

ಗಂಗಾಧರ್ ಬೈರಾಪಟ್ಟಣ ರಾಮನಗರ
ಜಿಲ್ಲೆ, ನಗರ ಮತ್ತು ಪಟ್ಟಣ ಪ್ರದೇಶದಲ್ಲಿ ಉತ್ಪತ್ತಿ ಆಗುತ್ತಿರುವ ಕಸದ ಸಮಸ್ಯೆ ಪರಿಹರಿಸುವಲ್ಲಿ ಜಿಲ್ಲೆಯ ಅಧಿಕಾರಿ ವರ್ಗ ಮತ್ತು ಜನಪ್ರತಿನಿಧಿಗಳು ಸಂಪೂರ್ಣವಾಗಿ ವಿಲವಾಗಿದ್ದಾರೆ. ರಾಜಧಾನಿ ಬೆಂಗಳೂರಿಗೆ ಕೂಗಳತೆ ದೂರದಲ್ಲಿರುವ ರಾಮನಗರ ಮತ್ತು ಚನ್ನಪಟ್ಟಣ ನಗರಗಳು ಅತಿ ವೇಗವಾಗಿ ಬೆಳೆಯುತ್ತಿವೆ. ಇದರ ಫಲವಾಗಿ ಎರಡೂ ನಗರಗಳಲ್ಲಿ ದಿನದಿಂದ ದಿನಕ್ಕೆ ಕಸದ ಉತ್ಪತ್ತಿಯೂ ಹೆಚ್ಚುತ್ತಿದೆ. ಜತೆಗೆ ಕೈಗಾರಿಕಾ ಪಟ್ಟಣ ಬಿಡದಿ, ಹಾರೋಹಳ್ಳಿ, ಮಾಗಡಿ, ಕನಕಪುರದಲ್ಲೂ ಹೆಚ್ಚಿನ ಕಸ ಉತ್ಪಾದನೆ ಆಗುತ್ತಿದ್ದು, ತ್ಯಾಜ್ಯ ಬೆಟ್ಟಗಳು ನಿರ್ಮಾಣಗೊಳ್ಳುತ್ತಿವೆ. ಇದಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳುವ ಬದಲು ತಾತ್ಕಾಲಿಕ ಪರಿಹಾರ ಒದಗಿಸಿ, ಭವಿಷ್ಯ ಮತ್ತಷ್ಟು ಕರಾಳವಾಗುವಂತೆ ಮಾಡಲಾಗುತ್ತಿದೆ.
ಭೂಮಿಗೆ ಕಸ: ರಾಮನಗರ, ಚನ್ನಪಟ್ಟಣ, ಕನಕಪುರದಲ್ಲಿ ನಗರಸಭೆಗಳು ಮತ್ತು ಬಿಡದಿ ಹಾಗೂ ಮಾಗಡಿಗಳಲ್ಲಿ ಪುರಸಭೆಗಳು ಕಾರ್ಯನಿರ್ವಹಿಸುತ್ತಿವೆ. ಇವುಗಳಲ್ಲಿ ಪ್ರತಿದಿನ ಸರಾಸರಿ 130 ಟನ್ ಕಸ ಸಂಗ್ರಹವಾಗುತ್ತಿದೆ. ಬಹುತೇಕ ಎಲ್ಲ ಸ್ಥಳಿಯ ಸಂಸ್ಥೆಗಳಲ್ಲೂ ಸಂಗ್ರಹವಾಗುವ ಕಸದಲ್ಲಿ ಅಲ್ಪ ಪ್ರಮಾಣದ ಕಸವನ್ನು ಗೊಬ್ಬರವಾಗಿ ಪರಿವರ್ತಿಸಲಾಗುತ್ತಿದೆ. ಉಳಿದ ಎಲ್ಲ ಕಸ ನೆಲ ಭರ್ತಿ ಸೇರುತ್ತಿವೆ. ಕಸವನ್ನು ಗುಂಡಿಯಲ್ಲಿ ಹಾಕಿ, ಅದರ ಮೇಲೆ ಮಣ್ಣು ಹಾಕಿ ಮುಚ್ಚಲಾಗುತ್ತಿದೆ.
