ರಾಮನಗರದಲ್ಲಿ ಡಾ. ಜಿ.ಪಿ.ರಾಜರತ್ನಂ ನೆನಪಲ್ಲಿ ಸಭಾ ಭವನ ನಿರ್ಮಾಣಕ್ಕೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಮನವಿ

Ramanagara-Ph-01-MLC C
Published on

ರಾಮನಗರ: ರಾಮನಗರದಲ್ಲಿ ಡಾ. ಜಿ.ಪಿ.ರಾಜರತ್ನಂ ನೆನಪಲ್ಲಿ ಸಭಾ ಭವನ ನಿರ್ಮಿಸಬೇಕು ಎಂದು ಜಿಲ್ಲಾ ಕಸಾಪ ವತಿಯಿಂದ ವಿಧಾನ ಪರಿಷತ್ ಸದಸ್ಯ ಸಿ.ಎಂ. ಲಿಂಗಪ್ಪ ಅವರಿಗೆ ಬುಧವಾರ ಮನವಿ ಸಲ್ಲಿಸಲಾಯಿತು.

ಕಸಾಪ ಜಿಲ್ಲಾಧ್ಯಕ್ಷ ಸಿಂ.ಲಿಂ.ನಾಗರಾಜ್ ಮಾತನಾಡಿ, ಕನ್ನಡದ ಹೆಮ್ಮೆಯ ಸಾಹಿತಿ ಡಾ. ಜಿ.ಪಿ. ರಾಜರತ್ನಂ ಜನಿಸಿದ ರಾಮನಗರದಲ್ಲಿ ಅವರನ್ನು ನೆನಪಿಸುವ ಯಾವುದೇ ಸ್ಮಾರಕ, ರಸ್ತೆ, ಭವನಗಳಿಲ್ಲ. ಜಿಲ್ಲಾ ಕೇಂದ್ರದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಲು ಸುಸಜ್ಜಿತ ಭವನ ಇಲ್ಲದಿರುವುದು ಬೇಸರದ ಸಂಗತಿಯಾಗಿದೆ. ಆದ್ದರಿಂದ ಡಾ. ಜಿ.ಪಿ. ರಾಜರತ್ನಂ ಅವರ ಹೆಸರಿನಲ್ಲಿ ಸಭಾ ಭವನವನ್ನು ನಿರ್ಮಿಸಲು ಈಗಾಗಲೇ ಮುಂದಾಗಿರುವ ತಮ್ಮ ಪ್ರಯತ್ನಕ್ಕೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್, ಜಿಲ್ಲಾ ಲೇಖಕರ ವೇದಿಕೆ, ನಾಗರಿಕರ ವೇದಿಕೆ ಹಾಗೂ ಇತರೆ ಸಂಘ ಸಂಸ್ಥೆಗಳು ಅಭಿನಂದನೆಗಳನ್ನು ತಿಳಿಸುತ್ತವೆ. ಈ ಕೆಲಸವನ್ನು ಆದಷ್ಟು ಶೀಘ್ರವಾಗಿ ನೆರವೇರಿಸಿ ಜಿಲ್ಲೆಯ ಸಂಘ ಸಂಸ್ಥೆಗಳು ಸಾಹಿತ್ಯಕ, ಸಾಂಸ್ಕೃತಿಕ ಚಟುವಟಿಕೆಗಳನ್ನು ನಡೆಸಲು ಅನುಕೂಲ ಮಾಡಿಕೊಡಬೇಕು ಎಂದು ಮನವಿ ಮಾಡಿದರು.

ಜಿಲ್ಲಾ ಕಸಾಪ ಸಂಘಟನಾ ಕಾರ್ಯದರ್ಶಿ ಎಸ್. ರುದ್ರೇಶ್ವರ, ಸಾಹಿತಿ ಪ್ರೊ. ಎಂ. ಶಿವನಂಜಯ್ಯ, ನಾಗರಿಕರ ವೇದಿಕೆ ಅಧ್ಯಕ್ಷ ಪೇಟೆ ಕುರುಬರಹಳ್ಳಿ ತ್ಯಾಗರಾಜ, ಶ್ರೀರಾಮ ಗೃಹ ನಿರ್ಮಾಣ ಸಂಘದ ಉಪಾಧ್ಯಕ್ಷ ನಾಗರಾಜು, ನಿವೃತ್ತ ಪ್ರಾಂಶುಪಾಲ ಎಸ್.ಎಲ್.ವನರಾಜು, ಉಪನ್ಯಾಸಕ ಸಿ. ರಮೇಶ್ ಹೊಸದೊಡ್ಡಿ, ನಿವೃತ್ತ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ವೆಂಕಟಾಚಲಯ್ಯ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net