ಶಾಸಕರಿಗೆ ಯುವಕನ ತರಾಟೆ ಕಾಮಗಾರಿಗೆ 3ನೇ ಬಾರಿ ಭೂಮಿಪೂಜೆ

16 RMN-MGD P2
Published on

ಮಾಗಡಿ: ರಸ್ತೆ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಲು ಬಂದ ಶಾಸಕರಿಗೆ ಗ್ರಾಮದ ಯುವಕನೊಬ್ಬ ತರಾಟೆಗೆ ತೆಗೆದುಕೊಂಡ ಪ್ರಸಂಗ ತಾಲೂಕಿನ ಸೋಲೂರು ಹೋಬಳಿ ವ್ಯಾಪ್ತಿಯ ತಟ್ಟೆಕೆರೆ ಬಳಿ ನಡೆದಿದೆ.

ತಟ್ಟೆಕೆರೆ ಏರಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಮೂರನೇ ಬಾರಿ ಭೂಮಿಪೂಜೆ ಮಾಡಲು ಬಂದ ನೆಲಮಂಗಲ ಶಾಸಕ ಡಾ. ಶ್ರೀನಿವಾಸ್ ಮೂರ್ತಿ ಅವರಿಗೆ ಗ್ರಾಮದ ಶ್ರೀನಿವಾಸ್ ಘೇರಾವ್ ಹಾಕಿ, ಶಾಸಕರಾಗಿ ನಾಲ್ಕೂವರೆ ವರ್ಷದ ನಂತರ ಅದು ಚುನಾವಣೆ ಸಮೀಪಿಸುತ್ತಿರುವ ವೇಳೆ ಗ್ರಾಮಕ್ಕೆ ಬರುತ್ತಿದ್ದೀರಾ. ಸಮಸ್ಯೆ ಬಗ್ಗೆ ಫೋನ್ ಮಾಡಿದರೂ ಕರೆ ಸ್ವೀಕರಿಸುವುದಿಲ್ಲ. 3 ತಿಂಗಳ ಹಿಂದೆ 1 ಕೋಟಿ ರೂ. ವೆಚ್ಚದಲ್ಲಿ ರಸ್ತೆ ನಿರ್ಮಿಸುವ ಭರವಸೆ ನೀಡಿ ಭೂಮಿಪೂಜೆ ಮಾಡಿ ಹೋದವರು ಮತ್ತೆ  ಇಂದು 50 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸುವುದಾಗಿ ಭೂಮಿಪೂಜೆ ಮಾಡುವ ಅವಶ್ಯಕತೆಯಾದರೂ ಏನಿದೆ. ಕಾಮಗಾರಿ ಪೂರ್ಣಗೊಂಡ ನಂತರ ಬಂದು ಉದ್ಘಾಟಿಸಿ ಎಂದು ತರಾಟೆಗೆ ತೆಗೆದುಕೊಂಡರು. ಈ ವೇಳೆ ಶಾಸಕರ ಬೆಂಬಲಿಗರು ಶ್ರೀನಿವಾಸ್ ಅವರನ್ನು ತಳ್ಳಿದ್ದಲ್ಲದೆ, ಅವಾಚ್ಯವಾಗಿ ನಿಂದಿಸಿದ್ದು ನಡೆಯಿತು.

ಶ್ರೀನಿವಾಸ್ ವಾತನಾಡಿ, ತಟ್ಟೆಕೆರೆ ಗ್ರಾಮದವರೆಗೆ ರಸ್ತೆ ನಿರ್ಮಿಸುವುದಾಗಿ ಹೇಳಲಾಗಿತ್ತು. ಈಗ ಏರಿ ಮೇಲೆ ವಾತ್ರ ನಿರ್ಮಾಣ ಮಾಡುವುದಾಗಿ ಹೇಳುತ್ತಿದ್ದಾರೆ. ಈಗಾಗಲೇ ಎರಡು ಬಾರಿ ಕಾಮಗಾರಿಗೆ ಪೂಜೆ ಮಾಡಿ ಹೋದವರು ಈಗ ಮೂರನೇ ಬಾರಿ ಪೂಜೆ ಮಾಡಲು ಬಂದಿದ್ದಾರೆ. ಈ ಬಗ್ಗೆ ಶಾಸಕರನ್ನು ಪ್ರಶ್ನಿಸಿದಾಗ ತಳ್ಳಾಟ, ನೂಕಾಟ ನಡೆದಿದೆ. ಮುಂದಿನ ಚುನಾವಣೆಯಲ್ಲಿ ಇದರ ಪರಿಣಾಮ ಅನುಭವಿಸಲಿದ್ದಾರೆ ಎಂದರು.

ಕಳೆದ 10 ವರ್ಷಗಳಲ್ಲಿ ಖಾಸಗಿ ಕಾರ್ಯಕ್ರಮಕ್ಕೆಂದು 2 ಬಾರಿ ವಾತ್ರ ಗ್ರಾಮಕ್ಕೆ ಭೇಟಿ ನೀಡಿದ್ದಾರೆ. ಏರಿ ರಸ್ತೆ ಕಿತ್ತುಹೋಗಿದ್ದು ಸಮಸ್ಯೆಯಾಗಿದೆ. ಮಳೆ ಬಂದರೆ ನರಕಯಾತನೆ ಅನುಭವಿಸಬೇಕಾಗಿದೆ. ಇದು ಸರಿಯೇ ಎಂದು ಪ್ರಶ್ನಿಸಿದ ಶ್ರೀನಿವಾಸ್, ಗ್ರಾಪಂನಿಂದ ಗ್ರಾಮದ ಒಳಗಿನ ರಸ್ತೆ ಕಾಮಗಾರಿ ನಡೆದಿದೆಯೇ ಹೊರತು ಶಾಸಕರ ಅನುದಾನದಿಂದ ಯಾವುದೇ ಕಾಮಗಾರಿ ನಡೆದಿಲ್ಲ ಎಂದು ಆರೋಪಿಸಿದರು.

ಜಿಪಂ ವಾಜಿ ಸದಸ್ಯ ಎಸ್‌ಸಿಬಿಎಸ್ ಶಿವರುದ್ರಯ್ಯ,  ಗ್ರಾಪಂ ವಾಜಿ ಅಧ್ಯಕ್ಷ ಚನ್ನಗಂಗಯ್ಯ, ಕಾಮರಾಜು, ಗೋಪಾಲ್, ಜವಜರ್ ಮುಂತಾದವರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net