ಬೃಹತ್ ಗಾತ್ರದ ಹರ್ನಿಯಾಗೆ ವೈದ್ಯರ ಯಶಸ್ವಿ ಚಿಕಿತ್ಸೆ

Ramakrishana Hospital
Published on

ಬೆಂಗಳೂರು: ಕಳೆದ ಹತ್ತು ವರ್ಷಗಳಿಂದ ತೀವ್ರತರವಾದ ಹರ್ನಿಯಾ ಸಮಸ್ಯೆಯಿಂದ ಬಳಲುತ್ತಿದ್ದ ವೃದ್ಧೆಯೊಬ್ಬರಿಗೆ ಚಿಕಿತ್ಸೆ ನೀಡುವಲ್ಲಿ ನಗರದ ರಾಮಕೃಷ್ಣ ಆಸ್ಪತ್ರೆ ವೈದ್ಯರು ಯಶಸ್ವಿಯಾಗಿದ್ದಾರೆ.

ಹರ್ನಿಯಾ ಮೇಲ್ನೋಟಕ್ಕೆ ಹೊಟ್ಟೆಯ ಭಾಗದಲ್ಲಿ (ಕರುಳಿನ ಬಳಿ ಕಾಣಿಸಿಕೊಳ್ಳುವ ಸಮಸ್ಯೆ) ಊತದಂತೆ ಕಾಣುತ್ತದೆ. 63 ವರ್ಷದ ವೃದ್ಧೆ ಹರ್ನಿಯಾ ಜೊತೆಗೆ ಬೊಜ್ಜು, ಅಸ್ತಮಾ, ರಕ್ತದ ಒತ್ತಡ ಹಾಗೂ ಮಧುಮೇಹ ಸಮಸ್ಯೆಗಳನ್ನು ಹೊಂದಿದ್ದರು. ಆರಂಭದಲ್ಲಿ ಹೊಟ್ಟೆಯ ಉಬ್ಬರ, ವಾಂತಿಯಂತಹ ಲಕ್ಷಣಗಳೊಂದಿಗೆ ಆಸ್ಪತ್ರೆಗೆ ಆಗಮಿಸಿದ್ದ ಅವರಿಗೆ ಅಗತ್ಯ ವೈದ್ಯಕೀಯ ತಪಾಸಣೆ ನಡೆಸಲಾಯಿತು. ಈ ಪ್ರಕರಣದಲ್ಲಿ ಹರ್ನಿಯಾ ಹೊಟ್ಟೆಯ ಶೇ. 40 ಭಾಗ ಆವರಿಸಿತ್ತು. ಸುಮಾರು 10 ಸೆಂ.ಮೀ. ಮಾಂಸಖಂಡ ಬೆಳೆದಿತ್ತು. ಹಾಗಾಗಿ ಸಮಸ್ಯೆ ಗಂಭೀರವಾಗಿತ್ತು ಎಂದು ಆಸ್ಪತ್ರೆಯ ಲ್ಯಾಪ್ರೋಸ್ಕೊಪಿಕ್ ಸರ್ಜನ್ ಡಾ. ರಾಜೀವ್ ಪ್ರೇಮನಾಥ್ ತಿಳಿಸಿದ್ದಾರೆ.

ರೋಗಿಗೆ ಇದ್ದ ಎಲ್ಲ ರೀತಿಯ ಆರೋಗ್ಯ ಸಮಸ್ಯೆಗಳನ್ನು ಪರಿಶೀಲಿಸಿ ಬೇರೆ ಬೇರೆ ತಜ್ಞರಿಂದ ಸಲಹೆ ಪಡೆದು ಸೂಕ್ತ ಆರೈಕೆಯೊಂದಿಗೆ ಚಿಕಿತ್ಸೆ ನೀಡಲಾಯಿತು. ರೋಗಿಯು ಚೇತರಿಸಿಕೊಳ್ಳಲು ಕೆಲ ವಾರಗಳ ಅಗತ್ಯವಿದೆ ಎಂದು ವಿವರಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net