

ಮಾಗಡಿ: ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಾಕ್ಷರಿ ಮೇಲೆ ಆರೋಪ ಮಾಡಿರುವವರ ವಿರುದ್ಧ ಶಿಸ್ತುಕ್ರಮ ಕೈಗೊಳ್ಳುವಂತೆ ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎಂ.ಜಿ.ಶಿವರಾಮಯ್ಯ ನೇತೃತ್ವದಲ್ಲಿ ಉಪ ತಹಶೀಲ್ದಾರ್ ಶಿವಸ್ವಾಮಿಗೆ ಮನವಿ ಸಲ್ಲಿಸಲಾಯಿತು.
ಈ ವೇಳೆ ಮಾತನಾಡಿದ ಎಂ.ಜಿ.ಶಿವರಾಮಯ್ಯ, ಸರ್ಕರಿ ನೌಕರರ ಸಂಘದ ರಾಜ್ಯಾಧ್ಯಕ್ಷರು ಜಿಲ್ಲೆ, ತಾಲೂಕು ಶಾಖೆಗಳ ತೇಜೋವಧೆ ಮಾಡುವ ದುರುದ್ದೇಶದಿಂದ ಕೂಡಿದ ಆಧಾರ ರಹಿತ ಆರೋಪಗಳನ್ನು ಮಾಡಿ ಸಂಘಟನೆಯ ವಿರುದ್ದ ಸಾಮಾಜಿಕ ಜಾಲತಾಣಗಳಲ್ಲಿ ಅಪಪ್ರಚಾರ ಮಾಡುತ್ತಿರುವ ಅಧೀನ ಕಾರ್ಯದರ್ಶಿ ಶಾಂತರಾಮ, ಸಚಿವಾಲಯದ ಶಾಖಾಧಿಕಾರಿ ಗುರುಸ್ವಾಮಿ, ಮೆಹಬೂಬ್ ಪಾಷ, ಶಿವರುದ್ರಯ್ಯ, ನಿಂಗೇಗೌಡ ಅವರುಗಳ ಮೇಲೆ ಕಾನೂನು ಕ್ರಮಕೈಗೊಳ್ಳುವಂತೆ ಸರ್ಕಾರಕ್ಕೆ ಮನವಿ ಮಾಡಿದರು.
ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಾಕ್ಷರಿ ನಕಲಿ ದಾಖಲೆ ಸೃಷ್ಠಿಸಿ ಸಂಘಕ್ಕೆ ಹಾನಿ ಉಂಟುಮಾಡಿಲ್ಲ, ಸಂಘಕ್ಕೆ ಆಡಳಿತ ಅಧಿಕಾರಿ ನೇಮಿಸುವಂತೆ ಸಾಮಾಜಿಕ ಜಾಲತಾಣಗಳಲ್ಲಿ ಆರೋಪ ಮಾಡಿರುವವರು ಕೂಡಲೇ ರಾಜ್ಯಾಧ್ಯಕ್ಷರ ಕ್ಷಮೆ ಕೋರಬೇಕು. ಇಲ್ಲದಿದ್ದರೆ ರಾಜ್ಯವ್ಯಾಪ್ತಿ ಸರಕಾರಿ ನೌಕರರು ಬೀದಿಗಿಳಿದು ಹೋರಾಟ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.
ಜವಬ್ದಾರಿಯುತ ರಾಜ್ಯಾಧ್ಯಕ್ಷರ ಮೇಲೆ ಆರೋಪ ಮಾಡುವ ಮುನ್ನಾ ಯೋಚಿಸಿ ಆರೋಪಿಸಬೇಕು ಅದನ್ನು ಬಿಟ್ಟು ನಾಲಿಗೆ ಅರಿಬಿಡುವುದು ಸರಿಯಲ್ಲ. ಸಿ.ಎಸ್.ಷಡಾಕ್ಷರಿ ರಾಜ್ಯಾಧ್ಯಕ್ಷರಾದ ನಂತರ ಸಂಘಕ್ಕೆ ಗೌರವ ತಂದಿದ್ದಾರೆ, ಸರ್ಕಾಇ ನೌಕರರ ಧ್ವನಿಯಾಗಿದ್ದಾರೆ, ನೌಕರರ ಶಾಶ್ವತ ಸಮಸ್ಯೆಗೆ ಪರಿಹಾರ ನೀಡಿದ್ದಾರೆ. ರಾಜ್ಯವ್ಯಾಪ್ತಿ ಸಂಘಗಳನ್ನು ಬಲಿಷ್ಠಗೊಳಿಸಿದ್ದಾರೆ ಅಂಥಹವರ ವಿರುದ್ದ ಆರೋಪಮಾಡುವುದು ಸರಿಯಲ್ಲ ಇದನ್ನು ತಾಲೂಕು ಸರಕಾರಿ ನೌಕರರ ಸಂಘ ತೀವ್ರವಾಗಿ ಖಂಡಿಸುತ್ತದೆ ಎಂದರು.
ತಾಲೂಕು ನೌಕರರ ಸಂಘದ ಉಪಾಧ್ಯಕ್ಷ ಯೋಗೇಶ್, ಕಾರ್ಯದರ್ಶಿ ಸಿ.ಪ್ರಕಾಶ್, ರಾಜ್ಯ ಪರಿಷತ್ ಸದಸ್ಯ ಬಿ.ಧರಣೇಶ್, ಖಜಾಂಚಿ ಮಂಗಳ ಗೌರಮ್ಮ, ಜಂಟಿ ಕಾರ್ಯದರ್ಶಿ ಬಂಗಾರು ದೇಶಿಕ್, ಚೇತನ್ ಮಹೇಶ್, ಶಿವಸ್ವಾಮಿ, ಬಸವರಾಜು, ಫೈರೋಜ್ ಎಂ. ಕೆಪಿ. ರಂಗಸ್ವಾಮಯ್ಯ, ಬಿ.ಎನ್.ಜಯರಾಮು, ರೇಣುಕಾರಾಧ್ಯ, ಮಹದೇವ್ ಇತರರು ಇದ್ದರು.