

ಮಾಗಡಿ : ಪರವಾನಗಿ ಇಲ್ಲದೆಅಕ್ರಮವಾಗಿ ತೇಗದ ಮರ ಸಾಗಾಣಿಕೆ ಮಾಡುತ್ತಿದ್ದ ಲಾರಿಯನ್ನು ಸಿಐಡಿ ಅರಣ್ಯ ಘಟಕ ವಶಪಡಿಸಿಕೊಂಡಿದೆ.
ಹುಲಿದುರ್ಗ ಉಜ್ಜಿನಿಯಿಂದ ಮಾಗಡಿ ಕಡೆಗೆ ತೆರಳುತ್ತಿದ್ದ ವೇಳೆ ಮಾಗಡಿ ಆಗಲಕೋಟೆ ಹ್ಯಾಂಡ್‌ಪೊಸ್ಟ್‌ನ ಬಸವೇಶ್ವರ ವೇಬ್ರಿಡ್ಜ್ ಬಳಿ ಸಿಐಡಿ ಅರಣ್ಯ ಘಟಕದ ಇನ್ಸ್‌ಪೆಕ್ಟರ್ ರುಕ್ಷ್ಮಿಣಿ ಹಾಗೂ ತಂಡ ದಾಳಿ ನಡೆಸಿ ಲಾರಿಯನ್ನು ವಶಪಡಿಸಿಕೊಂಡಿದ್ದಾರೆ.
ಉಜ್ಜಿನಿ ಬಳಿಯ ರೈತರೊಬ್ಬರ ತೋಟದಲ್ಲಿ ಸುಮಾರು 41 ತೇಗದ ಮರದ 29 ಟನ್ ಮರ ವಶಪಡಿಸಿಕೊಳ್ಳಲಾಗಿದೆ, ಅರಣ್ಯ ಇಲಾಖೆುಂದ ಯಾವುದೆ ದಾಖಲಾತಿ ಪಡೆಯದೆ ಅಕ್ರಮವಾಗಿ ತಮಿಳು ನಾಡಿಗೆ ಸಾಗಾಣಿಕೆ ಮಾಡಲಾಗುತ್ತಿದೆ ಎನ್ನುವ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ ವಶಪಡಿಸಿಕೊಳ್ಳಲಾಗಿದೆ.
ಅನುಮಾನಕ್ಕೆ ಕಾರಣ: ಸೆ.13 ರಂದೇ ಲಾರಿ ಹಾಗೂ ಅದರಲ್ಲಿ ಇದ್ದ ತೇಗದ ಮರಗಳನ್ನು ವಶಕ್ಕೆ ಪಡೆದು ಅಧಿಕಾರಿಗಳು ಸೆ. 14ರ ಸಾಯಂಕಾಲ ಮಾಗಡಿ ವಲಯ ಅರಣ್ಯಾಧಿಕಾರಿಗಳ ವಶಕ್ಕೆ ನೀಡಿರುವುದು ಸಾಕಷ್ಟು ಸಂಶಯಕ್ಕೆ ಎಡೆಮಾಡಿಕೊಟ್ಟಿದೆ.