

ರಾಮನಗರ: ಕರೊನಾ ರೋಗಿಗಳಿಗೆ ಚಿಕಿತ್ಸೆ ನೀಡಲು ರಿಮೋಟ್ ಐಸಿಯು ಘಟಕವನ್ನು ಜಿಲ್ಲೆಯಲ್ಲಿ ಆರಂಭಿಸಲಾಗಿದ್ದು, ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಡಿಸಿಎಂ ಡಾ.ಸಿ.ಎನ್.ಅಶ್ವಥ್ ನಾರಾಯಣ ಅವರು ಸೋಮವಾರ ಚಾಲನೆ ನೀಡಿದರು.
ನಗರದ ಕಂದಾಯ ಭವನದಲ್ಲಿರುವ ಕೋವಿಡ್ 19 ಆಸ್ಪತ್ರೆಯಲ್ಲಿ ಸ್ಥಾಪಿಸಲಾಗಿರುವ ಐಸಿಯೂ ಘಟಕದಲ್ಲಿ 16 ಹಾಸಿಗೆ ಸೌಲಭ್ಯವಿದ್ದು, ಇದು ದಿನದ 24 ಗಂಟೆಕಾರ್ಯ ನಿರ್ವಹಿಸುತ್ತದೆ ಎಂದು ಅಶ್ವಥ್‌ನಾರಾಯಣ ತಿಳಿಸಿದರು.
ವಾರ್ ರೂಂ ಉದ್ಘಾಟನೆ: ಜಿಲ್ಲೆಯ ಕರೊನಾ ಪರಿಸ್ಥಿತಿ ಮತ್ತು ಪ್ರತಿಯೊಬ್ಬ ವ್ಯಕ್ತಿಯ ಆರೋಗ್ಯದ ಮೇಲೆ ನಿಗಾ ಇಡಲು ಮತ್ತು ಅಗತ್ಯ ಸೇವೆಗಳನ್ನು ಒದಗಿಸಲು ಅನುಕೂಲವಾಗುವ ವಾರ್ ರೂಂ ಅನ್ನು ಸಹ ಸೋಮವಾರದಿಂದ ಆರಂಭಿಸಲಾಗಿದೆ ಎಂದು ಡಿಸಿಎಂ ತಿಳಿಸಿದರು. ಪ್ರಾಥಮಿಕ, ಸಮೂದಾಯ, ತಾಲೂಕು ಮತ್ತು ಜಿಲ್ಲಾ ಆರೋಗ್ಯ ಕೇಂದ್ರಗಳಿಗೆ ಸಂಬಂಧಿಸಿದ ಸಂಪುರ್ಣ ಮಾಹಿತಿ ಡಿಜಿಟಲ್ ವಾರ್ ರೂಂ ನಲ್ಲಿ ಲಭ್ಯವಿರುತ್ತದೆ. ಈಗಾಗಲೇ ಜಿಲ್ಲೆಯ ಒಟ್ಟು 3 ಲಕ್ಷ ಮನೆಗಳು ಮತ್ತು 12 ಲಕ್ಷ ಮಂದಿಯ ಸಂಪೂರ್ಣ ಮಾಹಿತಿಯನ್ನು ಸಂಗ್ರಹಿಸಲಾಗಿದೆ, ಸರ್ವೇಮೂಲಕ ಸಕ್ಕರೆ, ಹೃದಯ ಸಂಬಂಧಿ ಮತ್ತು ಉಸಿರಾಟದ ಸಮಸ್ಯೆಇರುವ 60 ವರ್ಷ ಮೇಲ್ಪಟ್ಟರವ ಮಾಹಿತಿಯನ್ನು ಸಂಗ್ರಹಿಸಲಾಗಿದೆ. ಇದರ ಜತೆಗೆ, ಸೂಪರ್ ಹೀರೋ ತಂತ್ರಾಂಶದ ಮೂಲಕ ಆಂಬುಲೆನ್ಸ್ ಮಾಹಿತಿಯನ್ನು ಪಡೆಯಲಾಗುತ್ತದೆ. ಅಗತ್ಯಬಿದ್ದಾಗ ಆ್ಯಪ್ ಮೂಲಕ ಆಂಬುಲೆನ್ಸ್ ಸೇವೆ ಪಡೆದುಕೊಳ್ಳಬಹುದು ಎಂದು ತಿಳಿಸಿದರು.
