

ನೆಲ್ಯಾಡಿ: ಕಡಬ ತಾಲೂಕಿನ ನೆಲ್ಯಾಡಿ ಗ್ರಾಮದ ಬದ್ರಿಯಾ ಜುಮಾ ಮಸೀದಿಯಲ್ಲಿ ಈದುಲ್ ಫಿತ್ರ್ ಸಾಮೂಹಿಕ ಈದ್ ನಮಾಜ್ ನಡೆಸಲಾಯಿತು. ಮಸೀದಿ ಖತಿಬ ಶೌಕತ್ ಅಲಿ ಅಮಾನಿ, ಮಸೀದಿ ಆಡಳಿತ ಸಮಿತಿ ಅಧ್ಯಕ್ಷ ಎನ್.ಎಸ್.ಸುಲೈಮಾನ್, ಕಾರ್ಯದರ್ಶಿ ಇಲ್ಯಾಸ್ ಶಾಂತಿಬೆಟ್ಟು, ಕೋಶಾಧಿಕಾರಿ ಉಮ್ಮರ್ ತಾಜ್, ಪಂಚಾಯಿತಿ ಅಧ್ಯಕ್ಷ ಮಹಮ್ಮದ್ ಹನೀಫ್, ಅಬ್ದುಲ್ ಜಬ್ಬಾರ್, ಮಹಮ್ಮದ್ ಇಕ್ಬಾಲ್, ಮಸೀದಿ ಮಾಜಿ ಅಧ್ಯಕ್ಷ ಇಸ್ಮಾಯಿಲ್ ನೆಲ್ಯಾಡಿ, ಮಹಮ್ಮದ್ ಹನೀಫ್, ಅಶ್ರಫ್ ಉಪಸ್ಥಿತರಿದ್ದರು. ಕೇರಳಕ್ಕೆ ವರ್ಗಾವಣೆಗೊಂಡಿರುವ ಮಸೀದಿ ಖತಿಬ ಶೌಕತ್ ಅಲಿ ಅಮಾನಿ ಅವರನ್ನು ಗೌರವಿಸಲಾಯಿತು.