VIDEO| ಬಾಲಮಂದಿರದಿಂದ ಬಾಲಕಿಯರು ಪರಾರಿಯಾದ ದೃಶ್ಯ ಸಿಸಿಟಿವಿಯಲ್ಲಿ ಸೆರೆ!

Girls Escape
Published on

ರಾಮನಗರ: ಬಾಲಮಂದಿರದಿಂದ ಬಾಲಕಿಯರು ಪರಾರಿಯಾಗಿದ್ದ ಪ್ರಕರಣ ಬೇಧಿಸುವಲ್ಲಿ ರಾಮನಗರದ ಐಜೂರು ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.

ಪರಾರಿಯಾಗಿದ್ದ 7 ಬಾಲಕಿಯರು ಬೆಂಗಳೂರಿನ ಹೆಬ್ಬಾಳದಲ್ಲಿದ್ದ ಪತ್ತೆಯಾಗಿದ್ದು, ರಾಮನಗರಕ್ಕೆ ಮರಳಿ ಕರೆತರಲಾಗಿದೆ.

ರಾಮನಗರ ಟೌನ್ ಮಲ್ಲೇಶ್ವರ ಬಡಾವಣೆಯಲ್ಲಿರುವ ಬಾಲಮಂದಿರದಿಂದ ಜುಲೈ 14ರ ತಡ ರಾತ್ರಿ 11ರ ಸುಮಾರಿಗೆ ಬಾಲಕಿಯರು ಪರಾರಿಯಾಗಿದ್ದರು. ಈ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆ ಆಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net