ಬೈಕ್ ಕಳ್ಳನ ಬಂಧಿಸಿದ ಐಜೂರು ಪೊಲೀಸರು

20-07-rama-Ijooru Bike
Published on

ರಾಮನಗರ: ಬೈಕ್‌ಗಳನ್ನು ಕಳವು ಮಾಡುತ್ತಿದ್ದ ಆರೋಪಿಯನ್ನು ಬಂಧಿಸಿ 10 ಬೈಕ್‌ಗಳನ್ನು ರಾಮನಗರದ ಐಜೂರು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಕನಕಪುರ ತಾಲೂಕು ಕೋಡಿಹಳ್ಳಿ ಹೋಬಳಿ ಹೊಸದುರ್ಗ ಗ್ರಾಮದ ಕೇಶವ (22) ಬಂಧಿತ ಬೈಕ್‌ಕಳ್ಳ. ವೃತ್ತಿಯಲ್ಲಿ ವ್ಯವಸಾಯ ಮಾಡಿಕೊಂಡಿದ್ದ ಕೇಶವ, ಮನೆ ಹಾಗೂ ಇತರೆಡೆ ನಿಲ್ಲಿಸಿದ್ದ ಬೈಕ್‌ಗಳನ್ನು ಕಳವು ಮಾಡಿ ಮಾರಾಟ ಮಾಡುತ್ತಿದ್ದ. ಬೈಕ್ ಕಳ್ಳತನ ಹೆಚ್ಚಾದ ಹಿನ್ನೆಲೆಯಲ್ಲಿ ಆರೋಪಿ ಬಂಧನಕ್ಕೆ ತಂಡವನ್ನು ರಚನೆ ಮಾಡಲಾಗಿತ್ತು.

ಕಳವು ಮಾಡಿ ಮಾರಾಟ ಮಾಡಲಾಗಿದ್ದ ಹಾಗೂ ಪಾಳು ಮನೆಯಲ್ಲಿ ನಿಲ್ಲಿಸಿದ್ದ ಒಟ್ಟು 10 ಬೈಕ್‌ಗಳನ್ನು ವಶಕ್ಕೆ ಪಡೆಯಲಾಗಿದೆ. ಕಾರ್ಯಾಚರಣೆಯಲ್ಲಿ ಸಿಪಿಐ ನರಸಿಂಹಮೂರ್ತಿ, ಪಿಎಸ್‌ಐ ಸೈಯದ್ ತನ್ವೀರ್ ಹುಸೇನ್, ಸಿಬ್ಬಂದಿ ಖಾದರ್ ಭಾಗವಾನ್, ಚನ್ನಬಸಪ್ಪ, ರವೀಂದ್ರ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net