

ಚಿಕ್ಕೋಡಿ: ಶಿಕ್ಷಣ ಸಂಸ್ಥೆ ಮೂಲಕ ಸಾಮಾಜಿಕ ಹೊಣೆಗಾರಿಕೆ ನಿಭಾಯಿಸಿದ ಸ್ವಾತಂತ್ರೃ ಪೂರ್ವದ ಏಕೈಕ ಶಿಕ್ಷಣ ಪ್ರೇಮಿ ರಾಮಚಂದ್ರ ಧೋಂಡೋ ಕುಲಕರ್ಣಿ ಎಂದರೆ ಅತಿಶಯೋಕ್ತಿಯಾಗದು ಎಂದು ಸಿಟಿಇ ಶಿಕ್ಷಣ ಸಂಸ್ಥೆ ನಿರ್ದೇಶಕ ಎಸ್.ಬಿ.ಕುಲಕರ್ಣಿ ಹೇಳಿದರು.
ಪಟ್ಟಣದ ಚಿಕ್ಕೋಡಿ ತಾಲೂಕು ಶಿಕ್ಷಣ ಸಂಸ್ಥೆಯಲ್ಲಿ ಈಚೆಗೆ ಹಮ್ಮಿಕೊಂಡಿದ್ದ ರಾಮಚಂದ್ರ ಧೋಂಡೋ ಕುಲಕರ್ಣಿ ಅವರ 91ನೇ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಮಾತನಾಡಿ, 1919ರಲ್ಲಿ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡಲು ಆರಂಭಿಸಿದ ರಾಮಚಂದ್ರ ಕಾರ್ಯ ಶ್ಲಾಘನೀಯ ಎಂದರು.
ಶಿಕ್ಷಣ ಸಂಸ್ಥೆಯ ಯುವ ಸಂಚಾಲಕ ಎಸ್.ಎಸ್.ಕುಲಕರ್ಣಿ ಮಾತನಾಡಿ, ವಿದ್ಯಾರ್ಥಿಗಳಿಗೆ ಶಿಕ್ಷಣ ಜತೆಗೆ ಸಂಸ್ಕೃತಿ, ಪರಂಪರೆ ಕುರಿತು ಮಾರ್ಗದರ್ಶನದ ಅವಶ್ಯಕತೆ ಇದೆ ಎಂದು ಹೇಳಿದರು.
ಬಾಂಬೆ ರಕ್ತದಾನ ಸಂಸ್ಥೆ ತಾಸಗಾಂವ ಆಶ್ರಯದಲ್ಲಿ ಜರುಗಿದ ರಕ್ತದಾನ ಶಿಬಿರದಲ್ಲಿ 100ಕ್ಕಿಂತ ಅಧಿಕ ಜನರು ರಕ್ತದಾನ ಮಾಡಿದರು.
ಸಂಸ್ಥೆ ಅಧ್ಯಕ್ಷರಾದ ಸಿ.ಬಿ.ಕುಲಕರ್ಣಿ, ಉಪಾಧ್ಯಕ್ಷ ವಿ.ಎಸ್.ಮಾಂಜರೇಕರ, ಕಾರ್ಯದರ್ಶಿ ಎ.ಎಸ್.ಕುಲಕರ್ಣಿ, ಜಂಟಿ ಕಾರ್ಯದರ್ಶಿ ಎಂ.ಎಸ್. ದೇಶಪಾಂಡೆ, ಯುವ ಉದ್ಯಮಿ ಸಂಕೇತ ಮಾಂಜರೇಕರ, ಹಿರಿಯ ನಿರ್ದೇಶಕ ಎಸ್.ಬಿ.ಕುಲಕರ್ಣಿ, ವಿ.ಪಿ.ಶೇಡಬಾಳ, ಎಸ್.ವಿ.ಅಡಕೆ, ಎಸ್.ಎಸ್.ಕುಲಕರ್ಣಿ, ವಿ.ಸಿ.ಕುಲಕರ್ಣಿ ಇತರರಿದ್ದರು. ಪಿ.ಆರ್.ಮನಗೂಳಿ ನಿರೂಪಿಸಿದರು.