

ಮಾಗಡಿ: ವ್ಯಕ್ತಿಯೊಬ್ಬನನ್ನು ಬಂಧಿಸಿರುವ ತಾವರೆಕೆರೆ ಪೊಲೀಸರು ಆತ ಬೆಳೆದಿದ್ದ 5 ಲಕ್ಷ ರೂ. ಮೌಲ್ಯದ 10 ಕೆ.ಜಿ. ಗಾಂಜಾ ಸೊಪ್ಪು ವಶಪಡಿಸಿಕೊಂಡಿದ್ದಾರೆ.
ಮಾಗಡಿ ತಾಲೂಕಿನ ಚೋಳನಾಯ್ಕನಹಳ್ಳಿಯ ಗೋವಿಂದಯ್ಯ ಬಂಧಿತ. ಈತ ಗಂಗಪ್ಪನಹಳ್ಳಿ ಬ್ರಿಡ್ಜ್ ಬಳಿ ಇರುವ ಜಮೀನಿನಲ್ಲಿ ಗಾಂಜಾ ಬೆಳೆದಿರುವ ಮಾಹಿತಿ ಪಡೆದ ತಾವರೆಕೆರೆ ಪೊಲೀಸರು ದಾಳಿ ನಡೆಸಿ ಜಮೀನಿನಲ್ಲಿ ಬೆಳೆದಿದ್ದ ಗಾಂಜಾ ಸೊಪ್ಪನ್ನು ವಶಕ್ಕೆ ಪಡೆದು ಆರೋಪಿಯನ್ನು ಬಂಧಿಸಿದ್ದಾರೆ.
ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದ ಪಿಎಸ್ಐ ರಾಮಪ್ಪ ಬಿ.ಗುತ್ತೇರ್, ಪಿಎಸ್ಐ ಮಹ್ಮದ್ ಅಲ್ಲಾಖಾನ್, ಎಂ.ಭಾಸ್ಕರ್, ಮಂಜುನಾಥ, ಲಕ್ಷ್ಮೀಕಾಂತ, ಹೇಮಂತ್ ಕುಮಾರು, ಶರಣಪ್ಪ, ತಿಪ್ಪೆಸ್ವಾಮಿ ಹರೀಶ್ ಅವರ ಕಾರ್ಯವನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಾರ್ತಿಕ್ರೆಡ್ಡಿ ಶ್ಲಾಸಿದ್ದಾರೆ.