ಗ್ರಾಮಸ್ಥರಿಂದ ಕಲ್ಲು ತೂರಾಟ: ಪೆಟ್ಟು ತಿಂದು ಆಸ್ಪತ್ರೆಗೆ ದಾಖಲಾದ ಮಾಗಡಿ ಪಿಎಸ್​ಐ..!

PSI
Published on

ರಾಮನಗರ: ಮಾಗಡಿ ಪಿಎಸ್ಐ ಹಾಗೂ ಸಾರ್ವಜನಿಕರ ನಡುವೆ ನಡೆದ ಗಲಾಟೆಯಲ್ಲಿ ಪಿಎಸ್ಐ ಶ್ರೀಕಾಂತ್ ತಲೆಗೆ ಗಾಯವಾಗಿದ್ದು, ಅವರನ್ನು ನಿಮಾನ್ಸ್​ ಆಸ್ಪತ್ರೆಗೆ ದಾಖಲಿಸಲಾಗಿದೆ.

ಮಾಗಡಿ ತಾಲೂಕಿನ ಜೇನುಕಲ್ಲು ಪಾಳ್ಯದಲ್ಲಿ ಹೊಸದಾಗಿ ನಿರ್ಮಾಣಗೊಳ್ಳುತ್ತಿರುವ ಕ್ರಸರ್​ಗೆ ಗ್ರಾಮಸ್ಥರು ತಡೆವೊಡ್ಡಿದ್ದು, ಕ್ರಸರ್ ಮಾಲಿಕ ದೂರು ನೀಡಿದ ಹಿನ್ನೆಲೆಯಲ್ಲಿ ಪಿಎಸ್​ಐ ಶ್ರೀಕಾಂತ್​ ಗ್ರಾಮಕ್ಕೆ ಭೇಟಿ ನೀಡಿದ್ದರು. ಗ್ರಾಮದ ಗಿರಿಯಪ್ಪ ಎಂಬ ವ್ಯಕ್ತಿಯನ್ನು ಕರೆತರುವಾಗ ಪೊಲೀಸ್ ಹಾಗೂ ಸಾರ್ವಜನಿಕರ ನಡುವೆ ಮಾತಿನ ಚಕಮಕಿ ನಡೆದಿದೆ.

ಇದಾದ ಬಳಿಕ ಗ್ರಾಮಸ್ಥರು ಪೊಲೀಸರ ವಾಹನದ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಇದರಿಂದ ಪಿಎಸ್ಐ ಶ್ರೀಕಾಂತ್ ಹಾಗೂ ಮೂವರು ಗ್ರಾಮಸ್ಥರಿಗೆ ಗಾಯಗಳಾಗಿದ್ದು, ಅವರನ್ನು ಚಿಕಿತ್ಸೆಗಾಗಿ ಬೆಂಗಳೂರು ನಿಮಾನ್ಸ್​ಗೆ ರವಾನಿಸಲಾಗಿದೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net