

ಮಂಗಳೂರು : ಏಮ್ ಫಾರ್ ಸೇವಾ ಸಂಸ್ಥೆಯು ತನ್ನ ಸೇವಾ ಕಾರ್ಯಕ್ರಮಗಳಿಗೆ ಪೂರಕವಾಗಿ ಜ. 12ರಂದು ಸಾಯಂಕಾಲ 6ಕ್ಕೆ ನಗರದ
ಪುರಭವನದಲ್ಲಿ ಮಂಗಳೂರಿನ ಸಂಗೀತ ಭಾರತಿ ಪ್ರತಿಷ್ಠಾನದ ಸಹಯೋಗದಲ್ಲಿ ಮ್ಯೂಸಿಕಲ್ ಸೆಲೆಬ್ರೇಷನ್ ಆಫ್ ರಾಮ ಎಂಬ
ಪರಿಕಲ್ಪನೆಯಡಿ ‘ರಾಮಂ ಭಜೇ’ ಸಂಗೀತ ಕಾರ್ಯಕ್ರಮ ಆಯೋಜಿಸಿದೆ.
ಯುವ ಕಲಾವಿದೆ, ದೇಶ ವಿದೇಶಗಳ ಪ್ರತಿಷ್ಠಿತ ವೇದಿಕೆಗಳಲ್ಲಿ ಸುಶ್ರಾವ್ಯ ಸಂಗೀತದಿಂದ ಹೆಸರುವಾಸಿಯಾಗಿರುವ ಸೂರ್ಯಗಾಯತ್ರಿ
ಅವರು ಹಾಡುಗಳ ಮೂಲಕ ರಾಮಾರಾಧನೆ ಮಾಡಲಿದ್ದಾರೆ . ಸುಂದರ ರಾಜನ್ ಅವರು ವೀಣೆ, ಆದರ್ಶ ಅಜಯ್ ಕುಮಾರ್
ಅವರು ವಯಲಿನ್, ಪಿ.ವಿ. ಅನಿಲ್ ಕುಮಾರ್ ಅವರು ಮೃದಂಗ, ಪ್ರಶಾಂತ್ ಶಂಕರ್ ಅವರು ತಬಲ, ಶೈಲೇಶ್ ಮಾರರ್ ಅವರು ತಾಳವಾದ್ಯದಲ್ಲಿ ಸಹಕರಿಸಲಿದ್ದಾರೆ. ಬಹು ಭಾಷಾ ಸಂಗೀತ ಕಾರ್ಯಕ್ರಮ ಇದಾಗಿದ್ದು, ಸಾರ್ವಜನಿಕರಿಗೆ ಉಚಿತ ಪ್ರವೇಶವಿದೆ.
* ಏಮ್ ಫಾರ್ ಸೇವಾ:
ಪೂಜ್ಯ ಸ್ವಾಮಿ ದಯಾನಂದ ಸರಸ್ವತಿ ಅವರು ಚಿಂತಕ, ತತ್ವಜ್ಞಾನಿ, ವೇದಾಂತದ ಶ್ರೇಷ್ಠ ಗುರು, ತಮಿಳುನಾಡಿನ ತಿರುವರೂರು ಜಿಲ್ಲೆಯ ಮಂಜಕ್ಕುಡಿ ಎಂಬ ಸಣ್ಣ ಹಳ್ಳಿಯಲ್ಲಿ ಜನಿಸಿದ ಅವರು, ಗ್ರಾಮೀಣ ಭಾರತದ ಮಹಿಳೆಯರ ಸಬಲೀಕರಣ ಹಾಗೂ ಆರ್ಥಿಕವಾಗಿ ಹಿಂದುಳಿದ ಮಕ್ಕಳ ಶಿಕ್ಷಣಕ್ಕೆ ಒತ್ತು ನೀಡುವ ಉದ್ದೇಶದಿಂದ ಅಲ್ ಇಂಡಿಯಾ ಮೂವ್‌ಮೆಂಟ್ ಆಫ್ ಸೇವಾ (ಏಮ್ ಫಾರ್ ಸೇವಾ) ಸಂಸ್ಥೆಯನ್ನು ಸ್ಥಾಪಿಸಿದರು. ಪ್ರಸ್ತುತ ದೇಶದ 17 ರಾಜ್ಯಗಳಲ್ಲಿ 95 ಛಾತ್ರಾಲಯಗಳನ್ನು ಸ್ಥಾಪಿಸಿ, ಸಾವಿರಾರು ಬಡ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ಹಾಗೂ ವಸತಿ ವ್ಯವಸ್ಥೆಯನ್ನು ನಿರಂತರವಾಗಿ ಮಾಡಿಕೊಂಡು ಬರುತ್ತಿದೆ.