ಮನೆಯಲ್ಲಿ ಮಲಗಿದ್ದ 3 ವರ್ಷದ ಮಗುವನ್ನು ಹೊತ್ತೊಯ್ದು ಕೊಂದು ತಿಂದ ಚಿರತೆ

Leapord Attack
Published on

ರಾಮನಗರ: ಮನೆಯಲ್ಲಿ ಮಲಗಿದ್ದ 3 ವರ್ಷದ ಗಂಡು ಮಗುವನ್ನು ಚಿರತೆಯೊಂದು ಹೊತ್ತೊಯ್ದು ಕೊಂದು ತಿಂದು ಹಾಕಿರುವ ಘಟನೆ ಮಾಗಡಿ ತಾಲೂಕಿನ ಕದಿರಯ್ಯನಪಾಳ್ಯದಲ್ಲಿ ಶುಕ್ರವಾರ ರಾತ್ರಿ ನಡೆದಿದೆ.

ಚಿರತೆ ದಾಳಿಗೆ ತುತ್ತಾದ ಮಗುವಿನ ಹೆಸರು ಹೇಮಂತ್. ತಂದೆ ಚಂದ್ರಪ್ಪ ಹಾಗೂ ತಾಯಿ ಮಂಗಳಗೌರಮ್ಮ ಅವರ ಪ್ರೀತಿಯ ಪುತ್ರನಾಗಿದ್ದ. ಮಂಗಳಗೌರಮ್ಮ ತಾಯಿ ಮನೆ ಕದರಯ್ಯನಪಾಳ್ಯವಾಗಿದ್ದು, ವಾರದ ಹಿಂದಷ್ಟೇ ಊರಿಗೆ ಆಗಮಿಸಿದ್ದರು.

ಸೆಕೆಯು ಹೆಚ್ಚಾಗಿದ್ದರಿಂದ ಬಾಗಿಲನ್ನು ತೆರೆದು ಮಲಗಿದ್ದರು. ಈ ವೇಳೆ ಬಂದ ಚಿರತೆ ಮಗುವನ್ನು ಹೊತ್ತೊಯ್ದಿದೆ. ಕತ್ತಲೆಯಲ್ಲಿ ಹುಡುಕಾಡಿದಾಗ ಮನೆಯಿಂದ ಸುಮಾರು ಅರವತ್ತು ಮೀಟರ್ ದೂರದ ಪೊದೆಯಲ್ಲಿ ಮಗುವಿನ ಶವ ಪತ್ತೆಯಾಗಿದೆ .

ಘಟನಾ ಸ್ಥಳಕ್ಕೆ ಅರಣ್ಯ ಇಲಾಖೆ‌ ಅಧಿಕಾರಿಗಳು ಹಾಗೂ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net