ಎಸ್ಸೆಸ್ಸೆಲ್ಸಿಯಲ್ಲಿ ಜಿಲ್ಲೆಗೆ ಎ ಗ್ರೇಡ್​ಶೇ.89.12 ಫಲಿತಾಂಶ ವಿದ್ಯಾರ್ಥಿನಿಯರೇ ಮೇಲುಗೈ, ಗ್ರಾಮೀಣರು ಮುಂದು

8 RMN-MGD P1
Published on

 ರಾಮನಗರ

ಈ ಬಾರಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಫಲಿತಾಂಶದಲ್ಲಿ ಶೇ.89.12 ಲಿತಾಂಶ ದಾಖಲು ಮಾಡುವ ಮೂಲಕ ಜಿಲ್ಲೆ ಎ ಗ್ರೇಡ್​ ಪಡೆದುಕೊಂಡಿದೆ.

ಪರೀಕ್ಷೆ ಬರೆದಿದ್ದ 12465 ವಿದ್ಯಾರ್ಥಿಗಳಲ್ಲಿ 11048 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಕಳೆದ ಬಾರಿ ಜಿಲ್ಲೆ ಶೇ.93.81 ಫಲಿತಾಂಶ ದಾಖಲು ಮಾಡಿತ್ತು. ಎಂದಿನಂತೆ ಈ ಬಾರಿ ಬಾಲಕಿಯರೇ ಮೇಲುಗೈ ಸಾಧಿಸಿದ್ದರೆ, ಗ್ರಾಮೀಣರು ಲಿತಾಂಶದಲ್ಲಿ ಮುಂದಿದ್ದಾರೆ.

ಫಲಿತಾಂಶದ ವಿವರ

ಉತ್ತೀರ್ಣರಾದ ವಿದ್ಯಾರ್ಥಿಗಳಲ್ಲಿ 650 ವಿದ್ಯಾರ್ಥಿಗಳು ಎ+ಪ್ಲಸ್​ನೊಂದಿಗೆ ತೇರ್ಗಡೆ ಹೊಂದಿದ್ದಾರೆ. 2104 ವಿದ್ಯಾರ್ಥಿಗಳು ಎ ಗ್ರೇಡ್​ನಲ್ಲಿ, 2949 ಮಂದಿ ಬಿ+ಪ್ಲಸ್​ ಗ್ರೇಡ್​ನಲ್ಲಿ, 2945 ವಿದ್ಯಾರ್ಥಿಗಳು ಬಿ ಗ್ರೇಡ್​ನಲ್ಲಿ, 2093 ಮಂದಿ ಸಿ+ಪ್ಲಸ್​ ಗ್ರೇಡ್​ನಲ್ಲಿ ಹಾಗೂ 361 ವಿದ್ಯಾರ್ಥಿಗಳು ಸಿ ಗ್ರೇಡ್​ನಲ್ಲಿ ಉತ್ತೀರ್ಣರಾಗಿದ್ದಾರೆ.

ಜಿಲ್ಲೆಗೆ ಚನ್ನಪಟ್ಟಣ ಫಸ್ಟ್​

ಈ ಬಾರಿಯ ಲಿತಾಂಶದಲ್ಲಿ ಶೇ.96.54 ಫಲಿತಾಂಶ ದಾಖಲಿಸಿರುವ ಚನ್ನಪಟ್ಟಣ ತಾಲೂಕು ಜಿಲ್ಲೆಗೆ ಪ್ರಥಮ ಸ್ಥಾನ ಪಡೆದುಕೊಂಡಿದೆ. ಶೇ.88.30 ಫಲಿತಾಂಶದೊಂದಿಗೆ ರಾಮನಗರ 2ನೇ ಸ್ಥಾನ, ಶೇ.87.23 ಫಲಿತಾಂಶದೊಂದಿಗೆ ಕನಕಪುರ ತಾಲೂಕು 3ನೇ ಸ್ಥಾನ ಹಾಗೂ ಶೇ.82.31 ಫಲಿತಾಂಶದೊಂದಿಗೆ ಮಾಗಡಿ ತಾಲೂಕು ಕೊನೆಯ ಸ್ಥಾನ ಪಡೆದುಕೊಂಡಿದೆ.

ಗ್ರಾಮೀಣರೇ ಮುಂದು

ಗ್ರಾಮೀಣ ವಿದ್ಯಾರ್ಥಿಗಳೇ ಹೆಚ್ಚಿನ ಸಂಖ್ಯೆಯಲ್ಲಿ ಪಾಸಾಗಿರುವುದು ಹೆಮ್ಮೆಯ ವಿಚಾರವಾಗಿದೆ. ಗ್ರಾಮೀಣ ಭಾಗದಲ್ಲಿ ಪರೀೆಕ್ಷೆ ಬರೆದಿದ್ದ 4718 ಬಾಲಕರ ಪೈಕಿ 4071 ಮಂದಿ ಉತ್ತೀರ್ಣರಾಗಿ ಶೇ.86.28 ಫಲಿತಾಂಶ ದಾಖಲಿಸಿದ್ದರೆ, ನಗರ ಪ್ರದೇಶದಲ್ಲಿ ಪರೀೆಕ್ಷೆ ಬರೆದಿದ್ದ 1597 ಬಾಲಕರ ಪೈಕಿ 1352 ಮಂದಿ ಉತ್ತೀರ್ಣರಾಗಿ ಶೇ. 84.65 ಫಲಿತಾಂಶ ಪಡೆದಿದ್ದಾರೆ. ಇನ್ನು ಗ್ರಾಮೀಣ ಭಾಗದ 4519 ಬಾಲಕಿಯರ ಪೈಕಿ 4141 ಮಂದಿ ಉತ್ತೀರ್ಣರಾಗಿ ಶೇ. 91.63 ಫಲಿತಾಂಶ ಪಡೆದುಕೊಂಡಿದ್ದರೆ, ನಗರ ಪ್ರದೇಶದ 1631 ಬಾಲಕಿಯರಲ್ಲಿ 1484 ಮಂದಿ ತೇರ್ಗಡೆ ಹೊಂದುವ ಮೂಲಕ ಶೇ. 90.98 ಫಲಿತಾಂಶ ದಾಖಲಿಸಿದ್ದಾರೆ.

