ಆಸ್ತಿಗಾಗಿ ಹೆತ್ತ ತಂದೆಯನ್ನೇ ಮನೆಯಿಂದ ಹೊರಗಾಕಿದ ದುಷ್ಟ ಪುತ್ರನ ಬಂಧನ

1133897
Published on

ರಾಮನಗರ: ಆಸ್ತಿಗಾಗಿ ಹೆತ್ತ ತಂದೆಯನ್ನೇ ಮನೆಯಿಂದ ಹೊರ ಹಾಕಿದ ದುಷ್ಟ ಮಗನನ್ನು ರಾಮನಗರ ಪೊಲೀಸರು ಗುರುವಾರ ಬಂಧಿಸಿದ್ದಾರೆ.

ಬಂಧಿತನನ್ನು ಕುಮಾರ್​ ಎಂದು ಗುರುತಿಸಲಾಗಿದೆ. ರಾಮನಗರ ಪುರ ಠಾಣೆಯ ಸಿಪಿಐ ಮೋಹನ್ ಕುಮಾರ್ ನೇತೃತ್ವದಲ್ಲಿ ಆರೋಪಿಯನ್ನು ಬಂಧಿಸಲಾಗಿದೆ.

ರಾಮನಗರದ ಸಿಂಗ್ರಿಬೋವಿದೊಡ್ಡಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಆಸ್ತಿಗಾಗಿ ಹೆತ್ತ ತಂದೆಯನ್ನೇ ಮಗ ಕುಮಾರ್​ ಮನೆಯಿಂದ ಹೊರಗೆ ಎಸೆದು ಅಮಾನವೀಯವಾಗಿ ವರ್ತಿಸಿದ್ದ. ಕೆಎಸ್ಆರ್​ಟಿಸಿ ಚಾಲಕನಾಗಿರುವ ಕುಮಾರ್ ಎಂಬಾತನಿಂದ ಈ ಕೃತ್ಯ ನಡೆದಿದೆ. ಕುಮಾರ್​ ತಂದೆ ತಿಮ್ಮಯ್ಯ ಅವರು ಇದೀಗ ಬೇರೆಯವರ ಆಶ್ರಯದಲ್ಲಿದ್ದಾರೆ.

ಪ್ರಕರಣ ಸಂಬಂಧ ಸ್ವಯಂಚಾಲಿತವಾಗಿ ದೂರು ದಾಖಲಿಸಿಕೊಂಡ ರಾಮನಗರ ಪುರ ಠಾಣಾ ಪೊಲೀಸರು ಪಾಪಿ ಪುತ್ರನನ್ನು ಬಂಧಿಸಿದ್ದಾರೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net