ರಾಮಕುಂಜೇಶ್ವರ ದೇವಳದಲ್ಲಿ ಅಶ್ವತ್ಥ ವೃಕ್ಷದ ಸಂಸ್ಕಾರ

New Project (37)
Published on

ಕಡಬ: ಶ್ರೀ ರಾಮಕುಂಜೇಶ್ವರ ದೇವಸ್ಥಾನದಲ್ಲಿ ಶ್ರೀ ದೇವಳದ ಅಶ್ವತ್ಥ ವೃಕ್ಷದ ಪ್ರತಿಷ್ಠಾಪನೆ, ಉಪನಯನ, ವಿವಾಹಾದಿ ಸಂಸ್ಕಾರ ನಡೆಯಿತು. ಅಶ್ವತ್ಥ ವೃಕ್ಷದ ಸಂಸ್ಕಾರ, ವಾಯಸೊಚ್ಚಿಷ್ಠ ಶಾಂತಿ, ಮಂಗಳಾರತಿ ನಡೆಯಿತು. ವಾಸ್ತು ಹೋಮ, ರಾಕ್ಷೋಘ್ನ ಹೋಮ, ವಾಸ್ತು ಪೂಜೆ, ವಾಸ್ತುಬಲಿ, ಮಂಗಳಾರತಿ, ಶ್ರೀ ಅಶ್ವತ್ಥ ಪ್ರತಿಷ್ಠಾಪನೆ, ಉಪನಯನ, ವಿವಾಹಾದಿ ಸಂಸ್ಕಾರ ನಡೆಯಿತು. ದೇವಳದ ಪವಿತ್ರಪಾಣಿ ನರಹರಿ ಉಪಾಧ್ಯಾಯ, ದೇವಸ್ಥಾನ ಪ್ರಧಾನ ಅರ್ಚಕ ಅನಂತ ಉಡುಪರ ನೇತೃತ್ವದಲ್ಲಿ ವೈದಿಕ ಕಾರ್ಯಕ್ರಮ ನಡೆಯಿತು.

ಉತ್ಸವ ಸಮಿತಿ ಗೌರವಾಧ್ಯಕ್ಷ ರಮೇಶ ಉಪಾಧ್ಯಾಯ ಕಲ್ಲೇರಿ, ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಗುರುಪ್ರಸಾದ ರಾಮಕುಂಜ, ಸದಸ್ಯರಾದ ಕರುಣಾಕರ ಯು.ದೊಡ್ಡ ಉರ್ಕ, ಗುರುವಪ್ಪ ಕುಂಡಾಜೆ, ಶೈಲಜಾ ಬಿ.ಆಳ್ವ ಗುತ್ತುಮನೆ, ಪುಷ್ಪಾವತಿ ಜಯಪ್ರಕಾಶ್ ಬಾರಿಂಜ, ಜಗದೀಶ್ ಶೆಟ್ಟಿ ಅಂಬಾಬೀಡು, ಮಹೇಶ್ ಬಿ.ಬಾಂತೊಟ್ಟು, ಜಗದೀಶ್ ಎ.ಅಜ್ಜಿಕುಮೇರು, ಉತ್ಸವ ಸಮಿತಿ ಉಪಾಧ್ಯಕ್ಷರು, ಸದಸ್ಯರು, ಬೈಲುವಾರು ಸಮಿತಿ ಸಂಚಾಲಕರು, ಗ್ರಾಮಸ್ಥರು, ಭಕ್ತರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net