ಹೆಚ್ಚು ಹಣದ ಆಮಿಷ, ಗೃಹಿಣಿಗೆ 1.25 ಲಕ್ಷ ರೂ. ವಂಚನೆ

Cyber Crime
Published on

2000 ರೂ. ಪಡೆದು 2800 ರೂ. ನೀಡಿ ನಂಬಿಕೆ ಗಳಿಸಿದ್ದ ಕಂಪನಿ

ಸೆನ್ ಠಾಣೆಯಲ್ಲಿ ದೂರು


ರಾಮನಗರ: ಷೇರು ಮಾರುಕಟ್ಟೆಯಲ್ಲಿ ಹಣ ಹೂಡಿಕೆ ಮಾಡಿದರೆ ಹೆಚ್ಚು ಲಾಭ ಗಳಿಸಬಹುದು ಎಂದು ನಂಬಿಸಿ ನಂತರ ಹೆಚ್ಚಿಗೆ ಹಣ ಪಡೆದು ಆನ್‌ಲೈನ್ ವಂಚನೆ ಮಾಡಿರುವ ಪ್ರಕರಣ ಸೆನ್ ಠಾಣೆಯಲ್ಲಿ ಸೋಮವಾರ ದಾಖಲಾಗಿದೆ.

ರಾಮನಗರದ ಪ್ರಿಯಾ ಎಂಬಾಕೆಗೆ ಕಳೆದ ಕೆಲವು ದಿನಗಳ ಹಿಂದೆ ಷೇರು ಮಾರುಕಟ್ಟೆಯಲ್ಲಿ ಹಣ ಹೂಡಿದರೆ ಹೆಚ್ಚಿಗೆ ಹಣ ಗಳಿಸಬಹುದು ಎಂಬ ವಾಟ್ಸ್ ಆ್ಯಪ್ ಸಂದೇಶ ಬಂದಿತ್ತು. ಅಲ್ಲದೆ, ಮೊದಲಿಗೆ 2000 ರೂ.ಗಳನ್ನು ಹಾಕಿಸಿಕೊಂಡು ನಂತರ 2800 ರೂ.ಗಳನ್ನು ಹಿಂದಿರುಗಿಸಿ ವಂಚಕರು ನಂಬಿಕೆ ಗಳಿಸಿದ್ದಾರೆ.

ಹೂಡಿಕೆ ಮಾಡಿದ್ದಕ್ಕಿಂತ ಹೆಚ್ಚಿನ ಹಣ ಬಂದ ಖುಷಿಯಲ್ಲಿ ಪ್ರಿಯಾ ವಿವಿಧ ಬ್ಯಾಂಕ್ ಖಾತೆಗಳಿಂದ ಒಟ್ಟು 1.25 ಲಕ್ಷ ರೂ.ಗಳನ್ನು ವಂಚಕ ಕಂಪನಿಗೆ ಆನ್‌ಲೈನ್ ಮೂಲಕವೇ ಕಳಿಸಿದ್ದಾರೆ. ಆದರೆ ಮೊದಲಿಗೆ ಹಣ ಕೊಟ್ಟು ನಂಬಿಕೆ ಹುಟ್ಟಿಸಿದ್ದ ವಂಚಕರು ದೊಡ್ಡ ಮೊತ್ತದ ಹಣ ಪಡೆದ ನಂತರ ವಂಚನೆ ಮಾಡಿದ್ದಾರೆ. ಈ ಸಂಬಂಧ ಸೆನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net