ಎಲ್ಲ್ಲ ತಾಲೂಕುಗಳಿಗೆ ಐಸಿಯೂಗಳನ್ನು ವಿಸ್ತರಣೆ ಮಾಡುವ ಗುರಿಯನ್ನು ಹೊಂದಲಾಗಿದೆ ಎಂದು ತಿಳಿಸಿದ ಡಿಸಿಎಂ, ಕೋವಿಡ್ 19 ಡ್ಯಾಷ್ ಬೋರ್ಡ್ ಮೂಲಕ ಕ್ವಾರಂಟೈನ್ ಕೇಂದ್ರಗಳು, ರಕ್ತದ ಕೊರತೆ ಸೇರಿದಂತೆ ಇಡೀ ಆರೋಗ್ಯ ವ್ಯವಸ್ಥೆಯನ್ನು ಒಟ್ಟಿಗೆ ತರಲಾಗಿದ್ದು, ಇದರ ಜತೆಗೆ ಸಮೀಕ್ಷೆ ಮೂಲಕ ಮೂಲಕ ಮಾಹಿತಿಯನ್ನು ಕ್ರೋಡಿಕರಿಸಿರುವ ರಾಜ್ಯದ ಮೊದಲ ಜಿಲ್ಲೆಯಾಗಿ ರಾಮನಗರ ಇದೆ ಸಂತಸ ವ್ಯಕ್ತಪಡಿಸಿದರು.
ರಾಮನಗರ ಜಿಲ್ಲೆಯಲ್ಲಿಯೂ ಕರೊನಾ ಲ್ಯಾಭ್ ಆರಂಭಿಸುವ ಸಂಬಂಧ ಈಗಾಗಲೇ ಒಂದೂವರೆ ಕೋಟಿರೂ.ಗಳ ಅನುಧಾನವನ್ನು ನೀಡಲಾಗಿದೆ. ಖಾಸಗಿ ಎನ್‌ಜಿಓ ಮೂಲಕ ವಾರ್ ರೂಂ ಅಭಿವೃದ್ಧಿ ಪಡಿಸಲಾಗಿದ್ದು, ಕರೊನಾ ವಿರುದ್ಧ ಹೋರಾಟಕ್ಕೆ ಬೇಕಾದ ಪಿಪಿಇ ಕಿಟ್ ಸೇರಿದಂತೆ ಹಲವಾರು ಅಗತ್ಯಗಳನ್ನು ದೇಶದಲ್ಲಿಯೇ ಅಭಿವೃದ್ಧಿ ಪಡಿಸಲಾಗುತ್ತಿದೆ ಎಂದು ತಿಳಿಸಿದರು.
ರೇಷ್ಮೆ ಸಚಿವ ನಾರಾಯಣಗೌಡ ಮಾತನಾಡಿ, ರಾಮನಗರ ರೇಷ್ಮೆ ಮಾರುಕಟ್ಟೆಯನ್ನು ಹೈಟೆಕ್ ಮಾಡುವ ಸಲುವಾಗಿ ಸುಮಾರು 70 ಕೋಟಿರೂ ಅನುಧಾನವನ್ನು ನೀಡಲಾಗಿದೆ. ಲಾಕ್‌ಡೌನ್ ಸಂದರ್ಭದಲ್ಲಿ ನೂಲು ಖರೀದಿಯಾಗದೆ ರೀಲರ್‌ಗಳೂ ಸಂಕಷ್ಟದಲ್ಲಿ ಇರುವ ಹಿನ್ನೆಲೆಯಲ್ಲಿ ಕೆಎಸ್‌ಎಂಬಿ ಮೂಲಕ ನೂಲು ಖರೀದಿಗೆ 50 ಕೋಟಿ ಅನುಧಾನ ನೀಡಲಾಗಿದೆ. ಅಲ್ಲದೆ ಪ್ರತಿ ಕೆಜಿ ನೂಲಿಗೆ 200 ರೂ ಪ್ರೋತ್ಸಾಹ ಧನ ನೀಡಲಾಗುತ್ತದೆ ಎಂದು ಮಾಹಿತಿ ನೀಡಿತು.
