ರಾಮಕೃಷ್ಣ ಮಠದಲ್ಲಿ ಮೂರನೇ ಭಜನ್ ಸಂಧ್ಯಾ ಕಾರ್ಯಕ್ರಮ ಸಂಪನ್ನ

mng- aug 7- Bhajan Sandhya - 1
Published on

ಮಂಗಳೂರು: ನಗರದ ರಾಮಕೃಷ್ಣ ಮಠದಲ್ಲಿ ಮೂರನೇ ‘ಭಜನ್ ಸಂಧ್ಯಾ’ ಕಾರ್ಯಕ್ರಮ ಸಂಪನ್ನಗೊಂಡಿತು. ಭಜನ್ ಸಂಧ್ಯಾದ ಮೂರನೇ ಕಾರ್ಯಕ್ರಮದಲ್ಲಿ ನಗರದಲ್ಲಿ ಬೋಳಾರ ಕಡವಿನಬಾಗಿಲು ಶ್ರೀ ವಿಶ್ವೇಶ್ವರ ಭಜನಾ ಮಂಡಳಿ ಸದಸ್ಯರು ಭಜನಾ ಸೇವೆ ನೀಡಿದರು.
ಭಜನಾ ತಂಡದ ಸೇವೆಯ ನಂತರ ಮಂಗಳೂರು ರಾಮಕೃಷ್ಣ ಮಠದ ಅಧ್ಯಕ್ಷರಾದ ಸ್ವಾಮಿ ಜಿತಕಾಮಾನಂದಜಿ ಅವರು ಆಶೀರ್ವಚನ ನೀಡಿದರು. ಈ ಸಂದರ್ಭದಲ್ಲಿ ಆಶ್ರಮದ ವತಿಯಿಂದ ಭಜನಾ ತಂಡಕ್ಕೆ ಸ್ಮರಣಿಕೆ ನೀಡಿ ಗೌರವಿಸಲಾಯಿತು.
ತದನಂತರ ಆರತಿ ಹಾಗೂ ಆಶ್ರಮದ ವಿದ್ಯಾರ್ಥಿಗಳಿಂದ ಭಜನೆ ನಡೆಯಿತು. ಆಶ್ರಮದ ಭಕ್ತರು, ಸ್ವಯಂಸೇವಕರು, ಸಾರ್ವಜನಿಕರು ಭಾಗವಹಿಸಿದರು.
ಆ.13 ರಂದು ಸಂಜೆ 4 ಗಂಟೆಗೆ ಸರಿಯಾಗಿ ಶ್ರೀ ವಿಠೋಭ ರುಕ್ಮಾಯಿ ಭಜನಾ ಮಂದಿರ, ತೊಕ್ಕೊಟ್ಟು, ಮಂಗಳೂರು ಇವರಿಂದ ಭಜನಾ ಸೇವೆ ನಡೆಯಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net