

ರಾಮನಗರ: ತಾಲೂಕಿನ ಲಕ್ಷ್ಮೀಪುರ ಗೊಲ್ಲರದೊಡ್ಡಿ ಗ್ರಾಮದ ಬಳಿ ಸಂಭವಿಸಿದ್ದ ಅಪಘಾತದಲ್ಲಿ ಗಾಯಗೊಂಡಿದ್ದ ಬಾಲಕಿ ಜ್ಞಾನೇಶ್ವರಿ(06) ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದೆ.
ಇದರೊಂದಿಗೆ ಗೊಲ್ಲರದೊಡ್ಡಿ ಅಪಘಾತ ಪ್ರಕರಣದಲ್ಲಿ ಮೃತಪಟ್ಟ ಮಕ್ಕಳ ಸಂಖ್ಯೆ 4ಕ್ಕೆ ಏರಿಕೆಯಾಗಿದೆ.
ಆ. 9 ರಂದು ರಾತ್ರಿ ಮನೆಪಾಠ ಮುಗಿಸಿ ಮನೆಗೆ ಹೊಗುತ್ತಿದ್ದ ಮಕ್ಕಳಿಗೆ ಗೂಡ್ಸ್ ವಾಹನ ಡಿಕ್ಕಿ ಹೊಡೆದಿತ್ತು. ಅಪಘಾತದ ದಿನ ಶಾಲಿನಿ ಮತ್ತು ರೋಹಿತ್ ಮೃತಪಟ್ಟಿದ್ದರು. ಕಳೆದ ಮೂರು ದಿನಗಳ ಹಿಂದಷ್ಟೇ ಸುಚಿತ್ ಎಂಬ ಬಾಲಕ ಚಿಕಿತ್ಸೆ ಫಲಕಾರಿ ಆಗದೆ ಸಾವನ್ನಪ್ಪಿದ್ದ. ಭಾನುವಾರ ಐಸಿಯು ನಲ್ಲಿದ್ದ ಜ್ಞಾನೇಶ್ವರಿ ಮೃತಪಟ್ಟಿದೆ.