1000 ಕೋಟಿ ರೂ.ಮೀರಿದ ಒಟ್ಟು ವ್ಯವಹಾರ : ಶ್ರೀ ರಾಮಕೃಷ್ಣ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಹೊಸ ಮೈಲುಗಲ್ಲು

LEAD Technologies Inc. V1.01
LEAD Technologies Inc. V1.01
Published on



ಮಂಗಳೂರು : ಮಂಗಳೂರಿನ ಶ್ರೀ ರಾಮಕೃಷ್ಣ ಕ್ರೆಡಿಟ್ ಕೋ-ಓಪರೇಟಿವ್ ಸೊಸೈಟಿಯು ಜೂನ್ ಅಂತ್ಯಕ್ಕೆ 536 ಕೋಟಿ ರೂ.ಠೇವಣಿ
ಹಾಗೂ 465 ಕೋಟಿ ರೂ. ಸಾಲ ನೀಡಿದ್ದು, ಒಟ್ಟು 1001 ಕೋಟಿ ರೂ. ವ್ಯವಹಾರ ದಾಖಲಿಸಿದೆ. ಸ್ಥಾಪನೆಯ 30 ವರ್ಷಗಳ ಅವಧಿಯಲ್ಲಿ
ಸಹಕಾರ ರಂಗದಲ್ಲಿ ಈ ಸಾಧನೆ ಮಾಡಿದ ಅವಿಭಜಿತ ದ.ಕ. ಜಿಲ್ಲೆಯ ಪ್ರಥಮ ಕ್ರೆಡಿಟ್ ಸಹಕಾರಿ ಸಂಸ್ಥೆಯಾಗಿ ಅದ್ವಿತೀಯ ಸಾಧನೆ ಮಾಡಿದೆ ಎಂದು ಸಂಘದ ಅಧ್ಯಕ್ಷ ಜೈರಾಜ್ ಬಿ.ರೈ ತಿಳಿಸಿದ್ದಾರೆ.
ಸಂಘವು 2025ರ ವರ್ಷಾಂತ್ಯಕ್ಕೆ ಈ ಸಾಧನೆಯ ಗುರಿ ಹೊಂದಿತ್ತು. ಆದರೆ 2024-25ನೇ ಸಾಲಿನಲ್ಲಿ ಸಾಕಷ್ಟು ಮುಂಚಿತವಾಗಿ ಮೊದಲ ತ್ರೈಮಾಸಿಕ ಅವಧಿಯಲ್ಲೇ ಇದನ್ನು ಸಾಧಿಸಲು ಸಾಧ್ಯವಾಗಿರುವುದಕ್ಕೆ ಅತ್ಯಂತ ಹರ್ಷವಾಗಿದೆ ಎಂದು ಅವರು ತಿಳಿಸಿದ್ದಾರೆ.
2015ರ ಮಾರ್ಚ್ 31ಕ್ಕೆ 205 ಕೋಟಿ ರೂ. ಒಟ್ಟು ವ್ಯವಹಾರ 10ನೇ ವರ್ಷದ ಅವಧಿಯಲ್ಲಿ ನಾಲ್ಕು ಪಟ್ಟು ಹೆಚ್ಚಳ ಕಂಡು, ಸಂಘವು 30.06.2024ಕ್ಕೆ 1000 ಕೋಟಿ ರೂ. ಮೀರಿದ ವ್ಯವಹಾರ ಸಾಧಿಸಿದೆ.
1.03.2015ಕ್ಕೆ ನಿವ್ವಳ ಲಾಭವು 3 ಕೋಟಿ ರೂ. ಇದ್ದು, ಮಾರ್ಚ್ 2024 ಕ್ಕೆ 12 ಕೋಟಿ ರೂ.ಮೀರಿದೆ. ಸಂಘದ ಸಾಧನೆಯ ಇತರ ಪ್ರಮುಖ ಅಂಶವೆಂದರೆ ಕಳೆದ 17 ವರ್ಷಗಳಿಂದ ನಿವ್ವಳ ಅನುತ್ಪಾದಕ ಆಸ್ತಿ ಶೂನ್ಯ ಪ್ರಮಾಣದಲ್ಲಿದೆ.