ಅನುದಾನರಹಿತ ಶಾಲೆಗಳ ಸಾಧನೆ

ಫಲಿತಾಂಶದಲ್ಲಿ ಅನುದಾನರಹಿತ ಶಾಲೆಗಳ ವಿದ್ಯಾರ್ಥಿಗಳು ಹೆಚ್ಚು ಪಾಸಾಗಿದ್ದಾರೆ. ಅನುದಾನರಹಿತ ಶಾಲೆಗಳ 3783 ವಿದ್ಯಾರ್ಥಿಗಳಲ್ಲಿ 3538 ಮಂದಿ ಪಾಸಾಗಿದ್ದು, ಶೇ. 93.52 ಫಲಿತಾಂಶ ದಾಖಲು ಮಾಡಿದ್ದಾರೆ.

ಅನುದಾನಿತ ಶಾಲೆಯ 3172 ವಿದ್ಯಾರ್ಥಿಗಳಲ್ಲಿ ಶೇ.85.56 ಲಿತಾಂಶದೊಂದಿಗೆ 2714 ಮಂದಿ ಪಾಸಾಗಿದ್ದಾರೆ. ಸರ್ಕಾರಿ ಶಾಲೆಯ 5510 ವಿದ್ಯಾರ್ಥಿಗಳ ಪೈಕಿ 4796 ಮಂದಿ ಪಾಸಾಗಿ ಶೇ. 87.04 ಫಲಿತಾಂಶ ದಾಖಲಿಸಿದ್ದಾರೆ.

ಇಂಗ್ಲಿಷ್​ ಮಾಧ್ಯಮದಲ್ಲಿ ಪರೀೆಕ್ಷೆ ಬರೆದಿದ್ದ ಶೇ.93.78, ಕನ್ನಡ ಮಾಧ್ಯಮದಲ್ಲಿ ಪರೀೆಕ್ಷೆ ಬರೆದಿದ್ದ ಶೇ.84.60 ಮತ್ತು ಉರ್ದು ಮಾಧ್ಯಮದಲ್ಲಿ ಪರೀೆಕ್ಷೆ ಬರೆದಿದ್ದ ಶೇ.73.06 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.

ರುಚಿತಾಗೆ 624 ಅಂಕ

ರಾಮನಗರ ಜಿಲ್ಲೆಯ ಲಿತಾಂಶದಲ್ಲಿ ಅತಿ ಹೆಚ್ಚು ಅಂಕ ಪಡೆದ 5 ವಿದ್ಯಾರ್ಥಿಗಳಲ್ಲಿ ಮಾಗಡಿ ಪ್ರಥಮ ಸ್ಥಾನ ಪಡೆದುಕೊಂಡಿದೆ. ಮಾಗಡಿಯ ವಾಸವಿ ವಿದ್ಯಾನಿಕೇತನ ಶಾಲೆಯ ಬಿ.ಎಸ್​. ರುಚಿತಾ 625ಕ್ಕೆ 624 ಅಂಕಗಳನ್ನು ಪಡೆದು ಜಿಲ್ಲೆಗೆ ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ. ಚನ್ನಪಟ್ಟಣದ ಸೇಂಟ್​ ಆನ್ಸ್​ ಶಾಲೆಯ ಎಂ.ಎಸ್​. ಮೌಲ್ಯ, ಚನ್ನಪಟ್ಟಣದ ಹೊನ್ನಾಯಕನಹಳ್ಳಿಯ ಎಂಡಿಆರ್​ಎಸ್​ ಶಾಲೆಯ ಮಹಮದ್​ ಜವಾದ್​, ಸೇಂಟ್​ ಮೈಕಲ್ಸ್​ ಶಾಲೆಯ ಬಿ.ಎಸ್​. ಸಂಜನಾ ಆಚಾರ್ಯ ಮತ್ತು ಮಾಗಡಿಯ ವಾಸವಿ ವಿದ್ಯಾನಿಕೇತನ ಶಾಲೆಯ ಎಂ.ಎಸ್​. ಪೂರ್ವಿಕ 625ಕ್ಕೆ 618 ಅಂಕಗಳನ್ನು ಪಡೆಯುವ ಮೂಲಕ ನಂತರದ ನಾಲ್ಕು ಸ್ಥಾನಗಳನ್ನು ಹಂಚಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net