

ಬಿಡದಿ: ಶಾಲೆಯ ವಿದ್ಯಾರ್ಥಿಗಳು ಸಾಧನೆ ಮಾಡಿದಾಗ ಆತ್ಮತೃಪ್ತಿಯಾಗುತ್ತದೆ. ಹೊಸದಾಗಿ ಬರುವ ವಿದ್ಯಾರ್ಥಿಗಳು ಹಿರಿಯ ವಿದ್ಯಾರ್ಥಿಗಳನ್ನು ಮಾದರಿಯಾಗಿ ಇಟ್ಟುಕೊಂಡು ವಿದ್ಯಾಭ್ಯಾಸ ಮಾಡಬೇಕು ಎಂದು ಜ್ಞಾನ ವಿಕಾಸ್ ವಿದ್ಯಾಸಂಘದ ಅಧ್ಯಕ್ಷ ಸಿ.ಎಂ.ಲಿಂಗಪ್ಪ ತಿಳಿಸಿದರು.
ಪಟ್ಟಣದ ಜ್ಞಾನವಿಕಾಸ್ ಕಾಲೇಜಿನಲ್ಲಿ ಆಯೋಜಿಸಿದ್ದ ವಾಣಿಜ್ಯ ವಿಭಾಗದ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಸ್ವಾಗತ ಹಾಗೂ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ, ಈ ವಿದ್ಯಾಸಂಘದ ಸಮೂಹ ಶಿಕ್ಷಣ ಸಂಸ್ಥೆಗಳು ಪ್ರಾರಂಭಗೊಳ್ಳಲು ಪದ್ಮಶ್ರೀ ಆರ್ಯ ಜಿ.ಡಿ. ಗೋಯಲ್ ಅವರ ಉದಾರ ನೆರವು ಇದೆ ಎಂದು ಸ್ಮರಿಸಿದರು.
ಯುಪಿಎಸ್ಸಿ ಸಾಧಕಿ ಧಾಮಿನಿ ದಾಸ್ ಮಾತನಾಡಿ, ವಿದ್ಯಾರ್ಥಿಗಳು ವ್ಯಾಸಂಗದ ಅವಧಿಯಲ್ಲಿ ನಿರ್ದಿಷ್ಟ ಗುರಿ ಈಡೇರಿಸಿಕೊಳ್ಳಲು ಸತತ ಪ್ರಯತ್ನ ಹಾಗೂ ಕಠಿಣ ಪರಿಶ್ರಮ ಅತ್ಯವಶ್ಯಕ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಜ್ಞಾನ ವಿಕಾಸ್ ಆಡಳಿತ ಮಂಡಳಿ ಕಾರ್ಯದರ್ಶಿ ಬಿ.ಆರ್.ನಾಗರಾಜು, ಖಜಾಂಚಿ ಬಿ.ಜೆ.ಹೊನ್ನಶೆಟ್ಟಿ, ನಿರ್ದೇಶಕರಾದ ಎಲ್.ಸತೀಶ್‌ಚಂದ್ರ, ಗಂಗಾಧರಯ್ಯ, ಗಣಕಲ್ ನಟರಾಜ್, ಸಿ.ಲೋಕೇಶ್, ಪುಟ್ಟರಾಜು, ಮಹಿಪತಿ, ಪದ್ಮಾ, ರೇಖಾ, ಪ್ರಾಂಶುಪಾಲೆ ರೂಪಾ, ಶ್ರೀಧರ್ ಹೆಗಡೆ ಇದ್ದರು.