

ಮಾಗಡಿ : ಗಾಂಜಾ ಮಾರುತ್ತಿದ್ದ 7 ಮಂದಿ ಆರೋಪಿಗಳನ್ನು ಬಂಧಿಸುವಲ್ಲಿ ತಾವರೆಕೆರೆ ಪೊಲೀಸರು ಯಶಸ್ವಿಯಾಗಿದ್ದಾರೆ.
ಜು. 11 ರಂದು ತಾವರೆಕೆರೆ ಕೆಂಗೇರಿ ರಸ್ತೆಯ ಗಣೇಶ ನಗರದಲ್ಲಿ ಸಾರ್ವಜನಿಕರಿಗೆ ಗಾಂಜಾ ಮಾರಾಟ ಮಾಡುವ ವೇಳೆ ಮಂಡ್ಯ ಜಿಲ್ಲೆ ಪಾಂಡವಪುರ ತಾಲೂಕಿನ ಗಾಣದ ಹೊಸೂರಿನ ಎಂ. ಮಧುಕುಮಾರು (25), ಪಾಂಡವಪುರದ ಬಸವನಗುಡಿಯ ಪಿ. ತಂಗರಾಜು (31), ನೆಲಮಂಗಲ ತಾಲೂಕಿನ ಗುಲ್ ಸಂದ್ರ ಗ್ರಾಮದ ಲಕ್ಷ್ಮಿಕಾಂತ (23), ಮೈಸೂರು ಕುಂಬಾರ ಕೊಪ್ಪಲಿನ ಜಿ. ಶರತ್ ಗೌಡ (20), ಮಡಿಕೇರಿ ತಾಲೂಕು ಹೆಬ್ಬೆಟ್ಟೆಗಿರಿ ಗ್ರಾಮದ ವಿಜಯ್ (26), ತಾವರೆಕೆರೆ ಕುವೆಂಪು ನಗರದ ಗುಣಶೇಖರ್ (25), ದೊಂಬರಹಳ್ಳಿಯ ಜೆ.ಪವನ್ ಕುಮಾರು (24) ಬಂಧಿತರು.
ಆರೋಪಿಗಳಿಂದ ಸುಮಾರು 3 ಲಕ್ಷ ರೂ ಬೆಲೆ ಬಾಳುವ 6.40 ಗ್ರಾಂ ತೂಕದ ಗಾಂಜಾ ಸೊಪ್ಪು, 2 ಬೈಕ್, 7 ಮೋಬೈಲ್, 5 ಸಾವಿರ ನಗದು, ತೂಕವನ್ನು ವಶಕೆ ಪಡೆದುಕೊಂಡಿದ್ದಾರೆ.
ಕಾರ್ಯಾಚರಣೆಯಲ್ಲಿ ಪೊಲೀಸ್ ಸಿಬ್ಬಂದಿ ರಾಮಪ್ಪ, ಮಹ್ಮದ್ ಅಲ್ಲಾವುದ್ದೀನ್, ಭಾಸ್ಕರ್, ಮಂಜುನಾಥ, ಹೇಮಂತ್ ಕುಮಾರು, ಲಕ್ಷ್ಮಿಕಾಂತ, ಗೋವಿಂದರಾಜು, ಮಂಜುನಾಥ, ತಿಪ್ಪೆಸ್ವಾಮಿ, ಹನುಮಂತರಾಜು, ಹರೀಶ್ ಇದ್ದರು.