ಬಿಬಿಎಂಪಿ ಆರ್ ಐಗೆ ಸೇರಿದ ಕನಕಪುರದ ಫಾರ್ಮ್ ಹೌಸ್ ಮೇಲೆ ಲೋಕಾ ದಾಳಿ

Lokayuktha (1)
Published on
ರಾಮನಗರ : ಅಕ್ರಮ ಅಸ್ತಿ ಗಳಿಕೆ ಆರೋಪ ಬಿಬಿಎಂಪಿ ಅಧಿಕಾರಿ ನಟರಾಜುಗೆ ಸೇರಿದ ಶಿವನಹಳ್ಳಿ ಗ್ರಾಮದ ಬಳಿಯ ಫಾರಂ ಹೌಸ್ ಮೇಲೆ ಬೆಳ್ಳಂ ಬೆಳಗ್ಗೆ  ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದಾರೆ.
ಅಕ್ರಮಗಳಿಕೆ ಆರೋಪದ ಮೇಲೆ ಬಿಬಿಎಂಪಿ ಅಧಿಕಾರಿ ನಟರಾಜ ರವರಿಗೆ ಸೇರಿದ ತಾಲೂಕಿನ ಕಸಬಾ ಹೋಬಳಿಯ  ಶಿವನಹಳ್ಳಿ ಗ್ರಾಮದ ಬಳಿಯ
ಫಾರ್ಮ್ ಹೌಸ್ ಮೇಲೆ ಲೋಕಾಯುಕ್ತ ಅಧಿಕಾರಿಗಳ ತಂಡ ಬೆಳ್ಳಂಬೆಳಗ್ಗೆ ದಾಳಿ ನಡೆಸಿತು.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಮಹದೇವಪುರ ವ್ಯಾಪ್ತಿಯಲ್ಲಿ ಬಿಬಿಎಂಪಿ  ಆರ್ ಐ  ಆಗಿರುವ ನಟರಾಜು ಅಕ್ರಮವಾಗಿ ಆಸ್ತಿ ಗಳಿಸಿದ್ದಾರೆ  ಎಂದು ಲೋಕಾಯುಕ್ತ ಅಧಿಕಾರಿಗಳ ತಂಡ ದಾಳಿ ನಡೆಸಿ ತೀವ್ರವಾಗಿ ಶೋಧ ನಡೆಸಿದರು.
 ಬೆಳಿಗ್ಗೆ ಶಿವನಹಳ್ಳಿ ಬಳಿಗೆ ಫಾರ್ಮ್ ಹೌಸ್ ಮೇಲೆ  ದಾಳಿ ನಡೆಸಿದ ಅಧಿಕಾರಿಗಳ ತಂಡ ಮಹತ್ತರವಾದ ದಾಖಲೆಗಳು ಕಾಗದಪತ್ರಗಳನ್ನು ವಶಪಡಿಸಿಕೊಂಡಿದ್ದಾರೆ ಅಕ್ರಮವಾಗಿ ಹಲವಾರು ಕಡೆಗಳಲ್ಲಿ  ಆಸ್ತಿ ಖರೀದಿ ಮಾಡಲಾಗಿದ್ದು ಈ ನಿಟ್ಟಿನಲ್ಲಿ  ನಟರಾಜುಗೆ ಸೇರಿದ   ಬೆಂಗಳೂರು ಸೇರಿದಂತೆ ವಿವಿಧ ಕಡೆಗಳಲ್ಲಿ ಏಕಕಾಲಕ್ಕೆ ದಾಳಿ ನಡೆಸಿದ್ದಾರೆ.
 ಬೆಂಗಳೂರಿನ ಮಹದೇವಪುರ ಕಾರ್ಯ ವ್ಯಾಪ್ತಿಯಲ್ಲಿ ಅಕ್ರಮವಾಗಿ ಹಣ ಸಂಪಾದನೆ ಮಾಡಿದ್ದು ಇದರ ಬಗ್ಗೆ ಲೋಕಾಯುಕ್ತಕ್ಕೆ ಹಲವಾರು ದೂರುಗಳು ಸಲ್ಲಿಕೆಯಾಗಿದ್ದ ಹಿನ್ನೆಲೆಯಲ್ಲಿ ನಟರಾಜುಗೆ ಸೇರಿದ ಮನೆಗಳು ಆಸ್ತಿಗಳ ಮೇಲೆ  ಏಕಕಾಲಕ್ಕೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ಹಲವಾರು ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net