

ಜಾನಪದ ಪರಿಷತ್ ಚನ್ನಪಟ್ಟಣ ತಾಲೂಕು ಘಟಕ ಅಧ್ಯಕ್ಷ ವಿಜಯ್ ರಾಂಪುರ ಅಭಿಪ್ರಾಯಚಿಟ್ ಮೇಳ ಕಲಾವಿದ ಕುಮಾರಯ್ಯ ಅವರಿಗೆ ಸನ್ಮಾನ
ರಾಮನಗರ
ಬದುಕಿಗೊಂದು ಅರ್ಥ ಬರಬೇಕಾದರೆ ಜನಪದರ ಬದುಕನ್ನು ಕಲಿಯಬೇಕು. ಭವಿಷ್ಯದಲ್ಲಿ ಜಾನಪದ ಪರಿಷತ್ತಿನ ವಿದ್ಯಾರ್ಥಿ ಘಟಕಗಳು ರೂಪುಗೊಂಡರೆ ಕಲೆ ಉಳಿಯುತ್ತದೆ ಎಂದು ಪರಿಷತ್ನ ಚನ್ನಪಟ್ಟಣ ತಾಲೂಕು ಘಟಕ ಅಧ್ಯಕ್ಷ ವಿಜಯ್ ರಾಂಪುರ ಅಭಿಪ್ರಾಯಪಟ್ಟರು.
ಕರ್ನಾಟಕ ಜಾನಪದ ಪರಿಷತ್ ಹಾಗೂ ಜಾನಪದ ಲೋಕ ವತಿಯಿಂದ ರಾಮನಗರದ ಜಾನಪದ ಲೋಕದಲ್ಲಿ ಹಮ್ಮಿಕೊಂಡಿದ್ದ ನಾಡೋಜ ಎಚ್.ಎಲ್. ನಾಗೇಗೌಡರ ನೆನಪಿನ 'ಲೋಕಸಿರಿ-85' ಕಾರ್ಯಕ್ರಮದಲ್ಲಿ ಮಾತನಾಡಿ, ಕಲಾವಿದರು ಕಲೆಗೆ ಮಕ್ಕಳು, ದೇವರಿಗಿಂತ ಹೆಚ್ಚು ಬೆಲೆ ಕೊಡುತ್ತಾರೆ. ಜಾನಪದ ಉಳಿದರೆ ಜನರ ಬದುಕು ಉಳಿಯುತ್ತದೆ ಎಂದರು.
ಪ್ರಾಧ್ಯಾಪಕ ಡಾ. ಶಿವಲಿಂಗೇಗೌಡ ಮಾತನಾಡಿ, ಶ್ರೇಷ್ಠ ಕಲಾವಿದರು ಟಿ.ವಿ. ಮಾಧ್ಯಮಗಳಿಂದ ಬರುತ್ತಾರೆ ಎಂದು ಅಂದುಕೊಂಡಿರುವುದು ತಪ್ಪು. ನಮ್ಮ ಶ್ರೀಮಂತ ಪರಂಪರೆಯನ್ನು ನೋಡಬೇಕೆಂದರೆ ಜನಪದವನ್ನು ಅಧ್ಯಯನ ಮಾಡಬೇಕು. ಬದುಕಿನ ಸೊಗಸು, ಸಾಂಸತಿಕ ಸಿರಿಯನ್ನು ಜನಪದರಿಂದ ತಿಳಿಯಬಹುದು. ಇಂತಹ ಹಿರಿಯ ಕಲಾವಿದರ ನಂತರ ಈ ಕಲೆಯ ಸ್ಥಿತಿಯೇನು? ಈ ಕಲೆಯನ್ನು ಮುಂದುವರಿಸುವವರು ಯಾರು? ಎಂಬ ಪ್ರಶ್ನೆಗಳಿಗೆ ಉತ್ತರ ಹುಡುಕಬೇಕಿದೆ. ಈ ಎಲ್ಲ ಕೆಲಸವನ್ನು ಕರ್ನಾಟಕ ಜಾನಪದ ಪರಿಷತ್ತು ಮತ್ತು ಜಾನಪದ ಲೋಕ ಮಾಡುತ್ತಿರುವುದಕ್ಕೆ ಹೆಮ್ಮೆ ಎನಿಸುತ್ತದೆ ಎಂದರು.
ಲೋಕಸಿರಿ ತಿಂಗಳ ಅತಿಥಿ-85 ಕಾರ್ಯಕ್ರಮದ ಅಧ್ಯತೆ ವಹಿಸಿದ್ದ ಕಜಾಪ ಮ್ಯಾನೇಜಿಂಗ್ ಟ್ರಸ್ಟಿ ಆದಿತ್ಯ ನಂಜರಾಜ್ ಅವರು ತಿಂಗಳ ಅತಿಥಿ ಚಿಟ್ ಮೇಳ ಕಲಾವಿದ ಕುಮಾರಯ್ಯ ಅವರನ್ನು ಗೌರವಿಸಿದರು. ತಂಡದ ಕಲಾವಿದರಾದ ಬೋರೇಶ್-ವಾದ್ಯ, ವಿಜಯಾನಂದ-ನಾದಸ್ವರ, ತಿಮ್ಮಯ್ಯ-ಜಾಲರಿ, ಶಿವ. ಆರ್-ಶೃತಿ, ವೆಂಕಟರಾಯ-ಕರೆಡೆ, ಗುರುಸಿದ್ದಪ್ಪ-ಡೋಣು, ಲೋಕೇಶ್-ಡೋಣು ವಾದ್ಯಗಳನ್ನು ನುಡಿಸಿ, ಕಲಾ ಪ್ರದರ್ಶನ ನೀಡಿದರು.
ಕ್ಯುರೇಟರ್ ಡಾ. ಯು.ಎಂ. ರವಿ ಕಲಾವಿದರೊಂದಿಗೆ ಸಂವಾದ ನಡೆಸಿದರು. ಎಚ್.ಎಲ್.ನಾಗೇಗೌಡ ಕಲಾ ಶಾಲೆ ವಿದ್ಯಾರ್ಥಿಗಳು ಕೋರಣ್ಯ ಭಿೆಕ್ಷೆಯಲ್ಲಿ ಸಂಗ್ರಹಿಸಿದ ದವಸ - ಧಾನ್ಯವನ್ನು ಕಲಾವಿದರಿಗೆ ನೀಡಲಾಯಿತು. ಕಾರ್ಯನಿರ್ವಣಾಧಿಕಾರಿ ಸರಸವಾಣಿ ಮುಂತಾದವರು ಇದ್ದರು.