

ಮಾಗಡಿ: ತೋಟದ ಒಂಟಿ ಮನೆಗೆ ನುಗ್ಗಿ ಚಿನ್ನಾಭರಣ, ಸೀರೆ, ಅಕ್ಕಿಕದ್ದು ಪರಾರಿಯಾಗಿರುವ ಘಟನೆ ಮಾಗಡಿ ತಾಲೂಕಿನ ನೇರಳೇಕೆರೆ ಗ್ರಾಮದಲ್ಲಿ ನಡೆದಿದೆ.
ತಾಲೋಕಿನ ನೆರಳೇಕೆರೆ ಗ್ರಾಮದ ತೋಟದ ಗಂಗಲಕ್ಷಮ್ಮ ಎಂಬುವರ ಮನೆಗೆ ನುಗ್ಗಿದ ಕಳ್ಳರು ಮನೆಯಲ್ಲಿದ್ದ ಐದಾರು ಸೀರೆ, 50 ಕೇಜಿ ಅಕ್ಕಿ ಹಾಗೂ ವೃದ್ದೆಯ ಚಿನ್ನದ ಸರ, ಓಲೆ,ಜುಮುಕಿಗಳನ್ನು ಕಿತ್ತುಕೊಂಡು ಪರಾರಿಯಾಗಿದ್ದಾರೆ.
ಚಿನ್ನಾಭರಣ ವನ್ನು ಕತ್ತಿನಿಂದ ತೆಗೆಯುವ ವೇಳೆ ವೃದ್ದೆ ವಿರೋಧಿಸಿದಕ್ಕೆ ವೃದ್ದೆಯ ಹೆದೆಯ ಮೇಲೆ ಕಳ್ಳರು ಕಾಲಿಕ್ಕಿ ಕಸಿದು ಮನೆಯ ಚಿಲಕ ಹಾಕಿ ಪರಾರಿಯಾಗಿದ್ದಾರೆ.
ಸೋಮವಾರ ತಡರಾತ್ರಿ ಯಿಂದ ವೃದ್ದೆ ತೀವ್ರ ಅಸ್ವಸ್ಥಗೊಂಡು ಬೆಳಗಿನ ಜಾವದ ಒರೆಗೆ ಕಿರುಚಾಡಿದ್ದಾರೆ ನಂತರ ಸ್ಥಳಿಯರು ಮನೆಯ ಚಿಲಕ ತೆಗೆದು ವೃದ್ದೆಯನ್ನು ಕುಣಿಗಲ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ.
ಸ್ಥಳಕ್ಕೆ ಎಸ್ಪಿ ಕಾರ್ತಿಕ್‌ರೆಡ್ಡಿ, ಕುದೂರು ಪೊಲೀಸ್ ಇನ್ಸ್ ಪೆಕ್ಟರ್ ಎಪಿ.ಕುಮಾರು ಬೇಟಿ ನೀಡಿ ಕುಣಿಗಲ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವೃದ್ದೆಯ ಆರೋಗ್ಯ ವಿಚಾರಿಸಿದ್ದಾರೆ.
ಘಟನೆ ಕುರಿತು ಕುದೂರು ಪೊಲೀಸ್ ಠಾಣೆಯಲ್ಲಿ ಪ್ದಕರಣ ದಾಖಲಾಗಿದೆ.