ಕೆಬಿಸಿ ಲಾಟರಿ ಹೆಸರಲ್ಲಿ ವಂಚನೆ

Cyber Crime
Published on

ರಾಮನಗರ: ಕೆಬಿಸಿ ಲಾಟರಿಯಲ್ಲಿ 25 ಲಕ್ಷ ರೂ. ವಿಜೇತರಾಗಿದ್ದೀರಿ ಎಂದು ನಂಬಿಸಿ ಮಹಿಳೆಯಿಂದ ಸುಮಾರು 5 ಲಕ್ಷ ರೂ. ದೋಚಿರುವ ಪ್ರಕರಣ ಸಿಇಎನ್ ಠಾಣೆಯಲ್ಲಿ ದಾಖಲಾಗಿದೆ.

ಚನ್ನಪಟ್ಟಣ ತಾಲೂಕಿನ ಮೆಣಸಿಗನಹಳ್ಳಿಯ ಶಶಿ ಹಣ ಕಳೆದುಕೊಂಡವರು. ಇವರ ಮೊಬೈಲ್ ವಾಟ್ಸ್‌ಆ್ಯಪ್‌ಗೆ ಕರೆ ಮಾಡಿದ ಅಪರಿಚಿತರು ನಿಮಗೆ ಕೆಬಿಸಿ ಲಾಟರಿಯಲ್ಲಿ 25 ಲಕ್ಷ ರೂ ಬಂದಿದೆ. ಹಣ ಪಡೆಯಲು ಸರ್ಕಾರದ ತೆರಿಗೆಯಾಗಿ 8 ಸಾವಿರ ರೂ. ನೀಡಬೇಕು ಎಂದು ಬ್ಯಾಂಕ್ ಖಾತೆಗೆ ಹಣ ಹಾಕಿಸಿಕೊಂಡಿದ್ದಾರೆ.

ನಂತರ ಲಾಟರಿ ಪಡೆಯಬೇಕಾದರೆ 5 ಲಕ್ಷ ರೂ.ತೆರಿಗೆ ಕಟ್ಟಬೇಕು ಎಂದು ಹೇಳಿದ್ದಾರೆ. ಇದನ್ನು ನಂಬಿದ ಮಹಿಳೆ ಬ್ಯಾಂಕ್ ಖಾತೆಯಿಂದ ವಿವಿಧ 23 ಬ್ಯಾಂಕ್ ಖಾತೆಗಳಿಗೆ ಒಟ್ಟು 5 ಲಕ್ಷ ರೂ. ಹಣ ಕಳುಹಿಸಿದ್ದಾರೆ. ಆದರೆ ಕಟ್ಟಿದ ಹಣವೂ ಇಲ್ಲದೆ ಲಾಟರಿ ಹಣವೂ ಇಲ್ಲದೆ, ವಂಚನೆಗೊಳಗಾಗಿರುವುದನ್ನು ಅರಿತ ಮಹಿಳೆ ಸಿಇಎನ್ ಠಾಣೆಗೆ ದೂರು ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net