ನಗರದ ಅಂದಗೆಡಿಸಿದ ಜಾಹೀರಾತು ಫಲಕಗಳು ರಸ್ತೆ ಮಧ್ಯೆ ವಿದ್ಯುತ್ ಕಂಬಗಳಲ್ಲಿ ನೇತಾಡುತ್ತಿವೆ ಬಾಕ್ಸ್‌ಗಳು

RMgm-Ph-03-Pole- Advitise Board-Samsye-BM Road - Highway-Ramanagara-16-2-2023
Published on

ವಿಭೂತಿಕೆರೆ ಶಿವಲಿಂಗಯ್ಯ ರಾಮನಗರ

ನಗರದ ಬೆಂಗಳೂರು-ಮೈಸೂರು ಹೆದ್ದಾರಿ ಮಧ್ಯೆ ವಿದ್ಯುತ್ ಕಂಬಗಳಲ್ಲಿ ಅಳವಡಿಸಿರುವ ಜಾಹೀರಾತು ಫಲಕಗಳು ಒಂದೊಂದೇ ಕಳಚಿ ಬೀಳುತ್ತಿದ್ದು, ಅಪಾಯಕ್ಕೆ ಆಹ್ವಾನ ನೀಡುವ ಜತೆಗೆ ನಗರದ ಸೌಂದರ್ಯಕ್ಕೂ ಕಪ್ಪುಚುಕ್ಕೆಯಾಗಿವೆ.

ಆದಾಯ ಹೆಚ್ಚಿಸಿಕೊಳ್ಳಲು ನಗರಸಭೆ ಹಲವಾರು ವರ್ಷಗಳ ಹಿಂದೆ ರಸ್ತೆ ಮಧ್ಯದಲ್ಲಿ ಇರುವ ವಿದ್ಯುತ್ ಕಂಬಗಳಲ್ಲಿ ಜಾಹಿರಾತು ಫಲಕ ಅಳವಡಿಕೆಗೆ ಒತ್ತು ನೀಡಿ ಖಾಸಗಿ ಕಂಪನಿಗೆ ಟೆಂಡರ್ ನೀಡಿತ್ತು. ಆದರೆ ಇಂದು ಜಾಹೀರಾತು ಫಲಕಗಳು ಒಂದೊಂದೇ ಕಳಚಿ ಬೀಳುತ್ತಿವೆ. ಅವುಗಳನ್ನು ತೆರವುಗೊಳಿಸಿ ನಗರದ ಸೌಂದರ್ಯಕ್ಕೆ ಕ್ರಮ ಕೈಗೊಳ್ಳಬೇಕು ಹಾಗೂ ಅವುಗಳಿಂದ ಉಂಟಾಗುವ ಅನಾಹುತ ತಪ್ಪಿಸಬೇಕು ಎಂಬ ಕೂಗು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ.

ರಾಮನಗರದಲ್ಲಿ ರೋಟರಿ ಆಸ್ಪತ್ರೆ ಎದುರು ಬಹಳ ವರ್ಷಗಳ ಹಿಂದೆ ರಾಮನಗರ ರೇಷ್ಮೆ ವಾರುಕಟ್ಟೆ, ಐಜೂರು ಸರ್ಕಲ್, ಮಿನಿ ವಿಧಾನಸೌಧ, ಎಪಿಎಂಸಿ ವಾರ್ಕೆಟ್, ಕನಕಪುರ ಸರ್ಕಲ್ ಹೀಗೆ ಅರ್ಚಕರಹಳ್ಳಿವರೆಗೂ ಹೆದ್ದಾರಿ ಮದ್ಯೆ ಇರುವ ವಿದ್ಯುತ್ ಕಂಬಗಳಲ್ಲಿ ಸುವಾರು 70ಕ್ಕೂ ಹೆಚ್ಚು 3-4 ಅಡಿ ಅಳತೆಯ ಕಬ್ಬಿಣದ ಪಟ್ಟಿ, ಟ್ಯೂಬ್‌ಲೈಟ್ ವ್ಯವಸ್ಥೆಯಿರುವ ಬಾಕ್ಸ್ ಅಳವಡಿಸಲಾಗಿತ್ತು. ಹಲವಾರು ವರ್ಷಗಳಿಂದ ಯಾವುದೇ ಜಾಹೀರಾತು ಇಲ್ಲದೆ ಈ ಲಕಗಳು ಹಾಗೆಯೇ ಇವೆ. ಇದಕ್ಕೆ ಅಳವಡಿಸಿದ್ದ ್ಲೆಕ್ಸ್ ಹರಿದುಹೋಗಿದೆ. ವಿದ್ಯುತ್ ಬಲ್ಬ್‌ಗಳು ಕಳಚಿ ಬೀಳುತ್ತಿವೆ, ಕಬ್ಬಿಣ ತುಕ್ಕು ಹಿಡಿದು ಸಡಿಲಗೊಂಡು ಜಾರುತ್ತಿವೆ. ಇದರಿಂದ ವಿದ್ಯುತ್ ಕಂಬಗಳು ವಿಕಾರವಾಗಿ ಕಾಣುತ್ತಿವೆ.

ಅನವಶ್ಯಕ ಜಾಹೀರಾತು ಫಲಕಗಳನ್ನು ತೆರವುಗೊಳಿಸಬೇಕು. ವಿದ್ಯುತ್ ತಂತಿಗಳು ಅಸ್ತವ್ಯಸ್ತವಾಗಿದ್ದು ಅವನ್ನು ಸರಿಪಡಿಸಬೇಕು. ಇಲ್ಲದಿದ್ದರೆ ಪ್ರಯಾಣಿಕರು, ವಾಹನಸವಾರರು ಅಪಾಯಕ್ಕೆ ಸಿಲುಕುವ ಸಂಭವವಿದೆ ಎನ್ನುವುದು ನಾಗರಿಕರ ಆತಂಕವಾಗಿದೆ.

ನಗರಸಭೆ ಸ್ವಚ್ಛ ಸುಂದರ ನಗರಕ್ಕೆ ಒತ್ತು ಕೊಟ್ಟಿದೆ. ಜಾಹೀರಾತು ಫಲಕಗಳಿಗೆ ಈ ಹಿಂದೆ ಟೆಂಡರ್ ನೀಡಲಾಗಿತ್ತು. ಗುತ್ತಿಗೆ ಪಡೆದ ಕಂಪನಿ ಅವಧಿ ಮುಗಿದ ನಂತರ ಅವುಗಳನ್ನು ತೆರವು ವಾಡಬೇಕಿತ್ತು. ಆದರೆ, ಹಾಗೆಯೇ ಬಿಟ್ಟಿದ್ದಾರೆ. ಒಂದೆರಡು ದಿನಗಳಲ್ಲಿ ಅಗತ್ಯ ಕ್ರಮ ಕೈಗೊಂಡು ತೆರವುಗೊಳಿಸಲಾಗುವುದು.

ನಾಗೇಶ್, ಆಯುಕ್ತ, ನಗರಸಭೆ, ರಾಮನಗರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net