ನನ್ನ ಜೀವ ಇರುವುದು ರಾಮನಗರದಲ್ಲೇ ಕಾರ್ಯಕರ್ತರಿಗಾಗಿ ಚನ್ನಪಟ್ಟಣಕ್ಕೆ ಹೋಗಬೇಕಾಯಿತು - ಎಚ್‌ಡಿಕೆ

Rmgm-Ph-01-Sugganahalli Sethuve-Guddalipooje-HDKumarswamy--27-2-2023
Published on



 ರಾಮನಗರ
ಚನ್ನಪಟ್ಟಣ ಕ್ಷೇತ್ರಕ್ಕೆ ಹೋಗಲು ಮನಸ್ಸು ಇರಲಿಲ್ಲ. ಅಲ್ಲಿಯ ಕಾರ್ಯಕರ್ತರನ್ನು ಉಳಿಸಿಕೊಳ್ಳಬೇಕಾದ ಸನ್ನಿವೇಶ ಅಂದು ಸೃಷ್ಟಿ ಆಯಿತು. ನಾನು ಚನ್ನಪಟ್ಟಣಕ್ಕೆ  ಹೋಗಿದ್ದರೂ ನನ್ನ ಜೀವ ಇರುವುದು ರಾಮನಗರದಲ್ಲಿ. ರಾಮನಗರ ಮಣ್ಣಿನಲ್ಲಿಯೇ ಮಣ್ಣಾಗುತ್ತೇನೆ. ನನ್ನನ್ನು ಉಳಿಸಿಕೊಳ್ಳುವುದು ನಿಮ್ಮ ಕೈಯಲ್ಲಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮನವಿ ಮಾಡಿದರು. 


ತಾಲೂಕಿನ ಸುಗ್ಗನಹಳ್ಳಿಯಲ್ಲಿ ತಾತ್ಕಾಲಿಕ ಸಂಪರ್ಕ ಸೇತುವೆ ನಿರ್ಮಾಣಕ್ಕೆ  ಗುದ್ದಲಿಪೂಜೆ ನೆರವೇರಿಸಿ ಮಾತನಾಡಿದರು. ಸ್ವತಂತ್ರವಾಗಿ ಅಧಿಕಾರಕ್ಕೆ ತರುವ ಸವಾಲು ಸ್ವೀಕರಿಸಿ ಏಕಾಂಗಿಯಾಗಿ ಹೋರಾಡುತ್ತಿದ್ದೇನೆ. ಉತ್ತರ ಕರ್ನಾಟಕದಲ್ಲಿಯೂ ಅಭೂತಪೂರ್ವವಾಗಿ ಜನಬೆಂಬಲ ದೊರೆಯುತ್ತಿದೆ. ಆ ಭಾಗದಲ್ಲಿ ಜಾತಿ ಪ್ರಶ್ನೆ ಇಲ್ಲ. ಎಲ್ಲ ವರ್ಗದ ಜನರು ಪ್ರೀತಿ ವಿಶ್ವಾಸ ತೋರಿಸುತ್ತಿದ್ದಾರೆ. ಅಲ್ಲಿಯ ಜನರು ಸಾಲಮನ್ನಾ ಮಾಡಿದ ಋಣ ತೀರಿಸುವ ಮಾತುಗಳನ್ನಾಡುತ್ತಿದ್ದಾರೆ ಎಂದರು.

40 ವರ್ಷಗಳ ಹಿಂದೆಯೇ ಜಮೀನು ಖರೀದಿ ಈ ಬಾರಿ 123 ಸ್ಥಾನಗಳಲ್ಲಿ ಗೆದ್ದು 5 ವರ್ಷಗಳ ಸರ್ಕಾರ ರಚನೆ ಮಾಡುತ್ತೇವೆ. 2,500 ಲಕ್ಷ ಕೋಟಿ ರೂ. ಸಂಗ್ರಹಿಸಿ ಪಂಚರತ್ನ ಯೋಜನೆ ಜಾರಿಗೆ ತಂದು ನಾನು ಕಂಡಿರುವ ಕನಸನ್ನು ಸಾಕಾರಗೊಳಿಸುತ್ತೇನೆ. ನಾನು ರಾಜಕಾರಣಕ್ಕೆ ಬರುವುದಕ್ಕೂ ಮುನ್ನ 40 ವರ್ಷಗಳ ಹಿಂದೆಯೇ ಕೇತಗಾನಹಳ್ಳಿಯಲ್ಲಿ 45 ಎಕರೆ ಜಮೀನು ಖರೀದಿಸಿದ್ದೆ. ಏನೋ ಮಾಡಿದ್ದೇನೆಂದು ಅಪಪ್ರಚಾರ ಮಾಡುತ್ತಿದ್ದಾರೆ. ನಾನೇನು ಮಾಡಿದ್ದೀನಿ ಅಂತ ಭಗವಂತನಿಗೆ ಗೊತ್ತು. ನಿಮ್ಮನ್ನು ಎಂದು ದುರುಪಯೋಗಪಡಿಸಿಕೊಂಡಿಲ್ಲ. ಪ್ರಾಮಾಣಿಕವಾಗಿ ನಡೆದುಕೊಂಡಿದ್ದೇವೆ ಎಂದರು.

ರಾಮನಗರದಲ್ಲಿ ಜನರಿಗೆ ತವಾ, ಡಿನ್ನರ್ ಸೆಟ್ , ಕುಕ್ಕರ್ ನೀಡಿ ಮರಳು ಮಾಡಲು ಪ್ರಯತ್ನಿಸುತ್ತಿದ್ದಾರೆ. ಅಲ್ಲದೆ, ಕ್ಷೇತ್ರದಲ್ಲಿ ಹಣದ ಹೊಳೆಯನ್ನೇ ಹರಿಸಲು ಸಿದ್ಧರಾಗಿದ್ದಾರೆ. ಅಲ್ಲದೆ ನನ್ನನ್ನು ಮುಗಿಸಲು ಷಡ್ಯಂತ್ರ ನಡೆಸುತ್ತಿದ್ದಾರೆ ಎಂದು  ಕಾಂಗ್ರೆಸ್ ಪಕ್ಷದವರು ಹಂಚುತ್ತಿರುವ ಉಡುಗೊರೆ ಬಗ್ಗೆ ಪರೋಕ್ಷ ವಾಗ್ದಾಳಿ ನಡೆಸಿದರು. ಶಾಸಕಿ ಅನಿತಾ ಕುಮಾರಸ್ವಾಮಿ ಮಾತನಾಡಿದರು. ಸ್ಥಳೀಯ ಮುಖಂಡರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net