ಜಿಲ್ಲಾ ಬಿಜೆಪಿಗೆ ರಾಮಕೃಷ್ಣಯ್ಯ ಸಾರಥ್ಯ

ದೊಡ್ಡಬಳ್ಳಾಪುರದ ಜಿಲ್ಲಾ ಬಿಜೆಪಿ ಕಾರ್ಯಾಲಯದಲ್ಲಿ ನೂತನ ಜಿಲ್ಲಾಧ್ಯಕ್ಷ ರಾಮಕೃಷ್ಣಯ್ಯ ಮತ್ತು ತಾಲೂಕು ಅಧ್ಯಕ್ಷರನ್ನು ಜಿಲ್ಲಾ ಬಿಜೆಪಿ ಚುನಾವಣಾಧಿಕಾರಿ ಅಶ್ವತ್ಥನಾರಾಯಣ ಸನ್ಮಾನಿಸಿದರು. ಮಾಜಿ ಜಿಲ್ಲಾಧ್ಯಕ್ಷ ನಾರಾಯಣ ಗೌಡ, ರಾಜ್ಯ ವೈದ್ಯಕೀಯ ಪ್ರಕೋಷ್ಟ ಸಂಚಾಲಕ ಡಾ.ನಾರಾಯಣ್, ಪರಿಶಿಷ್ಟ ಪ್ರಕೋಷ್ಠ ಸಂಚಾಲಕ ಆರ್.ಗೋವಿಂದರಾಜು, ಮಹಿಳಾ ಮೋರ್ಚಾ ಮಾಜಿ ರಾಜ್ಯ ಕಾರ್ಯದರ್ಶಿ ವತ್ಸಲಾ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ರವಿಕುಮಾರ್, ಮುಖಂಡ ಮಂಜುನಾಥ್ ಇದ್ದರು.

Published on

ನಾಲ್ಕೂ ತಾಲೂಕು ಘಟಕಗಳಿಗೂ ಅಧ್ಯಕ್ಷರ ನೇಮಕ ಮಾಡಿ ಆದೇಶ

ದೊಡ್ಡಬಳ್ಳಾಪುರ: ಬೆಂಗಳೂರು ಗ್ರಾಮಾಂತರ ಜಿಲ್ಲಾ ಬಿಜೆಪಿ ಅಧ್ಯಕ್ಷ ಸೇರಿ ಜಿಲ್ಲೆಯ ನಾಲ್ಕೂ ತಾಲೂಕುಗಳಿಗೆ ಅಧ್ಯಕ್ಷರನ್ನು ನೇಮಿಸಿ ಜಿಲ್ಲಾ ಬಿಜೆಪಿ ಚುನಾವಣಾಧಿಕಾರಿ ಅಶ್ವತ್ಥನಾರಾಯಣ್ ನಗರದ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಗುರುವಾರ ಆದೇಶ ಹೊರಡಿಸಿದರು.

ಜಿಲ್ಲಾಧ್ಯಕ್ಷರಾಗಿ ಎಚ್.ರಾಮಕೃಷ್ಣಪ್ಪ, ದೊಡ್ಡಬಳ್ಳಾಪುರ ನಗರ ಮಂಡಲ ಅಧ್ಯಕ್ಷರಾಗಿ ಬಿ.ಮುದ್ದಪ್ಪ, ದೊಡ್ಡಬಳ್ಳಾಪುರ ಗ್ರಾಮಾಂತರ ಅಧ್ಯಕ್ಷರಾಗಿ ಕೆ.ನಾಗೇಶ್, ನೆಲಮಂಗಲ ಗ್ರಾಮಾಂತರ ಮಂಡಲ ಅಧ್ಯಕ್ಷರಾಗಿ ಜಗದೀಶ್ ಚೌದರಿ, ದೇವನಹಳ್ಳಿ ಗ್ರಾಮಾಂತರ ಅಧ್ಯಕ್ಷರಾಗಿ ಎನ್.ಎಲ್.ಅಂಬರೀಷ್ ಗೌಡ, ಹೊಸಕೋಟೆ ಮಂಡಲ ನಗರ ಅಧ್ಯಕ್ಷರಾಗಿ ಬಾಲಚಂದ್ರನ್ ನೇಮಕವಾಗಿದ್ದಾರೆ.

ಪಕ್ಷ ನಿಷ್ಠರಿಗೆ ಒಳ್ಳೆ ಸ್ಥಾನಮಾನ: ಬಿಜೆಪಿ ಕೇವಲ ಒಂದು ಕುಟುಂಬಕ್ಕೆ ಸೀಮಿತವಾಗಿಲ್ಲ. ಪಕ್ಷ ಯಾರ ಪರವೂ ಇಲ್ಲ, ವಿರೋಧವೂ ಇಲ್ಲ, ಪಕ್ಷ ನಿಷ್ಠರಿಗೆ ಒಳ್ಳೆ ಸ್ಥಾನಮಾನ ಸಿಗುತ್ತದೆ. ರಾಜ್ಯ ಚುನಾವಣೆಯಲ್ಲಿ ಸುಳ್ಳು ಭರವಸೆಗಳನ್ನು ನೀಡಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ. ಜಿಲ್ಲೆಯ ನಾಲ್ಕು ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಗೆಲ್ಲಿಸಲು ಹಗಲಿರುಳು ಕೆಲಸ ಮಾಡುತ್ತೇವೆ. ಎಲ್ಲರೂ ಸೇರಿ ಒಗ್ಗಾಟ್ಟಾಗಿ ಕೆಲಸ ಮಾಡಿ ಪಕ್ಷವನ್ನು ಗಟ್ಟಿಗೊಳಿಸುವ ಪ್ರಯತ್ನ ಮಾಡೋಣ ಎಂದು ಜಿಲ್ಲಾಧ್ಯಕ್ಷ ಎಚ್.ರಾಮಕೃಷ್ಣಪ್ಪ ಕಾರ್ಯಕರ್ತರಿಗೆ ಕರೆ ನೀಡಿದರು.

ಜಿಲ್ಲೆಯ ನಾಲ್ಕು ಮಂಡಳಗಳ ಅಧ್ಯಕ್ಷರನ್ನು ನೇಮಕ ಮಾಡಲಾಗಿದೆ. ರಾಜಕೀಯ ಪಕ್ಷದಲ್ಲಿ ಕಟ್ಟಕಡೆಯ ಕಾರ್ಯಕರ್ತನನ್ನ ಗುರುತಿಸುವುದು ಬಿಜೆಪಿ ಮಾತ್ರ. ಹಣವಂತರನ್ನು, ಕುಟುಂಬಸ್ಥರನ್ನು ಗುರುತಿಸಿ ಸ್ಥಾನ ಮಾನವನ್ನ ಇಲ್ಲಿ ನೀಡಲಾಗುವುದಿಲ್ಲ. -ಅಶ್ವತ್ಥನಾರಾಯಣ್ ಜಿಲ್ಲಾ ಬಿಜೆಪಿ ಚುನಾವಣಾಧಿಕಾರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net