ಇದು ತಾತ್ಕಾಲಿಕ ಪರಿಹಾರ ಅಷ್ಟೇ: ಪ್ರಸ್ತುತ ಸ್ಥಳಿಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಸಂಗ್ರಹವಾಗುತ್ತಿರುವ ಕಸದ ವಿಲೇವಾರಿಯನ್ನು ನೆಲ ಭರ್ತಿ ಮೂಲಕ ಮಾಡಲಾಗುತ್ತಿದೆ. ಈಗ ಮಾಗಡಿ ಮತ್ತು ಕನಕಪುರದಲ್ಲಿ ಕಸ ವಿಲೇವಾರಿ ಸಮಸ್ಯೆ ಮೇಲ್ನೋಟಕ್ಕೆ ಕಾಣುತ್ತಿಲ್ಲ. ಉಳಿದಂತೆ ಚನ್ನಪಟ್ಟಣ, ರಾಮನಗರ ಮತ್ತು ಬಿಡದಿಯಲ್ಲಿ ಈ ಸಮಸ್ಯೆ ತೀವ್ರವಾಗಿದೆ. ಇದರ ಹೊರತಾಗಿಯೂ ಜಿಲ್ಲೆಯ ಕಸದ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಯಾವುದೇ ಜನಪ್ರತಿನಿಧಿ ಮುಂದಾಗುತ್ತಿಲ್ಲ.
ಜನಪ್ರತಿನಿಧಿಗಳ ವಿರುದ್ಧ ಆಕ್ರೋಶ: ಜಿಲ್ಲೆಯ ನಾಲ್ಕೂ ಕ್ಷೇತ್ರಗಳ ಶಾಸಕರಿಗೆ ಕಸ ವಿಲೇವಾರಿ ಸಮಸ್ಯೆ ಬಗ್ಗೆ ಸಂಪೂರ್ಣ ಅರಿವಿದೆ. ಕೆಲವೊಮ್ಮೆ ಸಭೆಗಳನ್ನು ನಡೆಸಿ, ಸಮಸ್ಯೆ ಪರಿಹರಿಸುವ ಮಾತನಾಡಿದ್ದಾರೆ. ಆದರೆ ಇದನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯುವಲ್ಲಿ ವಿಫಲರಾಗಿದ್ದಾರೆ. ಜಿಲ್ಲೆಯ ಮಾಗಡಿ ತಾಲೂಕಿನ ಗೋರೂರಿನಲ್ಲಿ ವೈಜ್ಞಾನಿಕ ಕಸ ವಿಲೇವಾರಿಗೆ ಜಾಗ ನೀಡಲಾಗಿದೆ. ಅಲ್ಲಿನ ಜನ ವಿರೋಧ ವ್ಯಕ್ತಪಡಿಸಿದ್ದರಿಂದ, ಯೋಜನೆ ಕೈ ಬಿಡಲಾಗಿದೆ. ಇನ್ನು ಕಣ್ವದ ಬಳಿ ಕಸ ವಿಲೇವಾರಿಗೆ ನೀಡಿದ್ದ 50 ಎಕರೆ ಜಾಗ ವೈಜ್ಞಾನಿಕವಾಗಿ ಬಳಕೆ ಆಗದ ಕಾರಣ, ಸ್ಥಳಿಯರು ವಿರೋಧ ವ್ಯಕ್ತಪಡಿಸಿದರು. ಈ ಜಾಗವನ್ನು ಸಮರ್ಪಕವಾಗಿ ಬಳಕೆ ಮಾಡಿಕೊಳ್ಳುವಲ್ಲೂ ಅಧಿಕಾರಶಾಹಿ ವಿಲವಾಗಿದೆ.
