ರಾಮಲಿಂಗೇಶ್ವರ ದೇವಸ್ಥಾನ ಲೋಕಾರ್ಪಣೆ

14 Dwd 9
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ತಾಲೂಕಿನ ಮರೇವಾಡ ಗ್ರಾಮದಲ್ಲಿ ಶ್ರೀ ರಾಮಲಿಂಗೇಶ್ವರ ದೇವಸ್ಥಾನ ನೂತನ ಕಟ್ಟಡ ಲೋಕಾರ್ಪಣೆ, ಶ್ರೀ ಗಣೇಶ ಹಾಗೂ ನವಗೃಹ ಮೂರ್ತಿಗಳ ಪ್ರಾಣ ಪ್ರತಿಷ್ಠಾಪನೆ, ದೀಪಸ್ತಂಭ ಉದ್ಘಾಟನೆ, ಕಳಸಾರೋಹಣ ಕಾರ್ಯಕ್ರಮ ಅಮ್ಮಿನಭಾವಿ ಪಂಚಗೃಹ ಹಿರೇಮಠದ ಶ್ರೀ ಅಭಿನವ ಶಾಂತಲಿAಗ ಶಿವಾಚಾರ್ಯ ಮಹಾಸ್ವಾಮೀಜಿ ಸಾನ್ನಿಧ್ಯದಲ್ಲಿ ಬುಧವಾರ ನಡೆಯಿತು.
ಬೆಳಗ್ಗೆ ಶ್ರೀ ವಿಘ್ನೇಶ್ವರ ಮೂರ್ತಿಗೆ ಮಹಾಭಿಷೇಕ, ಬಿಲ್ವಾರ್ಚನೆ, ನಂತರ ಹೋಮ- ಹವನ, ರಾಮಲಿಂಗೇಶ್ವರ ಲಿಂಗಕ್ಕೆ ಮಹಾಭಿಷೇಕ, ಪೂಜೆ ಹಾಗೂ ನೂತನ ಕಳಸಕ್ಕೆ ಪೂಜೆ ನೆರವೇರಿಸಲಾಯಿತು. ದೇವಸ್ಥಾನ ಎದುರಿನ ದೀಪಸ್ತಂಭಕ್ಕೆ ಪೂಜೆ, ಅರ್ಚನೆ, ಮಂಗಳಾರತಿ ಕೈಂಕರ್ಯಗಳು ವೇದಮೂರ್ತಿ ಶೇಖಯ್ಯ ಹಿರೇಮಠ, ಅಂಕಲಯ್ಯ ಯರಗಂಬಳಿಮಠ, ವೇ.ಮೂ ಚನ್ನಬಸಯ್ಯ ಹಿರೇಮಠ, ತಿಮÁ್ಮಪುರದ ರುದ್ರಸ್ವಾಮಿ ಮಠದ ವೇ.ಮೂ ಬಸಯ್ಯ ಹಿರೇಮಠ, ಇತರರ ವೈದಿಕತ್ವದಲ್ಲಿ ನಡೆದವು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net