

ಮಂಗಳೂru : ಅವಿಭಜಿತ ದ.ಕ.ಜಿಲ್ಲೆಯ ಪ್ರತಿಷ್ಠಿತ ಸಹಕಾರಿ ಸಂಸ್ಥೆಯಾದ ಶ್ರೀ ರಾಮಕೃಷ್ಣ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ ಸುರತ್ಕಲ್ ಶಾಖೆಯ ನವೀಕೃತ ಕಛೇರಿಯನ್ನು ಹರುಷ ಕಾಂಪ್ಲೆಕ್ಸ್ ಕಟ್ಟಡದಲ್ಲಿ ಸಂಘದ ಅಧ್ಯಕ್ಷ ಜೈರಾಜ್ ಬಿ. ರೈ
ಉದ್ಘಾಟಿಸಿದರು.
ಸಂಘದ ಅಭಿವೃದ್ಧಿಗೆ ಸಹಕರಿಸಿದ ಸದಸ್ಯ ಗ್ರಾಹಕರಿಗೆ ಹೆಚ್ಚಿನ ಸೌಲಭ್ಯಗಳನ್ನು ಒದಗಿಸುವುದು ಆಡಳಿತ ಮಂಡಳಿಯ ಕರ್ತವ್ಯವಾಗಿದೆ. ಈ ನಿಟ್ಟಿನಲ್ಲಿ ಸುರತ್ಕಲ್ ಶಾಖಾ ಕಛೇರಿಯನ್ನು ಆಧುನೀಕರಿಸಿ, ಹವಾನಿಯಂತ್ರಿತ ಸೌಲಭ್ಯಗಳೊಂದಿಗೆ ಗ್ರಾಹಕರ ಸೇವೆಗೆ ಅರ್ಪಿಸಲಾಗಿದೆ ಎಂದು ಅವರು ಹೇಳಿದರು.
ಸಂಘವು ಸದಸ್ಯರ ಸಹಕಾರದಿಂದ 1,000 ಕೋಟಿ ವ್ಯವಹಾರ ರೂ. ದಾಟಿದ್ದು, ಕಳೆದ ಆರು ವರ್ಷಗಳಿಂದ ಶೇ.25 ರಷ್ಟು ಡಿವಿಡೆಂಡ್ ಸದಸ್ಯರಿಗೆ ನೀಡಲಾಗುತ್ತಿದೆ. ಸಂಘವು ಸಣ್ಣ ಮೊಬಲಗಿನ ರಿಟೇಲ್ ಸಾಲ ನೀಡುವಿಕೆಗೆ ಒತ್ತು ನೀಡುತ್ತಿದ್ದು, 40 ಸಾವಿರಕ್ಕಿಂತ ಹೆಚ್ಚು ಸಾಲಗಾರ ಗ್ರಾಹಕರಿದ್ದಾರೆ. ಸಾಲ ವಸೂಲಾತಿ ಅತ್ಯುತ್ತಮವಾಗಿದ್ದು, ಕಳೆದ 17 ವರ್ಷಗಳಿಂದ ನೆಟ್ ಎನ್‌ಪಿಎ ಶೂನ್ಯ ಪ್ರಮಾಣದಲ್ಲಿದೆ ಎಂದು ಅಧ್ಯಕ್ಷ ಜೈರಾಜ್ ಬಿ. ರೈ ತಿಳಿಸಿದರು.
ಹವಾನಿಯಂತ್ರಿತ ವ್ಯವಸ್ಥೆ ಉದ್ಘಾಟಿಸಿದ ಸಂಘದ ನಿರ್ದೇಶಕ ವಿಠಲ ಪಿ. ಶೆಟ್ಟಿ ಮಾತನಾಡಿ ‘ ಉತ್ತಮ ಸೇವೆಯಿಂದ ಗ್ರಾಹಕರನ್ನು ಆಕರ್ಷಿಸಿ ಶಾಖೆಯ ವ್ಯವಹಾರವು ಪ್ರತೀ ವರ್ಷ ಹೆಚ್ಚಿಸುವಂತೆ ಮಾಡುವುದು ಸಿಬ್ಬಂದಿ ಕರ್ತವ್ಯವಾಗಿದೆ ಎಂದರು.
ನಿರ್ದೇಶಕ ಪಿ.ಬಿ. ದಿವಾಕರ ರೈ ಮಾತನಾಡಿ ಸಂತೃಪ್ತ ಗ್ರಾಹಕರೇ ಸಂಘದ ರಾಯುಭಾರಿಗಳು. ಇವರು ಸಂಘಕ್ಕೆ ಇನ್ನಷ್ಟು ಹೊಸ ಗ್ರಾಹಕರನ್ನು ಪರಿಚಯಿಸಿ ವ್ಯವಹಾರಾಭಿವೃದ್ಧಿ ಹೊಂದಲು ಕಾರಣರಾಗುವರು ಎಂದರು.
ನಿರ್ದೇಶಕ ದಯಾಕರ ಆಳ್ವ ಮಾತನಾಡಿ ‘ ಸಂಘದ ಕೇಂದ್ರ ಕಚೇರಿಗೆ ನೂತನ ಕಟ್ಟಡ ಹಾಗೂ ಇನ್ನೂ ಐದು ಶಾಖೆಗಳು ಶೀಘ್ರದಲ್ಲಿ ಶುಭಾರಂಭಗೊಳ್ಳಲಿದೆ. ಗ್ರಾಹಕರೇ ಸಂಘದ ಬೆನ್ನೆಲುಬು ಇವರ ಸಹಕಾರವಿರುವುದರಿಂದ ಮಾತ್ರ ಸಂಘದ ವ್ಯವಹಾರ ವಿಸ್ತರಣೆ ಹೊಂದಿ ಅಭಿವೃದ್ಧಿ ಹೊಂದಲು ಸಾಧ್ಯ ಎಂದರು.
ಶಾಖೆಯ ಸಲಹಾ ಸಮಿತಿ ಅಧ್ಯಕ್ಷ ಡಾ. ಟಿ. ಆರ್. ಶೆಟ್ಟಿ ಮತ್ತು ಶಾಖಾಧಿಕಾರಿ ತುಳಸಿ ಅವರನ್ನು ಈ ಸಂದರ್ಭ ಸನ್ಮಾನಿಸಲಾಯಿತು. ಸಲಹಾ ಸಮಿತಿ ಸದಸ್ಯರಾದ ರಮಾನಂದ ರಾವ್, ಬಾಲಕೃಷ್ಣ ಶೆಟ್ಟಿ , ಡಾ. ಕೆ.ಪಿ.ಕೆ. ಹೆಗ್ಡೆ ಮತ್ತು ಶಾಖಾ ಸಿಬ್ಬಂದಿಯನ್ನು ಗೌರವಿಸಲಾಯಿತು. ಹರೀಶ್ ಕಾರ್ಯಕ್ರಮ ನಿರೂಪಿಸಿದರು.