ಮಾವು ಬೆಳಗಾರರಿಗೆ ಅನುಕೂಲವಾಗುವಂತೆ ಚನ್ನಪಟ್ಟಣ ಬಳಿ ಮಾವು ಲ್ಪ್ ಘಟಕ ಆರಂಭಿಸಲಾಗುತ್ತದೆ. ಈ ಮೂಲಕ ರಾಮನಗರ ಜಿಲ್ಲೆಯ ಮಾವನ್ನು ವಿದೇಶಕ್ಕೂ ಲ್ಪ್ ಮೂಲಕ ರ್ತು ಮಾಡಲು ಕ್ರಮಕೈಗೊಳ್ಳಲಾಗುವುದು. ಸಿಎಂ ಯಡಿಯೂರಪ್ಪ ಅವರ ಸ್ವ ಗ್ರಾಮ ಮಂಡ್ಯಜಿಲ್ಲೆಯ ಬೂಕನಕೆರೆ ಗ್ರಾಮದಲ್ಲಿ ುಡ್ ಪಾರ್ಕ ಆರಂಭಿಲಾಗುತ್ತಿದೆ ಎಂದು ತಿಳಿಸಿದರು.
ಅಲ್ಲದೆ, ಮಾವುಮಾರುಕಟ್ಟೆಯಲ್ಲಿ ಕಮೀಷನ್ ಪಡೆಯುವ ದಂಧೆಯ ಬಗ್ಗೆ ನನಗೆ ಮಾಹಿತಿ ಇದೆ. ಈ ಹಿನ್ನೆಲೆಯಲ್ಲಿ ನಿಗಾವಹಿಸಲು ಸಂಜೆವೇಳೆಯಲ್ಲಿ ಮಾರುಕಟ್ಟೆಗೆ ಭೇಟಿ ನೀಡಿ ಪರಿಶೀಲನೆ ನಡೆಸಲಾಗುವುದುಎಂದರು.
ಈ ವೇಳೆ ಶಾಸಕ ಎ.ಮಂಜುನಾಥ್, ವಿಧಾನ ಪರಿಷತ್ ಸದಸ್ಯ ಅ.ದೇವೇಗೌಡ, ಬಿಜೆಪಿ ಜಿಲ್ಲಾಧ್ಯಕ್ಷಎಂ.ರುದ್ರೇಶ್, ಸ್ಮಾರ್ಟ್ ಸಿಟಿಯೋಜನಾ ಪ್ರಾಧಿಕಾರದ ಅಧ್ಯಕ್ಷ ಆರ್.ವರದರಾಜಗೌಡ, ಜಿಲ್ಲಾಧಿಕಾರಿಎಂ.ಎಸ್.ಅರ್ಚನಾ, ಎಸ್‌ಪಿ ಅನೂಪ್ ಎ.ಶೆಟ್ಟಿ, ಜಿಪಂ ಸಿಇಓ ಇಕ್ರಂ ಮುಂತಾದವರುಇದ್ದರು.
ಯುಜಿಡಿ, ನೀರಿನ ಸಮಸ್ಯೆ: ರಾಮನಗರ ಜಿಲ್ಲೆಯನ್ನು ಏನೋ ಅಂದುಕೊಂಡಿದ್ದೆ. ಆದರೆ ಇಲ್ಲಿ ಏನೂ ಅಭಿವೃದ್ಧಿ ಆಗಿಲ್ಲ, ಸಾಕಷ್ಟು ಯುಜಿಡಿ ಸಮಸ್ಯೆಯೂ ಇದೆ. ನೀರಿನ ಸಮಸ್ಯೆಯೂ ಕಾಡುತ್ತಿದೆ. ಮುಂದಿನ ದಿನಗಳಲ್ಲಿ ಜಿಲ್ಲೆಯ, ಯುಜಿಡಿ, ಕುಡಿವ ನೀರು, ಮತ್ತು ಕಸದ ಸಮಸ್ಯೆ ಪರಿಹಾರಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ಪೌರಾಡಳಿತ ಸಚಿವರು ಆದ ನಾರಾಯಣಗೌಡ ತಿಳಿಸಿದರು.
