ಎಚ್ಡಿಕೆ ಆರೋಗ್ಯ ಚೇತರಿಕೆಗಾಗಿ ದೇವರ ಮೊರೆ ಹೋದ ಕಾರ್ಯಕರ್ತರು

IMG-20230831-WA0097.jpg
Published on

ಚನ್ನಪಟ್ಟಣ

ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಆರೋಗ್ಯ ಚೇತರಿಕೆಗಾಗಿ ಕುಮಾರಸ್ವಾಮಿ ಸ್ವಕ್ಷೇತ್ರ ಚನ್ನಪಟ್ಟಣದಲ್ಲಿ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ದೇವರ ಮೊರೆ ಹೋಗಿದ್ದಾರೆ.

ಗುರುವಾರ ತಾಲೂಕಿನ ಪುರಾಣ ಪ್ರಸಿದ್ಧ ಕೆಂಗಲ್ ಆಂಜನೇಯ ( ಅಯ್ಯನಗುಡಿ) ದೇವಸ್ಥಾನದಲ್ಲಿ ಕುಮಾರಸ್ವಾಮಿ ಆರೋಗ್ಯ ಚೇತರಿಕೆಯಾಗಲಿ ಹಾಗೂ ಶೀಘ್ರವಾಗಿ ಗುಣಮುಖರಾಗಲಿ ಎಂದು ಪ್ರಾರ್ಥಿಸಿ ವಿಶೇಷ ಪೂಜೆ ಸಲ್ಲಿಸಲಾಗಿದೆ.

ಆಂಜನೇಯ ಸ್ವಾಮಿಗೆ ಅಭಿಷೇಕ, ವಿಶೇಷ ಅಲಂಕಾರ ಮಾಡಿಸುವ ಜೊತೆಗೆ, ತುಪ್ಪದ ಕಾಣಿಕೆ ನೀಡಿದ ಜೆಡಿಎಸ್ ಮುಖಂಡರು ಹಾಗೂ ಕಾರ್ಯಕರ್ತರು, ನಮ್ಮ ನಾಯಕರ ಆರೋಗ್ಯ ಚೇತರಿಕೆಯಾಗಲಿ ಎಂದು ಆಂಜನೇಯ ಸ್ವಾಮಿಗೆ ಪ್ರಾರ್ಥನೆ ಸಲ್ಲಿಸಿದರು. ತದನಂತರ, ದೇವಾಲಯದ ಮುಂಭಾಗದಲ್ಲಿ ನೂರೊಂದು ಈಡುಗಾಯಿ ಒಡೆಯುವ ಮೂಲಕ ಶೀಘ್ರ ಗುಣಮುಖರಾಗುವ ಶಕ್ತಿ ನೀಡು ಎಂದು ಪ್ರಾರ್ಥಿಸಿದರು.

ಈ ವೇಳೆ ಪಿಎಲ್ ಡಿ ಬ್ಯಾಂಕ್ ಅಧ್ಯಕ್ಷ ಗೋವಿಂದನಹಳ್ಳಿ ನಾಗರಾಜು, ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಕುಕ್ಕುರುದೊಡ್ಡಿ ಜಯರಾಂ, ಕೆಂಗಲ್ ದೇವಸ್ಥಾನ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ವಿ.ಬಿ.ಚಂದ್ರು,‌ ಜೆಡಿಎಸ್ ಮುಖಂಡರಾದ ಬೋರೆವೆಲ್ ರಾಮಚಂದ್ರು, ಕೂಡ್ಲೂರು ವೆಂಕಟೇಶ್, ಎಸ್.ವಿ.ಟಿ.ವೆಂಕಟೇಶ್, ನಗರಸಭಾ ಸದಸ್ಯ ಸತೀಶ್ ಬಾಬು, ಕಸಬಾ ಪಿಎಸಿಎಸ್ ನಿರ್ದೇಶಕ ಮಧುಕರ್, ಗಂಗೇದೊಡ್ಡಿ ಬೋರೇಗೌಡ, ಕೂರಣಗೆರೆ ಪುಟ್ಟಸ್ವಾಮಿ, ಮಹಿಳಾ ಮುಖಂಡರಾದ ವಿಮಲ ಯೋಗ, ಉಷಾ ನಂಜೇಗೌಡ, ರಮ್ಯ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net