ಬಿಲ್ ಕೊಡದಕ್ಕೆ ಗ್ರಾಮ ಪಂಚಾಯಿತಿ ಕಚೇರಿಯನ್ನೇ ಕೊಟ್ಟಿಗೆ ಮಾಡಿಕೊಂಡ ರೈತ ಚನ್ನಪಟ್ಟಣದಲ್ಲಿ ಘಟನೆ

070d14cd-af97-428a-b669-e4f2080fc3a8
Published on

 
ರಾಮನಗರ: ನರೇಗಾದಡಿ ನಿರ್ಮಾಣವಾಗಿದ್ದ ಕೊಟ್ಟಿಗೆ ಬಿಲ್ ಕೊಡಲಿಲ್ಲ ಎಂದು ಬೇಸತ್ತ ರಯತರೊಬ್ಬರು ಗ್ರಾಮ ಪಂಚಾಯಿತಿ ಕಚೇರಿಯನ್ನೇ ಕೊಟ್ಟಿಗೆ ಮಾಡಿಕೊಂಡು ಕುರಿಗಳನ್ನು ಕಟ್ಟಿರುವ ಘಟನೆ ಚನ್ನಪಟ್ಟಣ ತಾಲೂಕಿನ ಮೈಲನಾಯಕನಹಳ್ಳಿ ಗ್ರಾಮದಲ್ಲಿ ನಡೆದಿದೆ.

ಗ್ರಾಮದ ರೈತ ರವಿ ಕಳೆದ ಒಂದು ವರ್ಷದ ಹಿಂದೆ ನರೇಗಾ ಅಡಿಯಲ್ಲಿ ಕೊಟ್ಟಿಗೆ ನಿರ್ಮಾಣ ಮಾಡಿದ್ದರು. ಇದರ ಎಂಸಿ ಬಿಲ್ ಮೊತ್ತ ಸುಮಾರು 40 ಸಾವಿರ ರೂ.ಗಳು ಇನ್ನೂ ಪಾವತಿ ಆಗಿರಲಿಲ್ಲ. ಇದಕ್ಕಾಗಿ ಒಂದು ವರ್ಷದಿಂದಲೂ ನಿರಂತರವಾಗಿ ಗ್ರಾಪಂ ಕಚೇರಿಗೆ ಅಲೆದಿದ್ದಾರೆ. ಆದರೆ ಇದಕ್ಕೆ ಅಧಿಕಾರಿಗಳಿಂದ ಯಾವುದೇ ಸ್ಪಷ್ಟ ಉತ್ತರ ಬಾರದ ಕಾರಣ ಗ್ರಾ.ಪಂ ಕಚೇರಿಯಲ್ಲಿ ಕುರಿ, ಮೇಕೆಗಳನ್ನ ಕಟ್ಟಿ ಆಕ್ರೋಶ ವ್ಯಕ್ತಪಡಿಸಿದರು.

ಈ ವಿಷಯ ತಿಳಿಯುತ್ತಿದ್ದಂತೆ ಮಧ್ಯ ಪ್ರವೇಶ ಮಾಡಿದ ತಾಪಂ ಇಓ ಶಿವಕುಮಾರ್, ಸ್ಥಳಕ್ಕೆ ಬಂದು ಸಮಸ್ಯೆ ಪರಿಹಾರ ಮಾಡಿಕೊಡುವ ಭರವಸೆ ಪೊಲೀಸರ ಮೂಲಕ ತಿಳಿಸಿದ ಹಿನ್ನೆಲೆಯಲ್ಲಿ, ಸ್ಪಂಧಿಸಿದ ರೈತ ರವಿ, ನಂತರ ಮೇಕೆ ಕುರಿಗಳನ್ನು ಗ್ರಾಪಂ ಕಚೇರಿಯಿಂದ ವಾಪಾಸ್ ಕರೆದುಕೊಂಡು ಹೋದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net