ರೋಗ ನಿಯಂತ್ರಣ ಕ್ರಮ ಅನುಷ್ಠಾನಕ್ಕೆ ಸಹಭಾಗಿತ್ವ ಅಗತ್ಯ ಡಾ. ಮಂಜುನಾಥ್ ಅಭಿಮತ ಡೆಂಘಿ ಅರಿವು ರಥಕ್ಕೆ ಚಾಲನೆ

31-07-rama-health
Published on

ರಾಮನಗರ

ಡೆಂಘಿ, ಚಿಕೂನ್‌ಗುನ್ಯಾ ಮುಂಜಾಗ್ರತೆ ಮತ್ತು ನಿಯಂತ್ರಣ ಕ್ರಮಗಳ ಯಶಸ್ವಿ ಅನುಷ್ಠಾನದಲ್ಲಿ ಸಮುದಾಯದ ಸಹಭಾಗಿತ್ವ ಅವಶ್ಯಕವಾಗಿದೆ ಎಂದು ಜಿಲ್ಲಾ ಕುಷ್ಠರೋಗ ನಿರ್ಮೂಲನಾಧಿಕಾರಿ ಡಾ. ಮಂಜುನಾಥ್ ತಿಳಿಸಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿಗಳ ಕಚೇರಿ ಸಹಯೋಗದೊಂದಿಗೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಚೇರಿ ಆವರಣದಲ್ಲಿ ಡೆಂಘಿ ಅರಿವು ರಥಕ್ಕೆ ಸೋಮವಾರ ಚಾಲನೆ ನೀಡಿ ವಾತನಾಡಿದರು.

ಆರೋಗ್ಯ ಸೇವೆಗಳಿಂದ ದೂರವಿರುವ ಗುಡ್ಡಗಾಡು ಪ್ರದೇಶ, ಗಡಿ ಪ್ರದೇಶ, ಬುಡಕಟ್ಟು ಪ್ರದೇಶ, ಹಿಂದುಳಿದ ಹಳ್ಳಿಗಳಿಗೆ ಆದ್ಯತೆ ನೀಡಲು ಹಾಗೂ ನಗರ ಮತ್ತು ಗ್ರಾಮೀಣ ಪ್ರದೇಶಗಳನ್ನು ಒಳಗೊಂಡಂತೆ ಡೆಂಘಿ ನಿಯಂತ್ರಣ ಹಾಗೂ ಮುಂಜಾಗ್ರತಾ ಕ್ರಮಗಳ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಲು ಸ್ತಬ್ಧಚಿತ್ರ ಡೆಂಘಿ ರಥದ ಮೂಲಕ ವ್ಯಾಪಕ ಪ್ರಚಾರ ವಾಡಲಾಗುತ್ತಿದೆ ಎಂದರು.

ಜಿಲ್ಲಾ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ. ಶಶಿಧರ್ ವಾತನಾಡಿ, ಡೆಂಘಿ ವಿರೋಧ ಮಾಸಾಚರಣೆ ಅಂಗವಾಗಿ ಸೊಳ್ಳೆಗಳಿಂದ ಹರಡುವ ಮಲೇರಿಯಾ, ಡೆಂಘಿ, ಚಿಕೂನ್‌ಗುನ್ಯಾ, ಮಿದುಳು ಜ್ವರ, ಆನೆಕಾಲು ರೋಗಗಳ ನಿಯಂತ್ರಣ ಕುರಿತಂತೆ ಸಮುದಾಯದಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಡೆಂಘಿ ರಥಕ್ಕೆ ಚಾಲನೆ ನೀಡಲಾಗಿದೆ. ಡೆಂಘಿ ನಿಯಂತ್ರಣ ಕುರಿತ ಧ್ವನಿ ಮುದ್ರಿತ ಜಿಂಗಲ್ಸ್ ಅನ್ನು ರಥದ ಮೂಲಕ ರಾಮನಗರ ಜಿಲ್ಲಾ ವ್ಯಾಪ್ತಿಯ ಪ್ರಾದೇಶಿಕ ಆರೋಗ್ಯ ಕೇಂದ್ರ, ಉಪಕೇಂದ್ರ, ಗ್ರಾಮ, ಶಾಲಾ ಕಾಲೇಜುಗಳು, ಪ್ರದೇಶಗಳಲ್ಲಿ ಪ್ರಚಾರ ಮಾಡಿ, ಕರಪತ್ರಗಳನ್ನು ವಿತರಿಸುವ ಮೂಲಕ ಜಾಗತಿ ಮೂಡಿಸಲಾಗುತ್ತಿದೆ. ಇದರಿಂದ ಸಾರ್ವಜನಿಕರು ಡೆಂಘಿ ನಿಯಂತ್ರಿಸಲು ಸಹಾಯವಾಗುತ್ತದೆ ಎಂದು ತಿಳಿಸಿದರು.

ಡಿಎಲ್‌ಒ ಡಾ. ಮಂಜುನಾಥ್, ಡಿಎಂಒ ಡಾ. ಶಶಿಧರ್, ಆರ್‌ಸಿಎಚ್‌ಒ ಡಾ. ರಾಜು, ಡಿಟಿಒ ಡಾ. ಕುವಾರ್, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಬಿ.ಎಸ್. ಗಂಗಾಧರ್, ಡಿಎಂಒ ಕಚೇರಿಯ ಆರೋಗ್ಯ ಮೇಲ್ವಿಚಾರಣಾಧಿಕಾರಿ ರೇಣುಕಯ್ಯ, ಕೀಟ ಶಾಸ್ತ್ರಜ್ಞೆ ಸೌಮ್ಯ, ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ವಿನಯ್ ಕುವಾರ್, ರಾಜೇಂದ್ರ, ವಿಠಲ್, ಆರೋಗ್ಯ ಸಿಬ್ಬಂದಿ ಹಾಗೂ ಇತರರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net