ಶಾಶ್ವತ ಪರಿಹಾರ ಬೇಕಿದೆ: ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಮಾಜಿ ಸಚಿವ ಡಿ.ಕೆ.ಶಿವಕುಮಾರ್ರಂಥ ಟಾನುಟಿ ನಾಯಕರು ಜಿಲ್ಲೆಯಲ್ಲಿದ್ದಾರೆ. ಇವರು ಮನಸ್ಸು ಮಾಡಿದ್ದರೆ ಕಸದ ಸಮಸ್ಯೆ ಕ್ಷಣಾರ್ಧದಲ್ಲಿ ಪರಿಹಾರವಾಗಿರುತ್ತಿತ್ತು. ಈ ಹಿಂದೆ ಜಿಲ್ಲೆಯಲ್ಲಿ ವೈಜ್ಞಾನಿಕವಾಗಿ ಕಸ ವಿಲೇವಾರಿ ಟಕ ಮಾಡಲು ಬಂದಿದ್ದ ಸೆಟರಾಂ ಕಂಪನಿ ಈಗ ನೇಪಥ್ಯಕ್ಕೆ ಸರಿದಿದೆ. ವೈಜ್ಞಾನಿಕ ಕಸ ವಿಲೇವಾರಿ ಟಕ ಸ್ಥಾಪನೆಗೆ ಕ್ರಮ ಕೈಗೊಂಡಿದ್ದೇ ಆದರೆ, ರಾಮನಗರ ಜಿಲ್ಲೆಯ ಕಸದ ಸಮಸ್ಯೆ ಜತೆಗೆ, ಬೆಂಗಳೂರಿನ ಕಸದ ಸಮಸ್ಯೆಗೂ ಪರಿಹಾರ ದೊರೆಯುತ್ತದೆ. ರಾಜ್ಯದ ಪ್ರಭಾವಿ ನಾಯಕರಾಗಿರುವ ಜಿಲ್ಲೆಯ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಈ ನಿಟ್ಟಿನಲ್ಲಿ ಗಂಭೀರ ಪ್ರಯತ್ನ ಮಾಡಬೇಕಿದೆ.
ಅಪಾಯ ಕಣ್ಮುಂದಿದೆ: ಕೆಲವು ಕಡೆ ಗುಂಡಿಯಲ್ಲಿ ಕಸ ಹಾಕಿ, ಮಣ್ಣು ಮುಚ್ಚಲಾಗುತ್ತಿದೆ. ಈ ಕ್ರಮವು ಮುಂದೊಂದು ದಿನ ಅಪಾಯಕ್ಕೆ ಆಹ್ವಾನ ನೀಡಿದಂತೆ. ಕೊಳೆಯದ ಪ್ಲಾಸ್ಟಿಕ್, ಗಾಜು ಸೇರಿ ಇತರ ವಸ್ತುಗಳು ಮುಂದೆ ವಿಷವಾಗಿ ಪರಿವರ್ತನೆಗೊಂಡು, ವಿವಿಧ ಸಮಸ್ಯೆಗಳನ್ನು ಉಂಟು ಮಾಡುವುದರಲ್ಲಿ ಅನುಮಾನವೇ ಇಲ್ಲ. ಈ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಎಚ್ಚರವಹಿಸಬೇಕಿದೆ.
ಗೇಲ್ ಭರವಸೆ: ಬಿಡದಿ ಬಳಿ ಗೇಲ್ ಸಂಸ್ಥೆ ಕಸದಿಂದ ರಸ ತೆಗೆಯುವ ಟಕ ಆರಂಭಿಸುತ್ತಿದೆ. ಇದರ ಕಾಮಗಾರಿ ಈಗಾಗಲೇ ಆರಂಭವಾಗಿದೆ. ಈ ಟಕ ಕಾರ್ಯಾರಂಭಿಸಿದರೆ ಬಿಡದಿ, ರಾಮನಗರ ಮತ್ತು ಚನ್ನಪಟ್ಟಣದ ಕಸದ ಸಮಸ್ಯೆಗೆ ಮುಕ್ತಿ ದೊರೆಯಲಿದೆ ಎಂಬುದು ಅಧಿಕಾರಿಗಳ ಅಭಿಪ್ರಾಯ.
ಕಸದ ಸಮಸ್ಯೆ ಪರಿಹರಿಸಲು ನಾವು ಶಕ್ತಿ ಮೀರಿ ಪ್ರಯತ್ನಿಸುತ್ತಿದ್ದೇವೆ. ಇದಕ್ಕೆ ನಗರಸಭೆಯಂತೆ ಜನರೂ ಸಹಕರಿಸಬೇಕು. ಜನತೆ ಮೂಲದಲ್ಲೇ ಹಸಿ ಮತ್ತು ಒಣ ಕಸ ವಿಂಗಡಿಸಿ ವಿಲೇವಾರಿ ಮಾಡಬೇಕು.
| ಬಿ.ನಂದಕುಮಾರ್ ಆಯುಕ್ತ, ರಾಮನಗರ ನಗರಸಭೆ