

ಮಾಗಡಿ: . ಬೈಕ್ ಗೆ ಕಾರು ಡಿಕ್ಕಿಯೊಡೆದು ಅಪ್ಪ-ಮಗಳು ಮೃತಪಟ್ಟಿರುವ ಘಟನೆ ಮಾಗಡಿ ಪೊಲೀಸ್ ಠಾಣೆಯಲ್ಲಿ ವ್ಯಾಪ್ತಿಯಲ್ಲಿ ನಡೆದಿದೆ.
ತಾಲೋಕಿನ ಕಲ್ಯಾ ಗ್ರಾಮದ ಡೇರಿ ಅಧ್ಯಕ್ಷ ಕೆಪಿ.ಯೋಗೇಶ್ (47) ಮತ್ತು ಇವರ ಮಗಳು ಅಷೀತ (14) ಮೃತಪಟ್ಟವರು. ಯೋಗೇಶ್ ತಮ್ಮ ಮಗಳನ್ನು ಬೈಕ್ ನಲ್ಲಿ ಜಮಾಸಾಬ್ ಪಾಳ್ಯದ ಬಳಿಯ ವೆಂಕಟ್ ಪಬ್ಲಿಕ್ ಶಾಲೆಗೆ ಬಿಡಲು ತೆರಳಿದ್ದ ವೇಳೆ, ಶಾಲೆ ಬಳಿ ತಿರುವು ಪಡೆಯುವಾಗಿ ಹುಲಿಯೂರು ದುರ್ಗದ ಕಡೆಗೆ ತೆರಳುತ್ತಿದ್ದ ಕಾರು ಹಿಂದಿನಿಂದ ಬೈಕ್ ಗೆ ಡಿಕ್ಕಿಯೊಡೆದಿದ್ದು, ಅಪ್ಪ,ಮಗಳು ಸ್ಥಳದಲ್ಲೆ ಸಾವನ್ನಪಿದ್ದಾರೆ.
ವಿಷಯ ತಿಳಿಯ ಮಾಗಡಿ ಪೋಲೀಸರು ಸ್ಥಳಕ್ಕೆ ಬೇಟಿ ನೀಡಿ ಪರಿಶೀಲನೆ ನಡೆಸಿ ಮೃತದೇಹವನ್ನು ಮಾಗಡಿ ಸರ್ಕಾರಿ ಆಸ್ಪತ್ರೆಯ ಶವಗಾರಕ್ಕೆ ಕೋಡೋಲಾಯಿತು. ಅಪ್ಪ ಮಗಳ ಸಾವಿನಿಂದ ಕುಟುಂಬ ಸದಸ್ಯರ ಆಕ್ರಂದನ ಮುಗಿಲು ಮುಟ್ಟಿತ್ತು. ಮಾಗಡಿ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.