ಕ್ವಾರಂಟೈನ್ ಬೇಡ ಎನ್ನುವುದು ತಪ್ಪು: ಹೊರ ರಾಜ್ಯಗಳಲ್ಲಿ ಇರುವ ಸುಮಾರು 1.06 ಲಕ್ಷ ಮಂದಿ ಇದ್ದಾರೆ. ಇವರೆಲ್ಲರಿಗೂ ಬಂದ ತಕ್ಷಣ ಪರೀಕ್ಷೆ ಮಾಡಿ ಕ್ವಾರಂಟೈನ್ ಮಾಡಲಾಗುತ್ತದೆ. ಆದರೆ ಅವರೆಲ್ಲರೂ ನಮ್ಮ ಮನೆ ಮಕ್ಕಳೇ ಆಗಿದ್ದು ಅವರಿಗೆ ಕ್ವಾರಂಟೈನ್ ಮಾಡಬೇಡಿ ಎಂದು ಹೇಳುವುದು ತಪ್ಪು. ಕ್ವಾರಂಟೈನ್ ನಂತರ ಮತ್ತೊಮ್ಮೆ ಪರೀಕ್ಷೆಗೆ ಒಳಪಡಿಸಿ ನೆಗೆಟೀವ್ ಬಂದರೆ ಮಾತ್ರ ಅವರನ್ನು ಹೊರಗೆ ಬಿಡಲಾಗುತ್ತದೆ. ಪಾದರಾಯನಪುರ ಘಟನೆಗೂ ಇದಕ್ಕೂ ಹೋಲಿಕೆ ಮಾಡುವುದು ಬೇಡ. ಅಂದು ಪರೀಕ್ಷಾ ವರದಿ ಬರುವ ಮುನ್ನವೇ ಅವರನ್ನು ಜಿಲ್ಲೆಗೆಕರೆ ತಂದು ತಪ್ಪು ಮಾಡಿದ್ದು ಬಿಟ್ಟರೆ ಉಳಿದಂತೆ ಯಾವುದೇ ತಪ್ಪು ನಿರ್ಧಾರವನ್ನು ಮಾಡಲಿಲ್ಲ. ಈಗಲೂ ಯಾರೂ ಭಯಪಡಬೇಡಿ ಎಂದು ಮನವಿ ಮಾಡಿದರು.
ನೆಲದ ಮೇಲೆ ಕುಳಿತ ಪತ್ರಕರ್ತರು: ಜಿಲ್ಲಾಧಿಕಾರಿ ಕಚೇರಿಸ ಭಾಗಂಣದಲ್ಲಿ ನಡೆಯ ಬೇಕಿದ್ದ ಡಿಸಿಎಂ ಸುದ್ದಿಗೋಷ್ಠಿಗೆ ಹೋಗಲು ಪತ್ರಕರ್ತರನ್ನು ಬಿಡದ ಪೊಲೀಸ್ ಅಧಿಕಾರಿಗಳ ಕ್ರಮವನ್ನು ವಿರೋಧಿಸಿ ಪತ್ರಕರ್ತರು ಗಾಂಧಿಗಿರಿ ನಡೆಸಿದ ಘಟನೆಯೂ ನಡೆಯಿತು.
ಜಿಲ್ಲಾಧಿಕಾರಿ ಕಚೇರಿ ಸ್ವಾಗ ಕೇಂದ್ರಬಳಿಯೇ ನೆಲದ ಮೇಲೆ ಕುಳಿತ ಪತ್ರಕರ್ತರು ಅಲ್ಲಿಯೇ ಸುದ್ದಿಗೋಷ್ಠಿ ನಡೆಸುವಂತೆ ಪಟ್ಟು ಹಿಡಿದರು. ಈ ವೇಳೆ ಡಿಸಿಎಂ ಮಾಧ್ಯಮ ಸಲಹೆಗಾರರು ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಂದು ಮಾಧ್ಯಮದವನ್ನು ಸಮಾಧಾನ ಪಡಿಸುವ ಪ್ರಯತ್ನ ನಡೆಸಿದರೂ ಯಾವುದೇ ಪ್ರಯೋಜನವಾಗಲಿಲ್ಲ. ನಂತರ ಅನಿವಾರ್ಯವಾಗಿ ಪತ್ರಕರ್ತರಿದ್ದಲ್ಲಿಗೆ ಬಂದ ಡಿಸಿಎಂ ಮತ್ತು ಸಚಿವರು ಸುದ್ದಿಗೋಷ್ಠಿ ಮಾಡಿ ತೆರಳಿದರು.