಿ ಹೆಚ್ಚಳ ಹೋರಾಟ ಕ್ರಿಯಾಶೀಲ ಸಮಿತಿ ಹಾಗೂ ವಿವಿಧ ದಲಿತ ಪರ ಸಂಟನೆಗಳು ಸೋಮವಾರ ಪ್ರತಿಭಟನೆ ನಡೆಸಿದವು.


ನಗರದ ವಿಜಯನಗರ ಆರ್ಚ್​ ಬಳಿಯಿಂದ ಜಿಲ್ಲಾಧಿಕಾರಿ ಕಚೇರಿವರೆಗೂ ಪ್ರತಿಭಟನಾ ಮೆರವಣಿಗೆ ನಡೆಸಿದ ಪ್ರತಿಭಟನಾಕಾರರು, ರಾಜ್ಯ ಸರ್ಕಾರದ ವಿರುದ್ಧ ೂಷಣೆ ಕೂಗಿ, ನ್ಯಾಯಮೂರ್ತಿ ನಾಗಮೋಹನ ದಾಸ್​ ವರದಿ ಅನುಷ್ಠಾನಗೊಳಿಸುವಂತೆ ಆಗ್ರಹಿಸಿದರು. ವರದಿ ಅನುಷ್ಠಾನಕ್ಕೆ ಆಗ್ರಹಿಸಿ ಕಳೆದ ಫೆಬ್ರವರಿಯಿಂದ ವಾಲ್ಮೀಕಿ ಗುರುಪೀಠದ ಪೀಠಾಧಿಪತಿ ಶ್ರೀ ವಾಲ್ಮೀಕಿ ಪ್ರಸನ್ನಾನಂದಪುರ ಸ್ವಾಮೀಜಿ ಅರ್ನಿದಿಷ್ಟಾವಧಿ ಹೋರಾಟ ನಡೆಸುತ್ತಿದ್ದಾರೆ. ಇವರಿಗೆ ರಾಜ್ಯದ ಪರಿಶಿಷ್ಟ ಜಾತಿ ಹಾಗೂ ಜನಾಂಗದ ವಿವಿಧ ಮಠಾಧೀಶರು ದಲಿತ ಪರ ಸಂಟನೆಗಳು ಬೆಂಬಲ ಸೂಚಿಸಿವೆ. ಸ್ವಾಮೀಜಿ ಅವರ ಹೋರಾಟ ಸೋಮವಾರಕ್ಕೆ 152 ದಿನ ಪೂರ್ಣಗೊಂಡಿದೆ. ಆದರೂ, ಸರ್ಕಾರ ನಿರ್ಧಾರ ಪ್ರಕಟಿಸಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.


ಪರಿಶಿಷ್ಟ ಜಾತಿಯ ಶೇ.15ರಷ್ಟು ಮೀಸಲಾತಿಯನ್ನು ಶೇ.17ಕ್ಕೆ ಹೆಚ್ಚಿಸಬೇಕು. ಜತೆಗೆ ಪರಿಶಿಷ್ಟ ಪಂಗಡದ ಶೇ.3ರಷ್ಟು ಮೀಸಲಾತಿಯನ್ನು ಶೇ.7ಕ್ಕೆ ಏರಿಕೆ ಮಾಡಬೇಕು. ಶಿಕ್ಷಣ ಹಾಗೂ ಸಾರ್ವಜನಿಕ ಉದ್ಯೋಗ ರಂಗದಲ್ಲಿ ಮೀಸಲಾತಿಯನ್ನು ಪ್ರಕಟಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.ಬೆಂಗಳೂರಿನ ಫ್ರೀಡಂ ಪಾರ್ಕ್​ನಲ್ಲಿ ಪ್ರಸನ್ನಾನಂದಪುರಿ ಸ್ವಾಮೀಜಿ ಕೈಗೊಂಡಿರುವ ಅರ್ನಿದಿಷ್ಟವಾದಿ ಹೋರಾಟಕ್ಕೆ ಜಿಲ್ಲೆಯ ವಿವಿಧ ದಲಿತಪರ ಸಂಟನೆಗಳ ಮುಖಂಡರು ಹಾಗೂ ಕಾರ್ಯಕರ್ತರು ಬೆಂಬಲ ನೀಡುವುದಾಗಿ ೂಷಣೆ ಮಾಡಿದರು. ಈ ವೇಳೆ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಯಿತು. ಪ್ರತಿಭಟನೆಯಲ್ಲಿ ಗೊಲ್ಲರದೊಡ್ಡಿ ವಾಸು, ಸಮತಾ ಸೈನಿಕ ದಳದ ಡಾ. ಜಿ. ಗೋವಿಂದಯ್ಯ, ವಿವಿಧ ಸಂಟನೆಗಳ ಮುಖಂಡರಾದ ಶಿವಕುಮಾರಸ್ವಾಮಿ, ಜಗದೀಶ್​, ಕೋಟೆ ಕುಮಾರ್​, ಅಶೋಕ್​, ಬಿಎಸ್​ಪಿ ನಾಗೇಶ್​, ಹರೀಶ್​, ವೆಂಕಟೇಶ್​, ಅಂದಾನಪ್ಪ, ಮುರುಗೇಶ್​ ಮುಂತಾದವರು ಇದ್ದರು.

ಮೀಸಲಾತಿಯಿಂದ ಆರ್ಥಿಕ ಅಭಿವೃದ್ಧಿ: ಜಾತಿ ವ್ಯವಸ್ಥೆಯಿಂದಾಗಿ ಎಸ್​ಸಿ,ಎಸ್​ಟಿಗಳಿಗೆ ಯಾವುದೇ ಉನ್ನತ ಸಾಮಾಜಿಕ ಬೆಂಬಲ ಇಲ್ಲದಂತೆ ಆಗಿದೆ. ಮೀಸಲಾತಿಯಿಂದ ಉನ್ನತ ಶಿಕ್ಷಣ ಹಾಗೂ ಅಧಿಕಾರ ಪಡೆದುಕೊಳ್ಳುವಂತೆ ಆಗಿದೆ. ಈ ಕಾರಣದಿಂದಾಗಿ ಆರ್ಥಿಕವಾಗಿ ಅಭಿವೃದ್ಧಿ ಹೊಂದಲು ಸಾಧ್ಯವಾಗಿದೆ. ಇಂತಹ ಪರಿವರ್ತನೆ ಸಹಿಸಲಾಗದ ಮೂಲಭೂತವಾದಿಗಳು ಆರಂಭದಿಂದಲೂ ಮೀಸಲಾತಿಯನ್ನು ವಿರೋಧಿಸುತ್ತಲೇ ಬರುತ್ತಿದ್ದಾರೆ. ಜತೆಗೆ, ಮೀಸಲಾತಿ ಹೆಚ್ಚಳ ಮಾಡುವ ಸಂಬಂಧ ಹೋರಾಟ ಮಾಡುವುದು ಅನಿವಾರ್ಯವಾಗಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net