

ಮಾಗಡಿ: ಕಾರು- ಬೈಕ್ ಮುಖಾಮುಖಿ ಡಿಕ್ಕಿಯಾಗಿ ಬೈಕ್ ಸವಾರ ಗಂಬೀರಗಾಯವಾಗಿರುವ ಘಟನೆ ತಾಲೂಕಿನ ಕಾಳಾರಿಗೇಟ್ ಬಳಿ ನಡೆದಿದೆ.
ತಾಲೂಕಿನ ಕುಣಿಗಲ್- ಕಾಳಾರಿ ಗೇಟ್ ಬಳಿ ಕುಣಿಗಲ್ ಕಡೆಯಿಂದ ಬರುತ್ತಿದ್ದ ಕಾರು ಹಾಗೂ ಮಾಗಡಿ ಕಡೆಯಿಂದ ಕುಣಿಗಲ್ ಕಡೆ ಹೊರಟಿದ್ದ ಬೈಕ್ ನಡುವೆ ಮುಖಾಮುಖಿ ಡಿಕ್ಕಿ ಸಂಬಂವಿಸಿದೆ. ಇದರ ಪರಿಣಾಮ ಬೈಕ್ ಒಂದು ಕಡೆ ಸವಾರ ಒಂದು ಕಡೆ ಬಿದ್ದು ಶಿವನಸಂದ್ರ ಗ್ರಾಮದ ರಾಮು ಎಂಬುವರು ಗಂಬೀರ ಗಾಯಗೊಂಡಿದ್ದಾರೆ ಚಿಕಿತ್ಸೆಗಾಗಿ ಸರ್ಕಾರಿ ಆಸ್ಪತ್ರೆಗೆ ಸ್ಥಳಿಯರು ರವಾನಿಸಿದ್ದಾರೆ.
ಕಾಳಾರಿ ಗೇಟ್ ಬಳಿ ಕೆಶಿಫ್ ಸಮರ್ಪಕ ರಸ್ತೆ ನಿಮಾರ್ಣ ಮಾಡಿಲ್ಲ ಎದುರು ಗಡೆ ಬರುವ ವಾಹನಗಳು ಕಾಣದ ಕಾರಣ ಈ ಘಟನೆಗೆ ಕಾರಣವಾಗಿದ್ದು ಸಮರ್ಪಕವಾಗಿ ರಸ್ತೆ ಹಾಗೂ ಗೇಟ್ ಬಳಿ ಲೈಟ್ ಅಳವಡಿಸುವಂತೆ ಕೆಶಿಪ್ ಅಧಿಕಾರಿಗಳಿಗೆ ಶಾಸಕರು ಸಾಕಷ್ಟು ಸಭೆಗಳಲ್ಲಿ ಸೂಚಿಸಿದರು ಕ್ಯಾರೆ ಎನ್ನುತ್ತಿಲ್ಲ ಇದರಿಂದ ನಾಗರೀಕರು ಪ್ರಾಣವನ್ನು ಕಳೆದುಕೊಳ್ಳುವಂತಾಗಿದೆ ಎಂಬುದು ಸ್ಥಳಿಯರ ಆರೋಪವಾಗಿದೆ.