ರಾಮಯ್ಯ ಇನ್‌ಸ್ಟಿಟ್ಯೂಟ್‌ನಲ್ಲಿ ಸರ್.ಎಂ.ವಿ ಜನ್ಮದಿನಾಚರಣೆ

Ramaiah
Published on

ಬೆಂಗಳೂರು: ರಾಮಯ್ಯ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಆರ್‌ಐಟಿ) ಸರ್.ಎಂ.ವಿಶ್ವೇಶ್ವರಯ್ಯ ಅವರ ಜಯಂತಿ ಪ್ರಯುಕ್ತ ಇಂಡಿಯನ್ ನ್ಯಾಷನಲ್ ಅಕಾಡೆಮಿ ಎಂಜಿನಿಯರಿಂಗ್ (ಐಎನ್‌ಎಇ) ಬೆಂಗಳೂರು ವಿಭಾಗ, ಗೋಕುಲ ಎಜುಕೇಷನ್ ಫೌಂಡೇಷನ್ ಜೊತೆಗೂಡಿ ಪರಿಸರ ಮತ್ತು ಹಸಿರು ಇಂಧನ- ‘ಪರ್ಯಾವರಣ್’ ಎಂಬ ವಿಶಿಷ್ಟ ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು.

ಗೋಕುಲ ಎಜುಕೇಷನ್ ಫೌಂಡೇಷನ್ ಉಪಾಧ್ಯಕ್ಷ ಹಾಗೂ ವಿಧಾನ ಪರಿಷತ್ ಸದಸ್ಯ ಡಾ. ಎಂ.ಆರ್. ಸೀತಾರಾಮ್ ಸಮಾರಂಭದಲ್ಲಿ ಪದ್ಮವಿಭೂಷಣ ಡಾ. ವಿ.ಕೆ. ಅತ್ರೆ ಹಾಗೂ ಜಿಕೆವಿಕೆಯ ಪ್ರೊಫೆಸರ್ ಎನ್. ನಟರಾಜ ಕರಬರನ್ನು ಗೌರವಿಸಿದರು.

ಐಎನ್‌ಎಇ ಬೆಂಗಳೂರು ವಿಭಾಗದ ಅಧ್ಯಕ್ಷ ಪ್ರೊ. ಎಸ್. ಗೋಪಾಲಕೃಷ್ಣನ್, ರಾಮಯ್ಯ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಆರ್‌ಐಟಿ) ಪ್ರಾಂಶುಪಾಲ ಡಾ. ಎನ್‌ವಿಆರ್ ನಾಯ್ಡು ಹಾಗೂ ಇತರೆ ಎಂಜಿನಿಯರ್‌ಗಳು ಭಾಗವಹಿಸಿದ್ದರು.

ಈ ಕಾರ್ಯಕ್ರಮದಲ್ಲಿ ಮಾತನಾಡಿದ ಡಾ. ಎಂ.ಆರ್. ಸೀತಾರಾಮ್, ನಾವು ಭೂಮಿಯನ್ನು ಸಂರಕ್ಷಣೆ ಮಾಡಬೇಕಿದೆ. ಇದಕ್ಕಾಗಿ ನಾವು ಸುಸ್ಥಿರ ಅಭಿವೃದ್ಧಿಯ ಮಾದರಿ ಅನುಸರಿಸಬೇಕಿದೆ ಎಂದು ಪರಿಸರ ಕಾಳಜಿಯ ಬಗ್ಗೆ ಅರಿವು ಮೂಡಿಸಿದರು.

ಕಾರ್ಯಕ್ರಮದಲ್ಲಿ ವಿಜ್ಞಾನಿ ಪ್ರೊ. ಕೆ.ಎನ್. ಗಣೇಶಯ್ಯ ಹಾಗೂ ಜಿಕೆವಿಕೆಯ ಪ್ರೊ. ಎಂ.ಎನ್. ತಿಮ್ಮೇಗೌಡ, ಐಐಎಸ್ಸಿ ಪ್ರೊ. ಟಿ.ವಿ. ರಾಮಚಂದ್ರ ಭಾಗವಹಿಸಿ ಪರಿಸರ ರಕ್ಷಣೆಯ ಕುರಿತು ಮಾತನಾಡಿದರು.

ಬೆಂಗಳೂರು ಮತ್ತು ಮೈಸೂರಿನಿಂದ 9 ಎಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ತಮ್ಮ ಸಂಶೋಧನಾ ಪತ್ರಿಕೆಗಳನ್ನು ಮಂಡಿಸಿದರು. ಉತ್ತಮ ಪತ್ರಿಕೆಯನ್ನು ಮಂಡಿಸಿದ 4 ವಿದ್ಯಾರ್ಥಿಗಳಿಗೆ ನಗದು ಬಹುಮಾನ ನೀಡಿ ಗೌರವಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net