ಡಿಕೆ ಶಿ ಗಡ್ಡ ಬಿಟ್ಟಿರುವ ಪ್ರಶ್ನೆಗೆ 13ಕ್ಕೆ ಉತ್ತರ ಅಣ್ಣನ ಸಂಕಷ್ಟಕ್ಕೆ ಕಣ್ಣೀರು ಹಾಕಿದ ಸುರೇಶ್​

DK Suresh 1
Published on

ರಾಮನಗರ: ಅಣ್ಣ ಡಿ.ಕೆ.ಶಿವಕುಮಾರ್​ ಕಷ್ಟವನ್ನು ನೆನೆದು ಸಹೋದರ ಡಿ.ಕೆ.ಸುರೇಶ್​ ಕಣ್ಣೀರು ಹಾಕಿದ ಟನೆ ಕನಕಪುರದ ದೊಡ್ಡಾಲಹಳ್ಳಿಯಲ್ಲಿ ನಡೆದಿದೆ.

ಸ್ವಗ್ರಾಮ ದೊಡ್ಡಾಲಹಳ್ಳಿಯಲ್ಲಿ ಶನಿವಾರ ಪ್ರಚಾರ ನಡೆಸುವಾಗ ಸಹೋದರ ಪಡುತ್ತಿರುವ ಕಷ್ಟ ನೆನೆದು ಕಣ್ಣೀರು ಹಾಕಿದರು.

ಕಳೆದ ಎರಡೂವರೆ ವರ್ಷಗಳಿಂದಲೂ ಡಿ.ಕೆ.ಶಿವಕುಮಾರ್​ ಸರಿಯಾಗಿ ಊಟ, ನಿದ್ದೆ ಮಾಡಿಲ್ಲ. ಇಂತಹ ಕಷ್ಟದಲ್ಲಿ ಅವರು ಪ ಸಂಟನೆ ಮಾಡುತ್ತಿದ್ದಾರೆ ಎಂದು ಕಣ್ಣೀರು ಹಾಕಿದರು.

ಡಿಕೆಶಿ ಗಡ್ಡ ಏಕೆ ಬಿಟ್ಡಿದ್ದಾರೆ ಎಂದು ಕೇಳುತ್ತಾರೆ. ಇದಕ್ಕೆ ಉತ್ತರ ಕೊಡಬೇಕಾಗಿರುವುದು ೇತ್ರದ ಜನತೆ. ಈಗ ಅದಕ್ಕೆ ಉತ್ತರ ಕೊಡುವ ಕಾಲ ಬಂದಿದ್ದು, ಮೇ13 ರಂದು ಇದಕ್ಕೆ ಉತ್ತರ ಸಿಗಲಿದೆ ಎಂದು ಸುರೇಶ್​ ಹೇಳಿದರು.

ಎಲ್ಲರೂ ಡಿ.ಕೆ.ಶಿವಕುಮಾರ್​ ಅವರಿಗೆ ಮತ ಹಾಕಬೇಕು ಮತ್ತು ಹಾಕಿಸಬೇಕು. ಈ ಮೂಲಕ ರಾಜ್ಯದ ಸೇವೆ ಮಾಡಲು ಅವಕಾಶ ಮಾಡಿಕೊಡಬೇಕು. ರಾಜ್ಯದ ಅಭಿವೃದ್ಧಿ ಜತೆಗೆ ೇತ್ರವನ್ನು ಮತ್ತಷ್ಟು ಅಭಿವೃದ್ಧಿಪಡಿಸಲಾಗುವುದು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net