ಸಂಘವು ಸ್ಥಾಪನೆಯಾದಂದಿನಿಂದ ಸದಸ್ಯರಿಗೆ ನಿರಂತರವಾಗಿ ಡಿವಿಡೆಂಡ್ ನೀಡುತ್ತಾ ಬಂದಿದೆ. 2022-23ನೇ ಸಾಲು ಸೇರಿದಂತೆ ಕಳೆದ 4 ವರ್ಷಗಳಿಂದ ಸದಸ್ಯರಿಗೆ ಗರಿಷ್ಠ ಶೇ.25 ರಷ್ಟು ಡಿವಿಡೆಂಡ್ ನೀಡುತ್ತಿದೆ. ಸದಸ್ಯರಿಗೆ ಗರಿಷ್ಠ ಶೇ.25 ರಷ್ಟು ಡಿವಿಡೆಂಡ್ ನೀಡುತ್ತಿರುವ ರಾಜ್ಯದ ಕೆಲವೇ ಕೆಲವು ಕ್ರೆಡಿಟ್ ಸಹಕಾರ ಸಂಘಗಳ ಪೈಕಿ ಶ್ರೀ ರಾಮಕೃಷ್ಣ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಒಂದಾಗಿದೆ. ಸಂಘವು ಸರ್ಕಾರದ ಶಾಸನಬದ್ಧ ಲೆಕ್ಕಪರಿಶೋಧನೆಯಲ್ಲಿ ಸತತವಾಗಿ ಎ ತರಗತಿ ಸಹಕಾರ ಸಂಘವಾಗಿ ವರ್ಗೀಕೃತವಾಗಿರುತ್ತದೆ.
ವಿಷನ್ 2025 ರಂತೆ 31.03.2025ಕ್ಕೆ 30 ಶಾಖೆಗಳನ್ನು ಹೊಂದುವ ಗುರಿ ಇಟ್ಟುಕೊಂಡಿದ್ದು, ಪ್ರಸ್ತುತ ಸಂಘವು ತನ್ನ ಕಾರ್ಯವ್ಯಾಪ್ತಿಯಾದ ಅವಿಭಜಿತ ದ.ಕ. ಜಿಲ್ಲೆಯಲ್ಲಿ ಒಟ್ಟು 25 ಶಾಖೆಗಳನ್ನು ಹೊಂದಿದೆ. 5 ಹೊಸ ಶಾಖೆಗಳನ್ನು ಬೆಳ್ಳಾರೆ, ಸವಣೂರು, ಪಡೀಲ್, ಹಿರಿಯಡ್ಕ, ಕೋಟದಲ್ಲಿ ಅತೀ ಶೀಘ್ರದಲ್ಲಿ ಆರಂಭಿಸಿ, ಒಟ್ಟು ಶಾಖೆಯನ್ನು 30ಕ್ಕೆ ವಿಸ್ತರಿಸಲಾಗುವುದು.
ಸಂಘದ ಕೇಂದ್ರ ಕಛೇರಿಗೆ ಮಂಗಳೂರಿನ ಕದ್ರಿ ಕಂಬಳ ರಸ್ತೆ ಇಲ್ಲಿ 37000 ಚದರ ಡಿ ವಿಸ್ತೀರ್ಣದ ಸುಸಜ್ಜಿತ ಕಟ್ಟಡ ನಿರ್ಮಾಣದ
ಕಾರ್ಯ ಪ್ರಗತಿಯಲ್ಲಿದ್ದು, ಅದನ್ನು 2024ರ ಡಿಸೆಂಬರ್ ತಿಂಗಳಾಂತ್ಯದೊಳಗೆ ಲೋಕಾರ್ಪಣೆ ಮಾಡಲು ಉದ್ದೇಶಿಸಲಾಗಿದೆ. ಆಧುನಿಕ ತಂತ್ರಜ್ಞಾನ ಅಳವಡಿಕೆಯೊಂದಿಗೆ ಸಂಘದ ಸದಸ್ಯ ಗ್ರಾಹಕರಿಗೆ ಇನ್ನಷ್ಟು ಉತ್ತಮ ಸೇವೆ ಲಭಿಸುವಂತಾಗಲು ಕ್ರಮವಹಿಸಲಾಗುತ್ತಿದೆ.
ಸಂಘದ ನಿರಂತರ ಸಾಧನೆಗೆ ದ್ಯೋತಕವಾಗಿ 6 ಬಾರಿ ರಾಜ್ಯ ಮಟ್ಟದ ಮತ್ತು 12 ಬಾರಿ ಜಿಲ್ಲಾ ಮಟ್ಟದ ಅತ್ಯುತ್ತಮ ಕ್ರೆಡಿಟ್ ಸಹಕಾರಿ
ಸಂಸ್ಥೆಯಾಗಿ ರಾಜ್ಯ ಸಹಕಾರ ಇಲಾಖೆಯಿಂದ ಹಾಗೂ ಎಸ್.ಸಿ.ಡಿ.ಸಿ.ಸಿ. ಬ್ಯಾಂಕಿನಿಂದ ಪ್ರಶಸ್ತಿ ಗಳಿಸಿದೆ. ಸಂಘದ ಎಲ್ಲ ಗ್ರಾಹಕರಿಗೆ, ನಿರ್ದೇಶಕರಿಗೆ ಹಾಗೂ ಸಿಬ್ಬಂದಿಗೆ ಕೃತಜ್ಞತೆ ಸಲ್ಲಿಸುವುದಾಗಿ ಸಂಘದ ಅಧ್ಯಕ್ಷ ಜೈರಾಜ್ ಬಿ.ರೈ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net