

https://ahara.kar.nic.in/status3/status_of_dbt.aspx ಇಲ್ಲಿ ಚೆಕ್ ಮಾಡಿ
ರಾಮನಗರ
ರಾಜ್ಯ ಸರ್ಕಾರದ ವತಿಯಿಂದ 5 ಕೆ.ಜಿ ಆಹಾರ ಧಾನ್ಯಕ್ಕೆ ಪ್ರತಿಯಾಗಿ ಫಲಾನುಭವಿಗೆ ಪ್ರತಿ ಕೆ.ಜಿ.ಗೆ 34 ರೂ.ನಂತೆ ಪಡಿತರ ಚೀಟಿ ಮುಖ್ಯಸ್ಥರ ಬ್ಯಾಂಕ್ ಖಾತೆಗೆ ನೇರ ನಗದು ವರ್ಗಾವಣೆ ಮಾಡಲು ಆದೇಶವಾಗಿದೆ.
ಆಧಾರ್ ಸಂಖ್ಯೆ ಚಾಲ್ತಿಯಲ್ಲಿರುವ ಬ್ಯಾಂಕ್ ಖಾತೆಗೆ ಲಿಂಕ್ ಮಾಡಿಸಿದ್ದಲ್ಲಿ ನೇರವಾಗಿ ಹಣ ಪಾವತಿಯಾಗುವುದು. ಯಾವುದೇ ಆನ್‌ಲೈನ್ ನೋಂದಣಿ ಮಾಡಿಸುವ ಅವಶ್ಯಕತೆ ಇರುವುದಿಲ್ಲ ಮತ್ತು ಹಣ ಪಾವತಿಯಾದ ನಂತರ ಲಾನುಭವಿಯ ಮೊಬೈಲ್‌ಗೆ ಸಂದೇಶ ಲಭ್ಯವಾಗುತ್ತದೆ.
ನೇರ ನಗದು ವರ್ಗಾವಣೆ ಸೌಲಭ್ಯ ಪಡೆಯಲು ಫಲಾನುಭವಿಗಳು ಸೈಬರ್ ಸೆಂಟರ್‌ನಲ್ಲಿ ಅರ್ಜಿ ಸಲ್ಲಿಸುವ ಅವಶ್ಯಕತೆ ಇಲ್ಲ. ಬ್ಯಾಂಕ್ ಖಾತೆ ಹೊಂದದೇ ಇರುವ ಫಲಾನುಭವಿಗಳ ಮಾಹಿತಿಯನ್ನು ಹತ್ತಿರದ ನ್ಯಾಯಬೆಲೆ ಅಂಗಡಿ ಮಾಲೀಕರ ಮೂಲಕ ಪಡೆದು ಹತ್ತಿರದ ಬ್ಯಾಂಕ್ ಅಥವಾ ಅಂಚೆ ಕಚೇರಿಯಲ್ಲಿ ಸರಿಪಡಿಸಿಕೊಳ್ಳಲು ತಿಳಿಸಲಾಗಿದೆ.
ಪಡಿತರ ಚೀಟಿ ಫಲಾನುಭವಿಗಳು ಗೊಂದಲವಿದ್ದಲ್ಲಿ / ಸ್ಟಷ್ಟೀಕರಣ ಬೇಕಾದಲ್ಲಿ ಹತ್ತಿರದ ನ್ಯಾಯಬೆಲೆ ಅಂಗಡಿ ಅಥವಾ ತಾಲೂಕು ಕಚೇರಿ ಆಹಾರ ಶಾಖೆ ಸಂಪರ್ಕಿಸಿ ಮಾಹಿತಿ ಪಡೆಯಬಹುದು. ಡಿಬಿಟಿ ಯೋಜನೆಯ ಕುರಿತು ಪಡಿತರ ಫಲಾನುಭವಿಯು ಖಾತೆಗೆ ಹಣ ವರ್ಗಾವಣೆ ವಿವರಗಳ ಬಗ್ಗೆ ಮೇಲಿನ ಲಿಂಕ್‌ನಲ್ಲಿ ಪಡಿತರ ಚೀಟಿ ವಿವರ ನೀಡಿ ಮಾಹಿತಿ ಪಡೆಯಬಹುದಾಗಿದೆ.
ಫಲಾನುಭವಿಯು ನೇರವಾಗಿ ಡಿಬಿಟಿ ಕರ್ನಾಟಕ ಆ್ಯಪ್ ಅನ್ನು ಮೊಬೈಲ್‌ಗೆ ಡೌನ್‌ಲೋಡ್ ಮಾಡಿಕೊಂಡು ಆಧಾರ್ ಸಂಖ್ಯೆ ನಮೂದಿಸಿ ಡಿಬಿಟಿ ಮೂಲಕ ಜಮೆ ಆಗಿರುವ ಮೊತ್ತದ ಬಗ್ಗೆ ಮಾಹಿತಿ ಪಡೆಯಲು ಅವಕಾಶವಿರುತ್ತದೆ ಎಂದು ರಾಮನಗರ ಜಿಲ್ಲೆಯ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರ ಇಲಾಖೆ ಉಪ ನಿರ್ದೇಶಕರು ತಿಳಿಸಿದ್ದಾರೆ.
ಡಿಬಿಟಿ ಯೋಜನೆ ಕುರಿತು ಕುಂದು ಕೊರತೆಗಳಿದ್ದಲ್ಲಿ ಈ ಕೆಳಗೆ ಸೂಚಿಸಿರುವವರನ್ನು ಸಂಪರ್ಕಿಸಿ ಮಾಹಿತಿ ಪಡೆಯಬಹುದಾಗಿದೆ.
ಚನ್ನಪಟ್ಟಣ ತಾಲೂಕು: ಶಾಂತಕುಮಾರಿ, ಶಿರಸ್ತೇದಾರ್, ಚನ್ನಪಟ್ಟಣ (94817 85599), ಚೇತನ್ ಕುಮಾರ್, ಆಹಾರ ನಿರೀಕ್ಷಕ, (86608 25202), ಟಿ.ಎನ್. ಪುಷ್ಪಲತಾ, ಆಹಾರ ನಿರೀಕ್ಷಕಿ (78996 89911).
ಕನಕಪುರ ತಾಲೂಕು: ಎಸ್.ಆರ್. ಪ್ರಕಾಶ್, ಆಹಾರ ಶಿರಸ್ತೇದಾರ್ (83106 43912), ಜಿ.ಆರ್. ಮನೋಹರ್, ಆಹಾರ ನಿರೀಕ್ಷಕ (95914 95599), ಸಿ. ನಮಿತಾ, ಆಹಾರ ನಿರೀಕ್ಷಕಿ (70194 30577).
ಮಾಗಡಿ ತಾಲೂಕು: ಗಣೇಶ್, ಆಹಾರ ಶಿರಸ್ತೇದಾರ್ (97411 75118), ಎ.ಚೈತ್ರ, ಆಹಾರ ನಿರೀಕ್ಷಕಿ (82176 75620)
ರಾಮನಗರ ತಾಲೂಕು: ಟಿ.ಜೆ. ಲಕ್ಷ್ಮಿ, ಆಹಾರ ಶಿರಸ್ತೇದಾರ್ (94480 32268), ನಂಜುಂಡಸ್ವಾಮಿ, ಆಹಾರ ನಿರೀಕ್ಷಕ (97399 10161), ಟಿ.ಎನ್. ನಿರ್ಮಲ, ಆಹಾರ ನಿರೀಕ್ಷಕಿ (96867 14519).