ಸಾಯಿಬಾಬಾ ಮಂದಿರದಲ್ಲಿ ರಾಮನವಮಿ

17 Dwd 8
Published on

ಧಾರವಾಡ: ಇಲ್ಲಿನ ಕೆಲಗೇರಿ ರಸ್ತೆಯ ಸಾಯಿನಗರದಲ್ಲಿನ ಶಿರಡಿ ಸಾಯಿಬಾಬಾ ಮಂದಿರದಲ್ಲಿ ಬುಧವಾರ ಶ್ರೀರಾಮ ನವಮಿ ಉತ್ಸವ ಹಮ್ಮಿಕೊಳ್ಳಲಾಗಿತ್ತು.
ಉತ್ಸವದ ಪ್ರಯುಕ್ತ ಬೆಳಗ್ಗೆ ಕಾಕಡ ಆರತಿ, ಅಭಿಷೇಕ, ಸಾಮೂಹಿಕ ಶ್ರೀ ಸಾಯಿರಾಮ ತಾರಕ ಜಪಹೋಮ, ಗಣಹೋಮ, ನವಗ್ರಹ ಹೋಮ, ವಿಶೇಷ ವಿಷ್ಣುಸಹಸ್ರನಾಮ ಹೋಮ ನಡೆದವು. ಬಳಿಕ ತೊಟ್ಟಿಲೋತ್ಸವ, ಮಧ್ಯಾಹ್ನ ಮಹಾಪ್ರಸಾದ ವಿತರಣೆ, ಸಂಜೆ ಧೂಪಾರತಿ, ಶೇಜಾರತಿ ಸೇರಿ ಧಾರ್ಮಿಕ ಕಾರ್ಯಕ್ರಮಗಳು ನಡೆದವು.
ಶಿರಡಿ ಸಾಯಿಬಾಬಾ ಸಂಸ್ಥೆಯ ವತಿಯಿಂದ ಜರುಗಿದ ಉತ್ಸವದಲ್ಲಿ ಸಂಸ್ಥೆಯ ಅಧ್ಯಕ್ಷ ಮಹೇಶ ಶೆಟ್ಟಿ, ಸದಸ್ಯರಾದ ಜಿ.ಆರ್. ಹೊಂಗಲಮಠ, ಉದಯಕುಮಾರ ಶೆಟ್ಟಿ, ಕಿರಣ ಶಾ, ಟಿ.ಟಿ. ಚವ್ಹಾಣ, ರಮೇಶ ನಾರಾಯಣಕರ ಮತ್ತು ಭಕ್ತರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net