ಮೈಸೂರಿನಲ್ಲಿ ರಾಮಕೃಷ್ಣ ಜಯಂತಿ ಆಚರಣೆ

Ramakrishna Jayanti celebrated in Mysore
Published on

ಮೈಸುರು: ರಾಮಕೃಷ್ಣನಗರದ ಪರಮಹಂಸ ಯೋಗ ಮಹಾವಿದ್ಯಾಲಯದಲ್ಲಿ ಶನಿವಾರ ಶ್ರೀ ರಾಮಕೃಷ್ಣ ಪರಮಹಂಸರ 190ನೇ ಜಯಂತಿ ಆಚರಿಸಲಾಯಿತು.

ಈ ಸಂದರ್ಭ ರಾಣಿ ಸ್ವಾಮಿಗೌಡ ಹಾಗೂ ಎಸ್. ಕಾವ್ಯಾ ಅವರಿಗೆ ಯೋಗ ರತ್ನ, ಬಿ.ಜಿ. ವಿಜಯಕುಮಾರ್, ಎಸ್. ಕಾವ್ಯಾ, ಆನಂದ್ ಬಾಳುಶಿರೋಳ್, ಎನ್.ಆರ್. ರೂಪಶ್ರೀ, ಎಂ.ಡಿ. ಸ್ವಪ್ನಾ, ವಿ. ಹರಿಪ್ರಸಾದ್ ಅವರಿಗೆ ಯೋಗಾಚಾರ್ಯ ಪ್ರಶಸ್ತಿಯನ್ನು ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್ ಪ್ರದಾನ ಮಾಡಿದರು.

ಮೆಸೂರು ಯೋಗ ಒಕ್ಕೂಟದ ಕಾರ್ಯಾಧ್ಯಕ್ಷ ಶಿವಪ್ರಕಾಶ್ ಮಾತನಾಡಿ, ಇದುವರೆಗೆ 13 ತಂಡಗಳಿಗೆ ಅಂತಾರಾಷ್ಟ್ರೀಯ ಯೋಗ ಶಿಕ್ಷಕ ತರಬೇತಿ ನೀಡಲಾಗಿದೆ. ಇಲ್ಲಿ ತರಬೇತಿ ಪಡೆದವರು ದೇಶ- ವಿದೇಶಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಅಷ್ಟಾಂಗ ಯೋಗ, ಪವರ್ ಯೋಗ, ಗರ್ಭಿಣಿಯರಿಗೆ ಯೋಗ, ಪ್ರಾಣಾಯಾಮ, ಧ್ಯಾನ, ವಿನ್ಯಾಸ ಯೋಗ, ಯೋಗ ಥೆರಪಿ, ಫ್ಯಾಷಿಯಲ್ ಯೋಗ, ಹಠ ಯೋಗ, ಮುದ್ರಾ ಯೋಗ, ಆಯುರ್ವೇದ, ಒತ್ತಡ ಮತ್ತು ತೂಕ ನಿರ್ವಹಣೆ ಅಂತರ್ ದೃಷ್ಟಿ ವಿದ್ಯೆ ಕಲಿಸಲಾಗುತ್ತಿದೆ ಎಂದರು.

ಪರಮಹಂಸ ಯೋಗ ಮಹಾವಿದ್ಯಾಲಯದ ಸಂಯೋಜಕಿ ಆರ್. ಭಾವನಾ, ಪ್ರಾಂಶುಪಾಲ ಬಿ.ಜಿ. ವಿಜಯಕುಮಾರ್, ನೇಚರ್ ಹೀಲಿಂಗ್ ಮತ್ತು ಕಲರ್ ಥೆರಪಿ ಚಿಕಿತ್ಸಕಿ ಗಾಯಿತ್ರಿ ಅರುಣ್, ಮೆಸೂರು ಯೋಗ ಒಕ್ಕೂಟದ ಉಪಾಧ್ಯಕ್ಷ ಎನ್. ಪಶುಪತಿ, ರಾಮಚಂದ್ರನಾಯಕ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net